ರೈತರು ತಮ್ಮ ಮೊಬೈಲ್ ಸ್ಕಾö್ಯನ ಮಾಡಿ ಕಾಮಗಾರಿ ಅರ್ಜಿ ಸಲ್ಲಿಸಿ : ಮೂಲಿಮನಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 24- ರೈತರು ತಮ್ಮ ಮೊಬೈಲ್ನಲ್ಲಿ ಸ್ಕಾö್ಯನ್ ಮಾಡಿ ಕಾಮಗಾರಿ ಅರ್ಜಿ ಸಲಿಸಬೇಕು.ಮತ್ತು ಸ್ವ-ಸಹಾಯ ಸಂಘದ ಮಹಿಳೆಯರು ತಮ್ಮ ವೈಯಕ್ತಿಕ ಕಾಮಗಾರಿಗಳ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರಭದ್ರಗೌಡ್ರ ಮೂಲಿಮನಿ ಹೇಳಿದರು.
ತಾಲೂಕಿನ ಮುದೋಳ ಗ್ರಾಮ ಪಂಚಾಯತಿಯಲ್ಲಿ ೨೦೨೫-೨೬ ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾಯೋಜನೆ ಸಿದ್ದಪಡಿಸುವ ಸಲುವಾಗಿ ಐಇಸಿ ಕಾರ್ಯಕ್ರಮದಡಿಯಲ್ಲಿ ಮನೆ ಮನೆ ಜಾಗೃತಿ ಜಾಥಾ ಹಾಗೂ ರೈತರಿಂದ ಕಾಮಗಾರಿಗಳ ಬೇಡಿಕೆ ಅರ್ಜಿ ಸ್ವೀಕರಿಸಲಾಯಿತು.
ಜಾಥಾದಲ್ಲಿ ತಾಲೂಕು ಪಂಚಾಯತಿ ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ಅವರು, ನರೇಗಾ ಯೋಜನೆಯಡಿ ಡಿಜಿಟಲ್ ಆನ್ಲೈನ್ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು. ಕ್ಯೂಆರ್ ಕೋಡ್ ಮೂಲಕ ತಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಗ್ರಾಮ ಪಂಚಾಯತಿ ಪಿಡಿಓ. ವೀರಭದ್ರಗೌಡ ಮೂಲಿಮನಿ ಮಾತನಾಡಿ ಉದ್ಯೋಗ ಖಾತ್ರಿ ನೆಡಿಗೆ ಸಬಲತೆ ಕಡಗೇ ಸ್ವ-ಸಹಾಯ ಸಂಘದ ಮಹಿಳೆಯರು ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆದುಕೂಳ್ಶುವದರ ಜೊತೆಗೆ ಆರ್ಥಿಕವಾಗಿ ಸಬಲರಾಗಬೇಕು ಸರಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ಅದಕ್ಕಾಗಿ ಇಂದೆ ಎಲ್ಲರೂ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಹಾಂತೇಶ ಬಾಳಿಕಾಯಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಮುಂದಿನ ವರ್ಷದ ಕ್ರಿಯಾಯೋಜನೆಯಲ್ಲಿ ತಮ್ಮ ಹೆಸರು ಸೇರಿಸಲಾಗುವುದು ಎಂದು ತಿಳಿಸಿದರು.
ಈ ಜಾಥಾದಲ್ಲಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಮೈಲಾರಿ, ಬಿಎಫ್ಟಿ ಗುರುಬಸಯ್ಯ, ಬಸವರಾಜ, ಕರಿಶಿದಪ್ಪ ತಮ್ಮಿನಾಳ ಮತ್ತು ಗ್ರಾ.ಪಂ ಸಿಬ್ಬಂದಿಗಳು, ಸ್ವ-ಸಹಾಯ ಸಂಘದ ಮಹಿಳೆಯರು, ಗ್ರಾಮದ ಹಿರಿಯರು ಸಾರ್ವಜನಿಕರು ಮತ್ತು ಇತರರು ಭಾಗವಹಿಸಿದ್ದರು.
