ಬ್ರಿಟಿಷರ ವಿರುದ್ಧ ಖಡ್ಗ ಝಳಪಿಸಿ ವಿಜಯ ಪತಾಕೆ ಹಾರಿಸಿದ ಚೆನ್ನಮ್ಮ : ಹೆಚ್.ವಿಶ್ವನಾಥ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 23- ತಾಲೂಕು ಆಡಳಿತದಿಂದ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ನವರ ೨೪೬ನೇ ಜನ್ಮದಿನೋತ್ಸವ ವನ್ನು ಆಚರಿಸಲಾಯಿತು.
ತಹಶೀಲ್ದಾರ್ ಹೆಚ್ ವಿಶ್ವನಾಥ ಅವರು ರಾಣಿ ಚನ್ನಮ್ಮನವರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪಾ ಅರ್ಪಿಸಿ ನಮನ ಸಲ್ಲಿಸಿ ಗೌರವಿಸಿ ಸ್ಮರಿಸಿ ಮಾತನಾಡಿ, ಬ್ರಿಟಿಷರ ಸೇನೆ ವಿರುದ್ಧ ಖಡ್ಗ ಝಳಪಿಸಿ ವಿಜಯದ ಪತಾಕೆ ಹಾರಿಸಿದ ಕಿತ್ತೂರು ರಾಣಿ ಚೆನ್ನಮ್ಮ ವೀರ ಮಹಿಳೆ ಎಂದರು.
ಗ್ರೇಡ್-೨ ತಹಶೀಲ್ದಾರ್ ಕುಮಾರಿ ಸತ್ಯಮ್ಮ, ಸಿದ್ದಾರ್ಥ ಕಾರಂಜಿ, ರಾಘವೇಂದ್ರ ಶೇಖರ್, ಮೊಹಮ್ಮದ್ ನೌಶಾದ್ ಅಲಿ, ಅಬ್ದುಲ್ ನಬಿ, ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
