1

ಸಂಸ್ಕೃತಿಯನ್ನು ಬೆಳಿಸಲು ಪೋಷಕರ ಪಾತ್ರ ಅನನ್ಯ : ಅಲ್ಲಂ ಪ್ರಶಾಂತ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 4- ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಅನನ್ಯ ಎಂದು ಜಿಲ್ಲಾ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷರು ಅಲ್ಲಂ ಪ್ರಶಾಂತ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ವತಿಇಂದ ಹೊಂಗಿರಣ ರಂಗಮAದಿರ ದಲ್ಲಿ ಏರ್ಪಡಿಸಿದ ರಾಜ್ಯೋತ್ಸವ ಸಾಂಸ್ಕ್ರತಿಕ ಸಂಭ್ರಮ ೨೦೨೪ ಕಾರ್ಯಕ್ರಮದಲ್ಲಿ ಪ್ರಶಾಂತ್ ಮತಾನಾಡಿದರು.

ನಮ್ಮ ಸಂಸ್ಕೃತಿ ಉಳಿಸಲು ಅಸೋಸಿಯೇಷನ್ ಒಳ್ಳೆ ಕೆಲಸ ಮಾಡುತಿದೆ ಎಂದರು. ಕಲೆಗಳಿಂದ ಉತ್ತಮ ಸಂಪ್ರದಾಯ ನಿರ್ಮಾಣ ಆಗುತ್ತೆ ಎಂದು ಹೇಳಿದರು.

ಮೇಯರ್ ಮುಲ್ಲಂಗಿ ನಂದೀಶ್ ಮತಾನಾಡುತ್ತ ನಮ್ಮ ಸಹಕಾರ ಅಸೋಸಿಯೇಷನ್ಗೆ ಎಂದಿಗೂ ಇರುತ್ತೆದೆ,, ಸಾಂಸ್ಕೃತಿಕ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತಿ ರುವುದು ಅಭಿನಂದನೀಯ ಎಂದರು.

ಈ ಸಂದರ್ಭದಲ್ಲಿ ಮಲ್ಲಂಗಿ ನಂದೀಶ್, ಅಲ್ಲಂ ಪ್ರಶಾಂತ್, ರಾಮಚಂದ್ರ, ಟಿ.ನಾಗಭೂಷಣ್, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ರಂಗಾರೆಡ್ಡಿ ತಂಡದಿAದ ಸುಗಮ ಸಂಗೀತ, ರಾಮಚಂದ್ರ ತಂಡದಿAದ ಯಾರಿಗೆಬೇಕು ನಿನ್ನ ಕವಿತೆ ಹಾಸ್ಯ ನಾಟಕ, ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಬಿಸಿಎಎ ಅದ್ಯಕ್ಷರು ಬ್ರಹ್ಮಯ್ಶ ಸ್ವಾಗತಿಸಿದರು. ನಾಗಭೂಷಣ್ ನಿರೂಪಿಸಿದರು. ಮಲ್ಲೇಶ್ ವಂದಿಸಿದರು. ಕಲಾವಿದರನ್ನು ಪ್ರಶಂಸೆ ಪತ್ರ ನೀಡಿ ಸನ್ಮಾನಿಸಿದರು.

ಕಾರ್ಯ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಯಶ್ವಂತ್ ರಾಜ್, ಸಹ ಕಾರ್ಯದರ್ಶಿ ಪ್ರಕಾಶ್, ರಾಮಮೂರ್ತಿ, ಶೇಶಾರೆಡ್ಡಿ, ಟಿಹೆಚ್ ಎಂ. ಬಸವರಾಜ್, ಮಂಜು, ಚಂದ್ರಶೇಕರ್ ಸ್ವಾಮಿ, ಶ್ರೀನಿವಾಸ, ಭಿಮಿನೇನಿ ಪ್ರಸಾದ್, ಬಾಸ್ಕೆರ ನಾಯುಡು, ರ‍್ರಿಸ್ವಾಮಿ, ಮಂಜುನಾಥ್, ಶಿವಾಜಿ ರಾವ್ ತಿವಾರಿ, ವೀಣಾ ಕಲಾವಿದರೂ ಮುಂತಾದವರೂ ಇದ್ದರು.

Leave a Reply

Your email address will not be published. Required fields are marked *

error: Content is protected !!