
ಯೋಗ, ವ್ಯಾಯಾಮ, ಧ್ಯಾನ ಮಾಡಿದರೆ ಮಾನಸಿಕ ಸಮಸ್ಯೆಗಳಿರುವುದಿಲ್ಲ : ಯು.ವೆಂಕೋಬ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 23- ನಗರದ ಶ್ರೀಮತಿ ಬಿಇ ಹನುಮಂತಮ್ಮ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ವಕೀಲರ ಸಂಘ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಕೀಲರ ಸಂಘದ ತಾಲೂಕು ಅಧ್ಯಕ್ಷ ಯು.ವೆಂಕೋಬ ಎನ್.ಅಬ್ದುಲ್ ಸಾಬ್ ರಾರಾವಿ ಪ್ಯಾನಲ್ ವಕೀಲರು ಮಾತನಾಡಿ ಯೋಗ ವ್ಯಾಯಾಮ ಧ್ಯಾನ ಮಾಡುತ್ತಿರಿ ಯಾವುದೇ ಮಾನಸಿಕ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ ಎಂದರು.
ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮಾನಸಿಕ ಆರೋಗ್ಯವು ಅಷ್ಟೇ ಪ್ರಮುಖವಾಗಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಕಾಸಿಂ ಆರೋಗ್ಯ ಎಂದರೇನು ಮಾನಸಿಕ ಅನಾರೋಗ್ಯಕ್ಕೆ ಕಾರಣಗಳೇನು ಅದರ ಲಕ್ಷಣಗಳು ಸೂಕ್ತ ಆಪ್ತ ಸಮಾಲೋಚನೆ ಸಲಹೆ ಮತ್ತು ಚಿಕಿತ್ಸೆ ಹಾಗೂ ೧೪೪೧೬ ಸಹಾಯವಾಣಿಗೆ ಕರೆ ಮಾಡಿ ಮಾನಸಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಹಾಗೆಯೇ ಪ್ರತಿ ತಿಂಗಳ ಮೊದಲನೇ ಮಂಗಳವಾರ ಬಳ್ಳಾರಿ ಜಿಲ್ಲೆಯ ಖ್ಯಾತ ಮಾನಸಿಕ ತಜ್ಞರಾದ ರೋಹನ್ ವನಗುಂದಿ ಯವರ ಬಳಿ ಚಿಕಿತ್ಸೆ ಪಡೆಯಲು ತಿಳಿಸಲಾಯಿತು
ಈ ಸಂದರ್ಭದಲ್ಲಿ ಬಸನಗೌಡ ಜಿ ಪ್ರಾಂಶುಪಾಲರು ಅಧ್ಯಕ್ಷೀಯ ನುಡಿಗಳ ನಾಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ತಾಲೂಕು ಅಧ್ಯಕ್ಷ ಯು.ವೆಂಕೋಬ, ಎನ್.ಅಬ್ದುಲ್ ಸಾಬ್ ರಾರಾವಿ, ಮಲ್ಲಿಗೌಡ, ವೆಂಕಟೇಶ ನಾಯಕ್, ಮಹೇಶ್ ಹಾಗೂ ಇತರೆ ಪ್ಯಾನೆಲ್ ವಕೀಲರು ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು.