3

ಮಹಿಳಾ ಸಂಜೀವಿನಿ ಯೋಜನೆಯಿಂದ ಮಹಿಳೆಯರಿಗೆ ಬ್ಯಾಂಕ್ ತೆರಯಬೇಕು : ಉದಯಕುಮಾರ್

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 18- ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಮಹಿಳಾ ಸಂಜೀವಿನಿ ಯೋಜನೆಯಿಂದ ಮಹಿಳೆಯರಿಗೆ ಮಹಿಳಾ ಬ್ಯಾಂಕ್ ತೆರೆಯಬೇಕು. ಆ ಮಹಿಳೆಯರಿಗೆ ಸಮುದಾಯ ಬಂಡವಾಳ ನೀಡಿ ಕೌಶಲ್ಯಗಳಿಗೆ ಉದ್ಯಮಿಗಳಿಗೆ ಸಂಜೀವಿನಿ ಯೋಜನೆ ಪ್ರತಿಯಬ್ಬರಿಗೂ ಪ್ರೋತ್ಸಾಹಿಸಲಾಗಿದೆ ಎಂದು ತಾಲೂಕು ಪಂಚಾಯಿತ ಸಂಜೀವಿನಿ ಯೋಜನೆಯ ಮೇಲ್ವಿಚಾರಕರಾದ ಉದಯ ಕುಮಾರ್ ರವರು ಹೇಳಿದರು.

ತಾಲೂಕಿನ ಮುಧೋಳ ಗ್ರಾಮದ ಶ್ರೀ ತ್ರೀಲಿಂಗೇಶ್ವರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಧನಲಕ್ಷ್ಮಿ ಮಹಿಳಾ ಸಂಜೀವಿನಿ ಗ್ರಾಮ ಪಂಚಾಯಿತ ಮಟ್ಟದ ಮಹಿಳಾ ಒಕ್ಕೂಟದ ೧೦ನೇ ವಾರ್ಷಿಕ ಸಾಮಾನ್ಯ ಸಭೆ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಈ ಮುಧೋಳ ಗ್ರಾಮದಲ್ಲಿ ೯೭೦ ಸದಸ್ಯರನ್ನು ಹೊಂದಿ ಒಂದೂವರೆ ಕೋಟಿ ಸಾಲವಿತರಿಸಿ ನೂರಾರು ಕುಟುಂಬಗಳನ್ನು ಆರ್ಥಿಕ ಸ್ವಾವಲಂಬಿಯಾಗಿಸಿರುವದು ಹೆಮ್ಮೆಯ ಸಾಧನೆಯಾಗಿರುತ್ತದೆ. ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಂಡು ಮಹಿಳಾ ಉದ್ಯಮಿಗಳಾಗುತ್ತಿದ್ದಾರೆ ಎಂದು ಹೇಳಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಸಂಜೀವಿನಿ ಯೋಜನೆಯ ವಲಯ ಮೇಲ್ವಿಚಾರಕರಾದ ಶರಣಪ್ಪ ಮದಿನೂರ್ ರವರು ಮಾತನಾಡುತ್ತಾ, ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದಡಿಯ ಮಹಿಳಾ ಕೌಶಲ್ಯ & ಸಂಘಗಳ ಸದಸ್ಯರುಗಳಿಗೆ ಸ್ವಯಂ ಉದ್ಯೋಗದ ತರಬೇತಿಗಳನ್ನು ನೀಡುತ್ತಿದೆ. ಹಾಗೂ ವಿವಿಧ ಇಲಾಖೆಗಳ ಯೋಜನೆಗಳನ್ನು ನಿಗಧಿತವಾಗಿ ಎಲ್ಲಾ ಸೌಲಭ್ಯಗಳನ್ನು ಈ ಸಂಜೀವಿನಿ ಯೋಜನೆಯ ನೀಡುತ್ತಿದೆ ಎಂದರು. ಸಂಜೀವಿನಿ ಸಮುದಾಯದ ಬಂಡವಾಳದ ನಿಧಿ ೨೦೧೫ ರಿಂದ ೬೭ ಲಕ್ಷ ೯೫ ಸಾವಿರ ಅನುದಾನ ಬಂದಿರುತ್ತದೆ, ೮೦ ಸ್ವಸಹಾಯ ಸಂಘಗಳು ರಚನೆಯಾಗಿರುತ್ತವೆ, ೬೧ ಸಾಲ ಪಡೆದ ಸ್ವಸಹಾಯ ಸಂಘಗಳು, ೧೮೩ ಸಾಲ ಪಡೆದ ಸದಸ್ಯರು ಇದ್ದಾರೆ, ಸಾಲದ ಮೊತ್ತ ೧ಕೋಟಿ ದಾಟಿದ್ದು, ಸಂಜೀವಿನಿ ಒಕ್ಕೂಟದ ಸೇವಾ ಶುಲ್ಕ ೩೦ ಲಕ್ಷ ಉಳಿತಾಯವಿರುತ್ತದೆ.

ಒಕ್ಕೂಟದ ಅಧ್ಯಕ್ಷರಾದ ಶ್ರೀ ಮತಿ ಮೆಹರುನಬಿ ನದಾಫ್ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಸವಜ್ಯೋತಿ ಶಾಲೆ ಅಧ್ಯಕ್ಷ ಶಿವಶರಣಪ್ಪ ಬಳಿಗಾರ ಅವರು ಮಹಿಳಾ ಗುಂಪು ಕೈಗಾರಿಕೆಗಳನ್ನು ಇನ್ನೂ ಗ್ರಾಮದಲ್ಲಿ ಹೆಚ್ಚಿಸುವ ಮೂಲಕ ದುಡಿಯುವ ಕೈಗಳನ್ನು ಕ್ರಿಯಾಶೀಲಗೊಳಿಸಬೇಕು ಹಾಗೂ ಮಹಿಳೆಯರೇ ಇಂದು ಕುಟುಂಬದ ಮುಖ್ಯಸ್ಥರೆಂದರೆ ತಪ್ಪಾಗಲಾರದೆಂದರು. ಇನ್ನೂರ್ವ ಮುಖ್ಯ ಅತಿಥಿ ಅಂಗನವಾಡಿಯ ಮೇಲ್ವಿಚಾರಕಿ ಚನ್ನಮ್ಮ ಶಾನ್ಬೋಗರ್ ಬಾಲ್ಯ ವಿವಾಹ ತಡೆಗಟ್ಟುವುದು ಮಕ್ಕಳಿಗೆ ಉತ್ತಮ ಶಿಕ್ಷಣ ಸಾಮಜಿಕ ವ್ಯವಸ್ಥೆ ಬಲಪಡಿಸಲು ತಿಳಿಸಿದರು. ಧನಲಕ್ಷ್ಮಿ ಮಹಿಳಾ ಸಂಜೀವಿನಿ ಒಕ್ಕೂಟದ ಸದಸ್ಯರು, ಎಂಬಿಕೆ, ಎಲ್‌ಸಿಆರ್‌ಪಿ, ಬಿಸಿ, ಕೃಷಿ ಸಖಿ, ಪಸುಸಖಿ, ಸಿಬ್ಬಂದಿಗಳು ಕೆಲಸ ಮಾಡುತ್ತಾರೆ, ಈರಮ್ಮ ಮಂಡ್ಲಿಗೇರಿ, ಹುಸೇನಬಿ, ಭೀಮವ್ವ ಇತರರು ಪಾಕ್ಗೊಂಡಿದ್ದರು. ಶಿಲ್ಪಾ ಉಳ್ಳಾಗಡ್ಡಿ ಸ್ವಾಗತಿಸಿದರು.

ವೀರಭದ್ರಪ್ಪ ನಿಡಗುಂದಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರಿದ್ದರು, ಅಂಗನವಾಡಿ, ಮತ್ತು ಆಶಾ ಕಾರ್ಯಕರ್ತೆಯರನ್ನು, ಮಹಿಳಾ ಒಕ್ಕೂಟದ ಸದಸ್ಯರನ್ನು ಸನ್ಮಾನಿಸಲಾಯಿತು. ಮಹಿಳಾ ಒಕ್ಕೂಟದ ಸರ್ವ ಸದಸ್ಯರು ಹಾಗೂ ಗ್ರಾಮದ ಸಾರ್ವಜನಿಕರು ಇತರರು ಭಾಗವಹಿಸಿದರು

Leave a Reply

Your email address will not be published. Required fields are marked *

error: Content is protected !!