1

ಸಂಡೂರು ಉಪಚುನಾವಣೆ : ಬಿರುಸಿನಿಂದ ಮತದಾನ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 13- ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ, ಇಂದು ನಡೆದ, ಮತದಾನ ಬೆಳಗ್ಗೆ ೭ ಗಂಟೆಯಿ0ದಲೇ ಬಿರಿಸಿನಿಂದ, ಮತದಾನ ಕಾರ್ಯಕ್ರಮ ಪ್ರಾರಂಭವಾಯಿತು.

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಕ್ಷೇತ್ರಗಳಾದ ಶಿಗ್ಗಾವಿ, ಚನ್ನಪಟ್ಟಣ, ಸಂಡೂರು, ಮತದಾನ ಕಾರ್ಯಕ್ರಮ ನಡೆಯುತ್ತಿದೆ. ಸಂಡೂರ್‌ನಲ್ಲಿ ಕಾಂಗ್ರೆಸ್‌ನಿ0ದ ಬಳ್ಳಾರಿಯ ಸಂಸದ ಈ.ತುಕಾರಾಮ್ ಅವರ ಪತ್ನಿ ಅನ್ನಪೂರ್ಣ ತುಕಾರಾಮರವರು ಕಣಕ್ಕಿಳಿದಿದ್ದರೆ, ಅವರ ವಿರುದ್ಧ ಬಿಜೆಪಿಯಿಂದ ಬಂಗಾರು ಹನುಮಂತು ಸ್ಪರ್ಧೆಗೆ ಇಳಿದಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರ ಆದರೂ, ಎರಡು ಪಕ್ಷಗಳು ಭರ್ಜರಿ ಎಂದರೆ ಪ್ರಚಾರ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತುಚುನಾವಣೆ ಪ್ರಚಾರದಲ್ಲಿ ಎರಡು ಪಕ್ಷಗಳಿಗೆ ಸೇರಿದ ಘಟಾನುಘಟಿಗಳು ಆಯಾ ಪಕ್ಷದ ಅಭ್ಯರ್ಥಿಗಳಿಗೆ ಬೆನ್ನಿಗೆ ನಿಂತು ಪ್ರಚಾರ ಮಾಡಿದ್ದರು.

ಇಂದು ಬೆಳಗ್ಗೆ ಸಂಡೂರು ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರಾಂತಗಳಲ್ಲಿ ಜನರು ಮುಂಜಾನೆಯೇ ಮತ ಕೇಂದ್ರಗಳ ಮುಂದೆ ಸಾಲುಗಟ್ಟಿ ಉತ್ಸಾಹದಿಂದ ಮತದಾನವನ್ನು ಮಾಡುವ ದೃಶ್ಯಗಳು ಕಂಡು ಬಂದವು.

ಲೋಕಸಭಾ ಸದಸ್ಯ ಈ.ತುಕಾರಾಂ ಮತ್ತು ಅನ್ನಪೂರ್ಣ ತುಕಾರಾಂ, ತಮ್ಮ ಮಕ್ಕಳೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಿ, ಮತದಾನದ ಹಕ್ಕನ್ನು ಚಲಾಯಿಸಿದರು.

ಗ್ರಾಮೀಣ ಪ್ರಾಂತ್ಯಗಳಾದ ಏಳುಬಂಚಿ, ಮಾದಾಪುರ, ತಿಮ್ಮಾಪುರ ಸೇರಿದಂತೆ ಕ್ಷೇತ್ರದ ವ್ಯಾಪ್ತಿಯ ಎಲ್ಲೆ ಮತದಾನ ಕೇಂದ್ರಗಳಿಗೆ ಪೊಲೀಸ್ ಬಿಗಿ ಬಂದ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಮತದಾನ ಕಾರ್ಯಕ್ರಮದಲ್ಲಿ ವಯೋವೃದ್ಧರು ಹಾಗೂ ಮೊದಲ ಬಾರಿಗೆ ತಮ್ಮ ಮತದಾನ ಹಕ್ಕು ಚಲಾಯಿಸಿದ ಯುವಕ ಯುವತಿಯರು ಆಸಕ್ತಿಯಿಂದ ಮತ ಚಲಾಯಿಸಿದ್ದರು.

ಇನ್ನು ಸಂಡೂರು ಪಟ್ಟಣದಲ್ಲಿ, ಬಿಜೆಪಿ ಮುಖಂಡರಾದ ಕೆಎಸ್ ದಿವಾಕರ್ ಅವರು ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ತರಲಿ ಮತದಾನ ಮಾಡಿದರು.

Leave a Reply

Your email address will not be published. Required fields are marked *

error: Content is protected !!