
ಪಿಯುಸಿಎಲ್ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 10- ಜಿಲ್ಲಾ ಪಿಯುಸಿಎಲ್ ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ ಶನಿವಾರ ಡಿ.ಎಂ.ಬಡಿಗೇರ ನಿವಾಸದಲ್ಲಿ ಜರುಗಿತು.
ಅಧ್ಯಕ್ಷರಾಗಿ ರವಿಚಂದ್ರ.ಆರ್.ಮಾಟಲದಿನ್ನಿ ವಕೀಲರು, ಉಪಾಧ್ಯಕ್ಷರಾಗಿ ಮಾರುತಿ ಚಾಮಲಾಪೂರ ವಕೀಲರು, ಕಾರ್ಯದರ್ಶಿಯಾಗಿ ಸಂಜಯದಾಸ ಕೌಜಗೇರಿ, ಖಜಾಂಚಿಯಾಗಿ ರಾಮಲಿಂಗ ಶಾಸ್ತ್ರಿ, ಹಾಗೂ ಸಂಘಟನೆ ಸದಸ್ಯರಾಗಿ ಅಲ್ಲಮಪ್ರಭು ಬೆಟ್ಟದೂರು, ಮಹಾಂತೇಶ ಕೊತಬಾಳ, ಲಿಂಗರಾಜ ನವಲಿ, ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಬಸವರಾಜ ನರೇಗಲ್ಲ, ಶಿವಪ್ಪ ಹಡಪದ, ಮಕಬುಲ್ ರಾಯಚೂರು, ದೇವೇಂದ್ರಪ್ಪ ಬಡಿಗೇರ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಸಂಘಟನೆ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆ ಬಗ್ಗೆ ಚರ್ಚೆ ನಡೆಯಿತು.
ಸಭೆಗೆ ಸರ್ವರನ್ನು ಮಹಾಂತೇಶ ಕೊತಬಾಳ ಸ್ವಾಗತಿಸಿದರು, ಸಂಜಯದಾಸ ಕೌಜಗೇರಿ ವಂದಿಸಿದರು.