4

ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆಗಳ ಗೀತ ಗಾಯನ ಸ್ಪರ್ಧೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 13- ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆಗಳ ಗೀತ ಗಾಯನ ಸ್ಪರ್ಧೆಯನ್ನು ಜಿಲ್ಲಾ ಕೇಂದ್ರ ಕಾರ್ಯಾಲಯ ಶಾಸಕರ ಸರ್ಕಾರಿ ಮಾದರಿಯ ಶಾಲೆ ಕೂಪ್ಪಳದಲ್ಲಿ ಜರುಗಿಸಲಾಯಿತು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು, ಎಚ್.ಎಂ.ಸಿದ್ದರಾಮ್ ಸ್ವಾಮಿ ರಾಜ್ಯ ಉಪಾಧ್ಯಕ್ಷರು ಮತ್ತು ಜಿಲ್ಲಾ ಮುಖ್ಯ ಆಯುಕ್ತರು ರವರು ವಹಿಸಿದ್ದರು, ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಮಲ್ಲಿಕಾರ್ಜುನ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಕೊಪ್ಪಳ ರವರು ವಾದ್ಯಗಳನ್ನು ನುಡಿಸುವದರೂಂದಿಗೆ, ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸ್ಕೌಟ್ ಗೈಡ್ಸ್ ಚಳುವಳಿಯ ಕುರಿತು ಮಾತನಾಡಿ ಸರ್ವರಿಗೂ ಶುಭ ಕೋರಿದರು.

ಪ್ರಾಸ್ತಾವಿಕ ನುಡಿಗಳನ್ನು ಎಸ್.ಹೆಚ್.ಹತ್ತಿಮತ್ತೂರ ಂSಔಅ ಮಾತನಾಡಿದರು, ಮಲ್ಲಿಕಾರ್ಜುನ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಮಾನ್ಯರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.

ಎಚ್.ಎಂ.ಸಿದ್ದರಾಮ್ ಸ್ವಾಮಿ ಜಿಲ್ಲಾ ಮುಖ್ಯ ಆಯುಕ್ತರು ಅಧ್ಯಕ್ಷೀಯ ನುಡಿಗಳನ್ನು ಆಡಿದರು, ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆಗಳ ಗೀತ ಗಾಯನ ಕಾರ್ಯಕ್ರಮದಲ್ಲಿ ಕಬ್ ಬುಲ್ ಬುಲ್ ಸ್ಕೌಟ್ಸ್ ಮತ್ತು ಗೈಡ್ಸ್ ದಳ ನಾಯಕರುಗಳು ಜಾನಪದ ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿದರು, ನಂತರದಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಶುಭ ಕೋರಲಾಯಿತು ಕೂನೆಯಲ್ಲಿ ಬಸವರಾಜ್ ಚಿತ್ತಾಪುರ ಸ್ಕೌಟ್ ಶಿಕ್ಷಕರು ಸರ್ವರನ್ನ ವಂದನಾಪಣೆ ಮಾಡಿದರು.

ಈ ಕಾರ್ಯಕ್ರಮಕ್ಕೆ ನಿರ್ಣಾಯಕರಾಗಿ ಯಮನೂರಪ್ಪ ಸಂಗೀತ ಶಿಕ್ಷಕರು, ಶರಣಪ್ಪ ಸಂಗೀತ ಶಿಕ್ಷಕರು, ಹುಸೇನ್ ಸಾಬ್ ಮಕಾಂದಾರ್ ಗಂಗಾವತಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು, ಶ್ರೀಮತಿ ಪರಿದಾ ಅಕ್ತರ್ ಸಿಆರ್‌ಪಿ ಶ್ರೀಮತಿ ಶ್ರೀದೇವಿ ರೇಂಜರ್ ಲೀಡರ್, ಬಸವರಾಜ್ ಚಿತ್ತಾಪುರ ಸ್ಕೌಟ್ಸ್ ಮಾಸ್ಟರ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!