ವಿಜ್ರಂಭಣೆಯಿ0ದ ಜರುಗಿದ ಶ್ರೀ ವಿಜಯದುರ್ಗಾ ದೇವಿ ಜಾತ್ರೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 18- ಪಟ್ಟಣದ ಶ್ರೀ ವಿಜಯದುರ್ಗಾ ದೇವಿ ದೇವಸ್ಥಾನದಲ್ಲಿ ಪುರಾಣ ಮಹಾಮಂಗಲೋತ್ಸವ ಅತಿ ವಿಜ್ರಂಭಣೆಯಿAದ ನೇರವೇರಿತು.
ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀ ವಿಜಯದುರ್ಗಾ ದೇವಿ ದೇವಸ್ಥಾನದಲ್ಲಿ ಪ್ರತಿ ನಿತ್ಯ ೧೫ ದಿನಗಳ ಕಾಲ ಐತಿಹಾಸಿಕ ಹಿನ್ನೆಲೆಯ ಶ್ರೀದೇವಿ ಪುರಾಣ-ಪ್ರವಚನ ಸಾಗಿಬಂತು.
ನವರಾತ್ರಿ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಶ್ರೀದೇವಿಗೆ ವಿವಿಧ ರೀತಿಯ ಹೂವಿನ. ಅಲಂಕಾರ.ವಿಶೇಷ ಪೂಜೆ. ಸಲ್ಲಿಸುವ ಮೂಲಕ ಭವ್ಯ ಮಂಟಪದ ಮೇಲೆ ತಾಯಿ ವಿಜಯ ದುರ್ಗಾದೇವಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಸಾಕಷ್ಟು ಮಹಿಳೆಯರಿಂದ ಕುಂಭ ಕಳಸ ಕನ್ನಡಿಯೂಂದಿಗೆ ಅಪಾರ ಕಲಾ ತಂಡಗಳು ಸಕಲ ವಿವಿಧ ವಾದ್ಯ ಮೇಳಗಳೊಂದಿಗೆ ಶ್ರೀ ವಿಜಯದುರ್ಗಾ ದೇವಿ ಮೂರ್ತಿ ಅಂಬಾರಿ ಮೆರವಣಿಗೆಯು ಪಟ್ಟಣದ ಪ್ರಮುಖ ರಾಜ ಬೀದಿಗಳ ಮೂಲಕ ಸಂಚರಿಸಿ ಪುನಾ: ದೇವಸ್ಥಾನಕ್ಕೆ ಬಂದು ತಲುಪಿತು.
ಅ.೩ ರಿಂದ ೧೫ ರವರೆಗು ಸಾಗಿ ಬಂದ ದೇವಿ ಪ್ರವಚನವನ್ನು ಸಂಕನೂರಿನ ಚಂದ್ರಶೇಖರ್ಯ್ಯ ಶಾಸ್ತ್ರಿಗಳು ಹಿರೇಮಠ ಇವರ ನಡೆಸಿಕೊಟ್ಟರು ಇವರಿಗೆ ಶರಣು ಕುಮಾರ್ ಬಂಡಿ ತಬಲ ಸಾತ್ ನೀಡಿದರು.
ಈ ವೇಳೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ವಿಜಯದುರ್ಗಾ ದೇವಿ ದರ್ಶನ ಪಡೆದುಕೊಂಡು ಪುನಿತರಾದರು ನಂತರ ಅನ್ನಸಂತರ್ಪಣೆ ಹೋಳಿಗೆ ಭೋಜನ ಸವಿದರು.
ದಸರಾ ನವರಾತ್ರಿ ಉತ್ಸವ ಅಂಗವಾಗಿ ನಡೆದ ಕಾರ್ಯಕ್ರಮವು ಅತಿ ಸಂಭ್ರಮ ಸಡಗರದಿಂದ ನೇರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಸಿದ್ದರಾಮೇಶ ಬೇಲೇರಿ, ಅಂದಾನಗೌಡ್ರ ಉಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಸಂಗಪ್ಪ ಕೊಪ್ಪಳ, ದಾನನಗೌಡ ತೂಂಡಿಹಾಳ, ಸುರೇಶಗೌಡ, ಶಿವನಗೌಡ್ರ, ವೀರನಗೌಡ, ಬನಪ್ಪಗೌಡ್ರು, ಶರಣಪ್ಪ ಅರಿಕೇರಿ, ಪಕೀರಪ್ಪ ಉಪ್ಪಾರ, ಎಸ್.ಕೆ.ದಾನಕೈ, ಸಂಗಪ್ಪ ಹಳ್ಳಿ, ವಿರುಪಾಕ್ಷಯ್ಯ ಗಂದಧ, ಬಸವರಾಜ ಅಧಿಕಾರಿ, ಕಳಕಪ್ಪ ತಳವಾರ, ಅಮರೇಶ ಹುಬ್ಬಳ್ಳಿ, ಶರಣಪ್ಪ ಅರಿಕೇರಿ, ಶಿವಕುಮಾರ, ದೇವಸ್ಥಾನ ಕಮಿಟಿಯ ಸರ್ವ ಸದಸ್ಯರು, ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು, ಹಿರಿಯರು, ಯುವಕರು ಭಾಗವಹಿಸಿದ್ದರು.
