ರಾವ್ ಬಹದ್ದೂರ್ ಮಹಾಬಲೇಶ್ವರಪ್ಪನವರ ಜೀವನ ಆದರ್ಶವಾಗಿದೆ : ಬಸವರಾಜ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 12- ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಯ ಹರಿಕಾರ, ವಿದ್ಯಾ ಪ್ರಧಾತ, ಸಮಾಜ ಸೇವಕರು ಆದ, ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಜೀವನದ ಹಾದಿ ಇಂದಿನ ಪ್ರತಿಯೊಬ್ಬರಿಗೂ ಆದರ್ಶನಿಯವೆಂದು ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಇಂಜಿನಿಯರಿ0ಗ್ ಕಾಲೇಜ್ ಅಧ್ಯಕ್ಷ ಜಾನೆ ಕುಂಟೆ ಬಸವರಾಜ್ ಹೇಳಿದರು.
ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಪುಣ್ಯತಿಥಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಅವರ ಭಾವಚಿತ್ರಕ್ಕೆ ಹೂಮಾಲೆಯನ್ನು ಅರ್ಪಿಸಿ ನಂತರ ನಮನಗಳು ಸಲ್ಲಿಸಿ ಮಾತನಾಡಿದರು.
ಮಹಾಬಲೇಶ್ವರಪ್ಪನವರ ವ್ಯಕ್ತಿತ್ವ, ಹೋರಾಟಮನೋಭಾವ, ಅವರು ಕಟ್ಟಿದ ವಿದ್ಯಾ ಸಮಸ್ತೆಗಳು, ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟು ಶ್ರಮಿಸಿದ್ದಾರೆ ಎಂದರು.
ವಿವಿ ಸಂಘದ ಅಧ್ಯಕ್ಷರಾಗಿ ವೀರಶೈವ ಪದವಿ ಕಾಲೇಜು ಪ್ರಾರಂಭಿಸಲು ಅವರು ಪಟ್ಟ ಶ್ರಮ, ಅವರು ಒಟ್ಟುಗೂಡಿಸಿದ ಎರಡು ಲಕ್ಷ ರೂಪಾಯಿ ದೇಣಿಗೆ ಹಣ, ಆಗಿನ ಬ್ರಿಟಿಷ್ ಸರ್ಕಾರದ ನಿಯಮಾವಳಿ ಪ್ರಕಾರ ಒಂದು ನೂರು ಎಕರೆ ಜಾಗವನ್ನು ಸರಕಾರದಿಂದ ಪಡೆಯಲು ಅವರು ನಡೆಸಿದ ಹೋರಾಟ ಮುಂತಾದವುಗಳು ಎಳೆ ಎಳೆಯಾಗಿ ವಿವರಿಸಿದರು.
ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಬೋರ್ಡ್ ಅಧ್ಯಕ್ಷರಾಗಿ ರಸ್ತೆಗಳು ಮತ್ತು ಸೇತುವೆ, ಕುಡಿಯುವ ನೀರಿನ ವ್ಯವಸ್ಥೆ, ಹಗರಿ ಬ್ರಿಡ್ಜ್ ಕನ್ನಡ ಶಾಲೆಗಳ ಸ್ಥಾಪನೆ, ಕರ್ನಾಟಕ ಏಕೀಕರಣ ಹೋರಾಟ, ಮಲ್ಲ ಸಜ್ಜನ ವ್ಯಾಯಾಮ ಶಾಲೆ ಸ್ಥಾಪನೆ, ಆಸ್ಪತ್ರೆಗಳ ಸ್ಥಾಪನೆ, ಕಲೆ ಸಂಗೀತ ನಾಟಕಗಳ ಪ್ರೋತ್ಸಾಹ, ಗ್ರಂಥಾಲಯಗಳು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮುಂತಾದ ಜನೋಪಯೋಗಿ ಕೆಲಸಗಳನ್ನು ಮೆಚ್ಚಿದ ಹಾಗೆನ ಬ್ರಿಟಿಷ್ ಸರ್ಕಾರದ ಅಧಿಕಾರಿ ಖುದ್ದಾಗಿ ಬಳ್ಳಾರಿಗೆ ಆಗಮಿಸಿ ಮಹಾಬಲೇಶ್ವರಪ್ಪನವರಿಗೆ ರಾವ್ ಬಹುದ್ದೂರ್ ಎಂಬ ಬಿರುದನ್ ಇತ್ತು ಸನ್ಮಾನಿಸಿದರು ಎಂದರು.
ಇವರ ಜೀವನದ ಹಾದಿ ಹಿಂದಿನ ಪೀಳಿಗೆಗೆ ಆದರ್ಶನೀಯವೆಂದು ಸ್ಪಷ್ಟಪಡಿಸಿದರು.
ಈ ಸಂದರ್ಭವಾಗಿ ಕಾರ್ಯಕ್ರಮದಲ್ಲಿ ಎನ್ಸಿಸಿ ಆಫೀಸರ್ ಲೆಫ್ಟ್ನೆಟ್ ಕಲ್ನಲ್ ರಾಹುಲ್ ಸಿಂಗ್, ಸುಬೇದಾರ್ ಮೇಜರ್ ದೇವೇಂದ್ರ ಕುಮಾರ್, ಪ್ರಾಂಶುಪಾಲ ಡಾ.ಟಿ.ಹನುಮಾನ್ ರೆಡ್ಡಿ, ಉಪಪ್ರಾಚಾರ್ಯರಾದ ಶ್ರೀಮತಿ ಡಾ.ಸವಿತಾ ಸೋನಾಲಿ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷ ಹಾಗೂ ಮಹಾವಿದ್ಯಾಲಯದ ಅಧ್ಯಕ್ಷ ಜಾನಕುಂಟೆ ಬಸವರಾಜ, ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಸಹಕಾರ್ಯದರ್ಶಿ ಯಾಲ್ಪಿ ಮೇಟಿ, ಪಂಪನಗೌಡ, ಖಜಾಂಚಿ ಬೈಲು ವದ್ದಿಗೇರಿ, ರ್ರಿಸ್ವಾಮಿ, ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
