
ರಾಷ್ಟ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದ ಅವಿನಾಶ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 21- ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ತೃತೀಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ಅವಿನಾಶ್ ಇವರು ಅ. 17 ರಂದು ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿ ಗುಂಟೂರು ಆಂಧ್ರಪ್ರದೇಶದಲ್ಲಿ ನಡೆದ 35ನೇ ದಕ್ಷಿಣ ವಲಯ ರಾಷ್ಟ ಮಟ್ಟದ ಜೂನಿಯರ್ ಅಥಲೇಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಸರಪಳಿ ಗುಂಡು ಎಸೆತದಲ್ಲಿ 50.21mtr ದೂರ ಎಸೆದು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
ಬಾಲಚ0ದ್ರ ಸಾಕೆ ಇವರ ಬಳಿ ತರಬೇತಿ ಪಡೆದುಕೊಂಡಿದ್ದರು.
ಈ ನಿಮಿತ್ಯವಾಗಿ ಪ್ರಾಚಾರ್ಯ ಡಾ.ಡಿ.ಎಚ್ ನಾಯ್ಕ, ದೈಹಿಕ ನಿರ್ದೇಶಕ ಮಂಜುನಾಥ ಅರೇಂಟನೂರ್, ಪ್ರಾಧ್ಯಾಪಕ ಶಿವನಾಥ್ ಇ.ಜಿ, ವಿಜಯ ತೋಟದ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.