7

ವೀರರಾಣಿ ಚೆನ್ನಮ್ಮ ಈ ನಾಡಿಗೆ ನೀಡಿದ ಕೊಡುಗೆ ಅಪಾರ : ಬಸಲಿಂಗಪ್ಪ ಭೋತೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 23- ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರು ಈ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ.ಅವರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುಬೇಕು. ಎಂದು ಪಂಚಮಸಾಲಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಭೋತೆ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯಿತಿ ಮತ್ತು ಪಂಚಮಸಾಲಿ ಸಮಾಜ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜೋತಿ ಬೆಳಗಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಿತ್ತೂರು ಚನ್ನಮ್ಮ ಅವರು ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿದ್ದರು ಬ್ರಿಟಿಷರ ಹುಟ್ಟು ಅಡಗಿಸಿದ ವೀರಮಾತೆ ಕಿತ್ತೂರು ಚೆನ್ನಮ್ಮ ಅವರು ದೇಶಕ್ಕಾಗಿ ಹೋರಾಡಿ ಸ್ವಾತಂತ್ರವನ್ನು ತಂದುಕೊಟ್ಟವರು ಸಾಹಸ, ಶೌರ್ಯ, ದೇಶಕ್ಕಾಗಿ, ಸಮಾಜಕ್ಕಾಗಿ ಸಾಕಷ್ಟು ಶ್ರಮೀಸಿದ್ದಾರೆ. ಈಗಿನ ಯುವ ಪೀಳಿಗೆಯು ಚೆನ್ನಮ್ಮ ಅವರ ಜೀವನ ಚರಿತ್ರೆ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳವದು ಅತ್ಯಅವಶ್ಯವಾಗಿದೆ ಎಂದು ಬಸಲಿಂಗಪ್ಪ ಭೋತೆ ಹೇಳಿದರು.
ವೀರಣ್ಣ ಹುಬ್ಬಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ ಉಪನ್ಯಾಸ ನೀಡಿದರು.

ಇದಕ್ಕೂ ಮೊದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಮತ್ತು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಮತ್ತು ಸಮಾಜದ ಮುಖಂಡರು ಸೇರಿ ಬೆಳ್ಳಿಗೆ ಕಿತ್ತೂರು ರಾಣಿ ಚೆನ್ನಮ್ಮ ವೈತ್ತದಲ್ಲಿ ವೀರಮಾತೆ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ, ಚಾಲನೆ ನೀಡಿದರು.

ಕಿತ್ತೂರು ಚನ್ನಮ್ಮ ಭಾವಚಿತ್ರ ಮೆರವಣಿಗೆಯಲ್ಲಿ ಸಾಕಷ್ಟು ಮಹಿಳೆಯರಿಂದ ಕುಂಭ, ಕಳಸ, ಕನ್ನಡಿಯೂಂದಿಗೆ, ಗೊಂಬೆ ಕುಣಿತ, ಸಕಲ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ರಾಜಬೀದಿಗಳ ವೀರಮಾತೆ ಚನ್ನಮ್ಮನವರ ಭಾವಚಿತ್ರ ಮೆರವಣಿಗೆಯು ವಿಜ್ರಂಭಣೆಯಿ0ದ ಸಂಚರಿಸುತ್ತಾ ಪುನಃ ವೇದಿಕೆ ಬಂದು ತಲುಪಿತು.

ತಾಲೂಕಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಮಾಜದ ಮುಖಂಡರಿಗೆ ಸನ್ಮಾನ ಮಾಡಿ ಗೌರವಿಸಿದರು.

ಪಂಚಮಸಾಲಿ ಸಮಾಜದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಭೂತೆ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಕಳಕನಗೌಡ ಪಾಟೀಲ್ ಕಲ್ಲೂರು, ಸಮಾಜದ ತಾಲೂಕಾಧ್ಯಕ್ಷ ಕೆ.ಜಿ.ಪಲ್ಲೇದ, ಪಂಪ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಉಪಾಧ್ಯಕ್ಷ ವಿಜೇಯಲಕ್ಷ್ಮಿ ಬೆಲೇರಿ, ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಕಳಕನಗೌಡ ಕಲ್ಲೂರ, ತಾಲೂಕ ಶಿಕ್ಷಣಧಿಕಾರಿ ಸೋಮಶೇಖರ ಪಾಟೀಲ್, ಪಂ.ಪ ಮುಖ್ಯಾಧಿಕಾರಿ ನಾಗೇಶ್, ಸದಸ್ಯ ಹನುಮಂತ ಬಜಂತ್ರಿ, ರಿಯಾಜ್ ಖಾಜಿ, ಅಶೋಕ್ ಅರಕೇರಿ, ಬಸಲಿಂಗಪ್ಪ ಕೂತ್ಲ, ರೇವಣೆಪ್ಪ ಹಿರೇಕುರಬರ, ಸಮಾಜದ ಮುಖಂಡರು ಸಿ.ಎಚ್.ಪಾಟೀಲ್, ವೀರಣ್ಣ ಹುಬ್ಬಳ್ಳಿ, ರಾಜು ನಿಂಗೊಜಿ, ಅಮರೇಶ ಹುಬ್ಬಳ್ಳಿ, ಪತ್ರಕರ್ತ ವೀರಣ್ಣ ತೋಟದ, ನೀಲಪ್ಪ ಖಾನಾವಳಿ ವಿರೇಶ ಸ್ಟಾಂಪೀನ, ಸ.ಶರಣಪ್ಪ ಪಾಟೀಲ್, ದೂಡಬಸಪ್ಪ ಹಕಾರಿ, ಸಂತೋಷ ಬಂಡ್ರಿ, ಮುತ್ತಣ್ಣ ಆದಿ, ಆನಂದ್ ಉಳ್ಳಾಗಡ್ಡಿ, ಪ್ರಕಾಶ್ ಬೆಲೆರಿ, ಎಸ್.ಎನ್.ಶ್ಯಾಗೋಟಿ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!