
ಕಾಂಗ್ರೆಸ್ ಪಾಲನೆ ನಿಜಾಮರ ಆಡಳಿತವನ್ನು ನೆನಪಿಸುತ್ತದೆ : ವಿಜಯೇಂದ್ರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 4- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿಜಾಮರ ಆಡಳಿತವನ್ನು ನೆನಪಿಸುತ್ತಿದೆ, ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಗ್ರಹ ವ್ಯಕ್ತ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾತನಾಡುತ್ತಾ, ಸುಳ್ಳು ಭರವಸೆಗಳಿಂದ ಅಧಿಕಾರವನ್ನು ಹಿಡಿದ ಕಾಂಗ್ರೆಸ್ ಅವು ಅನುಷ್ಠಾನಗೊಳಿಸಲು ಸಾಧ್ಯವಾಗದೆ ಒದ್ದಾಡುತ್ತಿರುವುದಾಗಿ, ಮಠಗಳು ಮತ್ತು ದೇವಾಲಯಗಳು ಇದರ ಹಿಂದು ಸಂಸ್ಥೆಗಳ ಆಸ್ತಿಗಳ ಮೇಲೆ ಆಕ್ರಮಣಗಳು, ರಾಜ್ಯದ್ಯಂತ ನಡೆಯುತ್ತಿರುವುದು ಹಿಂದಕ್ಕೆ ನಿಜಾಮರ ಆಡಳಿತವನ್ನು ನೆನಪಿಸುತ್ತಿದೆ ಎಂದರು.
ಇ0ಥ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಜನರು ಮುಂದಾಗಬೇಕೆ0ದರು. ವಖ್ಫ್ ಬೋರ್ಡ್ ಮುಖಾಂತರ ಹಿಂದುಗಳ ಆಸ್ತಿಗಳನ್ನು ಕವಳಿಸುತ್ತಿರುವುದು ಎಷ್ಟು ಸರಿ ಎಂದರು.
ಬಡ ರೈತರು, ದಲಿತರು, ಮಠಮಾನ್ಯಗಳು ಲೆಕ್ಕಿಸದೆ ಪಹಣಿಗಳನ್ನು ಬದಲಾಯಿಸುತ್ತಿರುವುದೆಂದು ಇಂತಹ ಸರ್ಕಾರಕ್ಕೆ ತಿರಸ್ಕಾರ ಮಾಡಬೇಕೆಂದರು. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ೧೫ ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಕೊಳ್ಳೆ ಹೊಡೆಯುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಈ ಕೆಲಸಕ್ಕೆ ದೇಶದ್ರೋಹಿ ಜಮೀರ್ ಅಹ್ಮದ್ ಮೂಲಕ ನಡೆಯುತ್ತಿರುವುದಾಗಿ ತಿಳಿಸಿದರು. ರೈತ ವಿರೋಧಿಯ ಆಗಿರುವ ಡಿಸಿಗಳನ್ನು ಬೆದರಿಸಿ ರೈತರ ಜಮೀನು ಒಕ್ಕಲಿಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಮಾಜಿ ಶಾಸಕ, ಗಾಲಿ ಸೋಮಶೇಖರ್ ರೆಡ್ಡಿ, ಮಾಜಿ ಸಂಸದ ಸಣ್ಣಪಕ್ಕೀರಪ್ಪ, ಬಿಜೆಪಿ ಮುಖಂಡ ಡಾ.ಮಹಿಪಾಲ್, ಕೆ.ರಾಮಲಿಂಗಪ್ಪ ಗಣಪಲ್, ಇನಾಥರೆಡ್ಡಿ, ಎಸ್.ಗುರುಲಿಂಗನಗೌಡ, ಎಚ್.ಹನುಮಂತಪ್ಪ, ಪಾರ್ವತಿ ಇಂದುಶೇಖರ್, ಸುರೇಖಾ ಮಲ್ಲನಗೌಡ, ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್‌ಕರ್, ಜೊತೆಗೆ ಹಲವಾರು ಮಂದಿ ಬಿಜೆಪಿ ನಾಯಕರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ಸಂದರ್ಭವಾಗಿ ಬಿಜೆಪಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರ‍್ಯಾಲಿಯಲ್ಲಿ ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.