1

ಅವಳಿ ತಾಲೂಕು ಗಾಣಿಗ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ/ಕುಕನೂರು, 10- ತಾಲೂಕಿನ ರ‍್ಯಾವಣಿಕಿ ಗ್ರಾಮದ ಆರಾಧ್ಯ ದೈವ ಶ್ರೀ ಈರಣ್ಣ ದೇವಸ್ಥಾನದಲ್ಲಿ ನಡೆದ ಉಭಯ ತಾಲೂಕುಗಳ ಗಾಣಿಗ ಸಮಾಜದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ತಾಲೂಕಿನ ಹಿರೇ ಅರಳಿಹಳ್ಳಿ ಗ್ರಾಮದ ಸಂಗಮೇಶ ವಾದಿ (ಗೌರವಾಧ್ಯಕ್ಷ), ವಣಗೇರಿ ಗ್ರಾಮದ ಶರಣಪ್ಪ ರ‍್ಯಾವಣಿಕಿ (ಅಧ್ಯಕ್ಷ), ಜಯರಾಜ್ ದೇಸಾಯಿ (ಉಪಾಧ್ಯಕ್ಷ), ಕುಡಗುಂಟಿ ಗ್ರಾಮದ ಹಿರೇ ಹನಮಪ್ಪ ಬೊಮ್ಮನಾಳ (ಪ್ರಧಾನ ಕಾರ್ಯದರ್ಶಿ), ಮ್ಯಾದನೇರಿ ಗ್ರಾಮದ ಶರಣಪ್ಪ ಮೇಟಿ (ಜಂಟಿ ಕಾರ್ಯದರ್ಶಿ), ನಾಗರಾಜ್ (ವಕ್ತಾರ್), ಬೇವೂರು ಗ್ರಾಮದ ಹನಮಂತಪ್ಪ ಚರಾರಿ (ಮಾಧ್ಯಮ ಪ್ರತಿನಿಧಿ) ಆಯ್ಕೆಗೊಂಡರು.

ಕುಕನೂರು ತಾಲೂಕು: ಕುಕನೂರು ತಾಲೂಕು ಗಾಣಿಗ ಸಮಾಜದ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ.

ಸಿದ್ನೆಕೊಪ್ಪ ಗ್ರಾಮದ ಶಂಕ್ರಪ್ಪ ಗದಗಿನ್ (ಗೌರವಾಧ್ಯಕ್ಷ), ರ‍್ಯಾವಣಿಕಿ ಗ್ರಾಮದ ವಿಶ್ವನಾಥ ತಮ್ಮಣ್ಣನವರ್ (ಅಧ್ಯಕ್ಷ), ನೆಲಜೇರಿ ಗ್ರಾಮದ ಮಂಜುನಾಥ ಚುಕಣಿ (ಉಪಾಧ್ಯಕ್ಷ), ಕುದರಿಮೋತಿ ಗ್ರಾಮದ ಪಂಪಾಪತಿ ವಣಗೇರಿ (ಪ್ರಧಾನ ಕಾರ್ಯದರ್ಶಿ), ಕುಕನೂರಿನ ದೇವಪ್ಪ ಸೊಬಾನದ್ (ಕಾರ್ಯದರ್ಶಿ), ಬೈರನಾಯಕನಹಳ್ಳಿ ಗ್ರಾಮದ ಸೋಮಣ್ಣ ಪೂಜಾರ್ (ಖಜಾಂಚಿ), ಕುದರಿಮೋತಿ ಗ್ರಾಮದ ಅಮರೇಶ ತಲ್ಲೂರ (ಮಾಧ್ಯಮ ವಕ್ತಾರ್), ವಟಪರ್ವಿ ಗ್ರಾಮದ ನೀಲಪ್ಪ ಕುದರಿಕೊಟಗಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರವಿಂದಗೌಡ ಎಸ್. ಪಾಟೀಲ್, ಸಮಾಜದ ಮುಖಂಡರಾದ ಅಯ್ಯನಗೌಡ ಕೆಂಚಮ್ಮನವರ್, ಸುಭಾಷ್ ವದ್ನಾಳ್, ಮಲ್ಲನಗೌಡ ಪಾಟೀಲ್, ಯು.ಎಸ್.ಮೆಣಸಗೇರಿ ವಕೀಲರು, ರತನ ದೇಸಾಯಿ, ಮಲ್ಲನಗೌಡ ಕೋನನಗೌಡ್ರ, ಶಿವಪ್ಪ ವಾದಿ, ಶಿವಸಂಗಪ್ಪ ಹುಚನೂರ, ಬಸವರಾಜ ಬೊಮ್ಮನಾಳ್, ಆದೇಶ ರೊಟ್ಟಿ, ವೀರಣ್ಣ ಹಳ್ಳಿ ಸೇರಿದಂತೆ ಮತ್ತಿತರರು ಇದ್ದರು.

ಸನ್ಮಾನ : ತಾಲೂಕಿನ ಬೇವೂರು ಗ್ರಾಮದ ಕುಷ್ಟಗಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ವಣಗೇರಿ ಗ್ರಾಮದ ಶರಣಪ್ಪ ರ‍್ಯಾವಣಿಕಿ ನೂತನವಾಗಿ ಯಲಬುರ್ಗಾ ತಾಲೂಕಿನ ಗಾಣಿಗ ಸಮಾಜದ ತಾಲೂಕಾಧ್ಯಕ್ಷರಾದ ಹಿನ್ನೆಲೆ ಸನ್ಮಾನಿಸಿ ಗೌರವಿಸಲಾಯಿತು.

ತದ ನಂತರ ಮಾತನಾಡಿದ ತಾಲೂಕಾಧ್ಯಕ್ಷ ಶರಣಪ್ಪ ಅವರು, ತಾಲೂಕಿನಲ್ಲಿ ಗಾಣಿಗ ಸಮಾಜವನ್ನು ಸಂಘಟನೆಗೊಳಿಸಲು ಎಲ್ಲರ ಮಾರ್ಗದರ್ಶನ ಮೂಲಕ ನಡೆಯಲಾಗುವುದು. ಗ್ರಾಮೀಣ, ಹೋಬಳಿ ಕೇಂದ್ರದಲ್ಲಿ ಪ್ರತಿಯೊಬ್ಬರನ್ನು ವಿಶ್ವಾಸ ಪಡೆದುಕೊಂಡು ಸಮಾಜಕ್ಕಾಗಿ ಹಗಲೆರಳಲು ಶ್ರಮಿಸಲಾಗುವುದು. ತಾಲೂಕಿನಲ್ಲಿ ಬಹು ಸಂಖ್ಯಾತ ಹೊಂದಿದ ಗಾಣಿಗ ಸಮಾಜದ ಮುಖಂಡರು ಒಗ್ಗೂಡಿ ಕಾರ್ಯ ಮಾಡಲು ಅವಕಾಶ ಕಲ್ಪಿಸಿದ ಸಮಾಜದ ಬಂಧುಗಳಿಗೆ ಅಭಿನಂದಿಸಲಾಗುವುದು ಎಂದು ತಿಳಿಸಿದರು.

ಈ ಸಂಧರ್ಭ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲನಗೌಡ ಕೋನನಗೌಡ್ರ, ನಿವೃತ್ತಿ ಕೃಷಿ ಅಧಿಕಾರಿ ದ್ಯಾಮಣ್ಣ ಹಳ್ಳಿ, ಸಮಾಜದ ಮುಖಂಡರಾದ ಅಯ್ಯನಗೌಡ ಕೆಂಚಮ್ಮನವರ್, ಮಲ್ಲಿಕಾರ್ಜುನ್ ನೆಲಜೇರಿ, ಶರಣಪ್ಪ ಟಿಕಲ್, ವೀರಣ್ಣ ಚರಾರಿ, ಸಂಗಮೇಶ ಗೊಂದಿ, ನಿಂಗರಾಜ ಗೊಂದಿ, ಮಲ್ಲಪ್ಪ ಹಾಲಳ್ಳಿ ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!