ಕ್ಯೂಆರ್ ಕೋಡ್ ಸ್ಕಾö್ಯನ್ ಮಾಡಿ ನರೇಗಾ ಕಾಮಗಾರಿ ಅನುಷ್ಠಾನ ಮಾಡಿ : ಶರಣಪ್ಪ ಕೆಳಗಿನಮನಿ
ಕರುನಾಡ ಬೆಳಗು ಸುದ್ದಿ
ಕುಕನೂರು, 4- ತಾಲೂಕಿನ ತಳಕಲ್ ಗ್ರಾಮ ೨೦೨೫-೨೬ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಕ್ರಿಯಾ ಯೋಜನೆ ತಯಾರಿಯ ಕುರಿತು ಗ್ರಾಮ ಸಭೆಯನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ತಾಲೂಕ ಪಂಚಾಯತ ಕುಕನೂರ ಅವರು ಮಾತನಾಡಿ, ನರೇಗಾ ಯೋಜನೆಯಡಿ ಪ್ರತೀ ವರ್ಷದಂತೆ ಈ ವರ್ಷವೂ ಸಹ ಕ್ರಿಯಾ ಯೋಜನೆ ತಯಾರಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬದಲಾಗುತ್ತಿರುವ ಕಾಲದಲ್ಲಿ ಯೋಜನೆ ಪ್ರತಿಯೋಬ್ಬರಿಗೂ ತಲುಪಬೇಕು ಎನ್ನುವ ದೃಷ್ಠಿಯಿಂದ ಕ್ಯೂಆರ್ ಕೋಡ್ ಸ್ಕಾö್ಯನ್ ಮಾಡಿ ಕಾಮಗಾರಿ ಸೇರಿಸಲು ಅವಕಾಶ ನೀಡಲಾಗಿದೆ ಇದರಿಂದಾಗಿ ಪ್ರತಿಯೋಬ್ಬರು ತಮ್ಮ ಸ್ವಂತ ಮೋಬೈಲ್ ನಲ್ಲಿಯೇ ಕಾಮಗಾರಿ ಬೇಡಿಕೆ ಸಲ್ಲಿಸಬಹುದು ಎಂದರು.
ವಿಶೇಷವಾಗಿ ಸಾಲು ಬದುಗಳು, ದಿಣ್ಣೆಯಿಂದ ತಗ್ಗಿನಡೆಗೆ ಬದುಗಳನ್ನು ನಿರ್ಮಾಣ ಮಾಡುವುದರಿಂದ ಮಣ್ಣಿನ ಸವಕಳಿ ತಡೆಗಟ್ಟಿ, ತೇವಾಂಶ ಹೆಚ್ಚಿಸಿ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.
ತೋಟಗಾರಿಗೆ ಅಧಿಕಾರಿ ನಿತೀಶ್ ಕುಮಾರ ಮಾತನಾಡಿ, ಹನಿ ನೀರಾವರಿ ಸಂಭAದಿಸಿದAತೆ, ಪ್ರಧಾನ ಮಂತ್ರಿ ಕ್ರಿಷಿ ಸಿಂಚಾಯಿ ಯೋಜನೆಯಿಂದ ಹನಿ ನೀರಾವರಿ ಕೃಷಿಕರು ಅರ್ಜಿ ಸಲ್ಲಿಸಬಹುದು ಎಂದರು.
ಮಕ್ಕಳ ಅಭಿವೃದ್ಧಿ ಇಲಾಕೆ ಮಾತೃ ಪೂರ್ಣ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಕಾರ್ಯಕ್ರಮ, ಬಾಣಂತಿಯರಿಗೆ ಮಕ್ಕಳಿಗೆ, ಬಿಸಿ ಯೂಟ ನೀಡಿಕೆ ಶಾಲಾ ಪೂರ್ವ ಶಿಕ್ಷಣ ಕೆಕೆಆರ್ ಡಿಬಿ ಯಡಿಯಲ್ಲಿ ಶಾಲಾ ಪೂರ್ವ ಶಿಕ್ಷಣ ನೀಡಲಾಗುತ್ತಿದೆ. ಭಾಗ್ಯ ಲಕ್ಷ್ಮಿ ಯೋಜನೆ, ಸುಕನ್ಯ ಸಂಮೃದ್ಧಿ ಯೋಜನೆ. ಗೃಹ ಲಕ್ಷ್ಮೀ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಜಯಲಕ್ಷ್ಮಿ ಮೇಣಸಿನಕಾಯಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಜಹಿರಾ ಬೇಗಂ, ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಸದಸ್ಯರು ಆದ ಸಿರಾಜುದ್ಧಿನ್ ಕೊಪ್ಪಳ, ಹಾಗೂ ರೇಣುಕಾ ಮಡಿವಾಳರ್, ಕವಿತಾ ಚಲುವಾದಿ, ರಾಜೇಶ್ವರಿ ಚಲುವಾದಿ, ಪ್ರಮುಖ ಎಚ್.ಕೆ.ಹೈತಾಪೂರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೀರನಗೌಡ ಚೆನ್ನವೀರಗೌಡ್ರ, ಕಾರ್ಯದರ್ಶಿ ಆದಬಸಯ್ಯ ಹಿರೇಮಠ, ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ರಾಜೀವ್ ಗಾಂಧಿ ಫೇಲೋಸಿಪ್ ಅಧಿಕಾರಿ ಸೀಮಾ ಕೌಸರ್, ಗ್ರಾ.ಪಂ ಸಿಬ್ಬಂದಿಗಳು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕಾಯಕಬಂಧುಗಳು, ಗ್ರಾಮಸ್ಥರು ಇದ್ದರು.
