4

ಹಳ್ಳಿಗಳಲ್ಲಿನ ನಾಟಕಕ್ಕೆ ಪ್ರೋತ್ಸಾಹಿಸುವ ಕೆಲಸವಾಗಲಿ : ಆದೇಶ ರೊಟ್ಟಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 22- ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ, ದಸರಾ, ದೀಪಾವಳಿ ಸೇರಿ ನಾನಾ ಹಬ್ಬಗಳ ನಿಮಿತ್ತ ಹಮ್ಮಿಕೊಳ್ಳುವ ರಂಗಭೂಮಿ ಕಲೆಗಳನ್ನು ಉಳಿಸಿ ಬೆಳೆಸುವ ಮೂಲಕ ಪ್ರೋತ್ಸಾಹಿಸುವ ಕಾರ್ಯ ವಾಗಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಆದೇಶ ಬಿ. ರೊಟ್ಟಿ ಹೇಳಿದರು.

ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ಆರಾಧ್ಯ ದೇವತೆ ಶ್ರೀ ರಾಜ ರಾಜೇಶ್ವರಿ ಜಾತ್ರೆ ನಿಮಿತ್ತ ರಾಜರಾಜೇಶ್ವರಿ ಯುವ ಜನ ವಿಕಾಸ ತರುಣ ನಾಟ್ಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಗಂಡು ಭೂಮಿಯಲ್ಲಿ ಪುಂಡ ಹುಲಿ ಅರ್ಥಾತ್: ಕಲಿಯುಗದ ಕ್ರಾಂತಿ ಎಂಬ ಸುಂದರ ಸಾಮಾಜಿಕ ನಾಟಕದಲ್ಲಿ ಭಾಗವಹಿಸಿ ಶುಕ್ರವಾರ ರಾತ್ರಿ ಮಾತನಾಡಿದರು.

ಅನಾದಿ ಕಾಲದಿಂದಲೂ ಕುರುಕ್ಷೇತ್ರ, ಮಹಾ ಭಾರತ, ಪೌರಾಣಿಕ, ರಂಗಭೂಮಿ ಸೇರಿದಂತೆ ಆಯಾ ಕಾಲ ಘಟ್ಟದಲ್ಲಿ ಜನರಿಗೆ ಪರಿವರ್ತನೆ ತರಲು ಸಮಾಜದಲ್ಲಿ ನಡೆಯುತ್ತಿರುವ ಆಗು ಹೋಗು ಮನವರಿಕೆ ಮಾಡಲು ಇಂತಹ ನಾಟಕಗಳಿಂದ ಬದಲಾವಣೆ ತರಲು ಸಾಧ್ಯ ಹೀಗಾಗಿ ಹಳ್ಳಿಯಲ್ಲಿ ಜಾತ್ರೆ ಪ್ರಯುಕ್ತ ನಡೆಯುವ ನಾಟಕಗಳಿಗೆ ಸದಾ ಪ್ರೋತ್ಸಾಹಿಸುವ ಕೆಲಸ ನಡೆಯಬೇಕು. ಕಲಾವಿದರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.

ಬಿಜೆಪಿ ಧುರೀಣ ಅಯ್ಯನಗೌಡ ಆರ್.ಕೆಂಚಮ್ಮನವರ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಾಟಕಗಳನ್ನು ನಡೆಯುತ್ತಿದ್ದು ಜನರಿಗೆ ಮನ ರಂಜಿಸುವ ಮೂಲಕ ಪರಿವರ್ತನೆಯೊಂದಿಗೆ ಬಿಂಬಿಸುವ ರಂಗಭೂಮಿ ಸಹಕರಿಸಬೇಕು ಎಂದರು.

ಗ್ರಾಮದ ಕೇಶವಾನಂದ ಸ್ವಾಮೀಜಿ, ಗವಿಸಿದ್ಧಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಬಸವರಾಜ ಹಿರೇಮನಿ, ಮರಿಯಪ್ಪ ದಳಪತಿ, ವೀರಭದ್ರಪ್ಪ ಶೆಟ್ಟರ್, ಕುಂಟೆಪ್ಪ ಹನಮಗೌಡ ಗೌಡ್ರ, ವಿರುಪಾಕ್ಷಪ್ಪ ದೇವಲ್, ಶರಣಪ್ಪ ಗುಡೂರ, ಮುದುಕಪ್ಪ ವಂದಾಲಿ, ಮಂಜುನಾಥ ರೊಟ್ಟಿ, ಗ್ಯಾನಪ್ಪ ಬುಡಕುಂಟಿ ಹಾಗೂ ಕಲಾವಿದರು, ಹಿರಿಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!