4

ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ : ಕೆ.ಸಿ.ಕೊಂಡಯ್ಯ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 5- ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ, ಸ್ವಾರ್ಥಪರ ರಾಜಕೀಯಕ್ಕಾಗಿ ನಿಂತ ಬಿಜೆಪಿ ಪಕ್ಷವನ್ನು ಸೋಲಿಸಬೇಕೆಂದು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದರು.

ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸಂಡೂರಿಗೆ ಬಂದು ಪ್ರತ್ಯೇಕವಾದ ಮಹತ್ವ ಇದೆ ಎಂದು, ಹಿಂದಕ್ಕೆ ಈ ಕ್ಷೇತ್ರದಿಂದ ಪ್ರಾತಿನಿತ್ಯವಹಿಸಿದ ಘೋರ್ಪಡೆ ಕುಟುಂಬದ ರಾಜಮನೆ ತನ್ನದವರು ಆಳಿದ ಕ್ಷೇತ್ರ, ಎಂಟು ಹಾಗೂ ೧೦ನೇ ಶತಮಾನದಲ್ಲಿ ಅನೇಕ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಹಜವಾಗಿಯೇ ನೈಸರ್ಗಿಕ ಸಂಪತ್ತು ಖನಿಜ ಮತ್ತು ಪ್ರಕೃತಿಯ ಸಂಪತ್ತು ಇಂದಿಗೂ ಹೊಂದಿದೆ ಎಂದರು.

ಇಲ್ಲಿನ ಅಭಿವೃದ್ಧಿಗಾಗಿ ಡಿಎಂಎಫ್ ಹಾಗೂ ಕೆಎಂಆರ್ಸಿಯ ಸಾಕಷ್ಟು ಫಂಡ್ ಇದೆ, ನೈಸರ್ಗಿಕ ಸಂಪತ್ತಿನ ಮೇಲೆ ಕಣ್ಣಿಟ್ಟು ಚುನಾವಣೆಗೆ ಬಂದವರನ್ನು ಸೋಲಿಸಿ ಸ್ಥಳೀಯರನ್ನು ಗೆಲ್ಲಿಸಿ ಎಂದು, ಪರೋಕ್ಷವಾಗಿ ಗಾಲಿ ಜನಾರ್ದನ್ ರೆಡ್ಡಿ ಅವರಿಗೆ ಟಾಂಗ್ ನೀಡಿದ್ದಾರೆ.

ಸಂಡೂರು ಕ್ಷೇತ್ರದಲ್ಲಿ ಗೋರ್ಪಡೆ ಕುಟುಂಬದವರ ನಂತರ ಅತಿಹೆಚ್ಚಿನ ಬಾರಿ ಚುನಾಯಿತರಾದ ತುಕಾರಾಮ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ೨೦೦೪ ರಿಂದ ೨೦೧೯ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದವರು ಗಣಿ ಸಂಪತ್ತನ್ನು ಲೂಟಿ ಮಾಡಿದವರೆಲ್ಲ ಸೇರಿ ಬಿಜೆಪಿ ಅಭ್ಯರ್ಥಿ ಪರ ನಿಂತು ಪ್ರಚಾರ ಮಾಡುತ್ತಿದ್ದಾರೆ. ಅವರ ಉದ್ದೇಶ ಸಂಡೂರು ಮತ ಕ್ಷೇತ್ರ ಅಭಿವೃದ್ಧಿ ಮಾಡುವುದಾಗಿಲ್ಲ. ಅಲ್ಲಿನ ಅದು ಸಂಪತ್ತು ಮ್ಯಾಂಗನೀಸ್ ಅನ್ನು ಲೂಟಿ ಮಾಡುವುದಾಗಿದೆ ಎಂದು ವಾಗ್ದಾಳಿ ನಡೆಸಿದರು. ಹಾಗಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಳದ ಶ್ರೀಮತಿ ಅನ್ನಪೂರ್ಣ ತುಕಾರಾಮ್ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪಕ್ಷದ ಪ್ರಚಾರ ಕಮಿಟಿ ರಾಜ್ಯ ಸಂಚಾಲಕರು ವೆಂಕಟೇಶ್ ಹೆಗಡೆ, ರಾಮ್ ಪ್ರಸಾದ್ ಡಿ, ಅಯಾಜ್ ಅಹಮದ್, ಮೇಯರ್ ರಮೇಶ್ ಕುಮಾರ್, ಕಾಟಂ ರಾಜು, ದೇವಿ ನಗರ ಮಹಮ್ಮದ್, ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!