
ಶಿಕ್ಷಕಿಯಿಂದ ಶಾಲೆಗೆ ಬೋಧನೋಪಕರಣಗಳ ದೇಣಿಗೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಕನಪಳ್ಳಿಯಲ್ಲಿ ನಡೆದ ಮಕ್ಕಳ ದಿನಾಚರಣೆಯ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿಯ ಮುಖ್ಯ ಗುರುಗಳಾದ ಲಕ್ಷ್ಮಪ್ಪ ಚೌಹಾಣ್ ಮಾತನಾಡಿ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಕಾರಣ ಅವರ ಜನ್ಮದಿನ ಮಕ್ಕಳ ದಿನವನ್ನಾಗಿ ಘೋಷಿಸಲಾಯಿತು ಎಂದು ಹೇಳಿದರು.
ಬಿಆರ್‌ಪಿ ಬಸವನಗೌಡ ಗುರುಗಳು ತಮ್ಮ ಗಾಯನದ ಮೂಲಕ ಮಕ್ಕಳಿಗೆ ಹಿತನುಡಿಗಳನ್ನು ತಿಳಿಸಿದರು. ಕೂಕನಪಳ್ಳಿಯ ಸಮೂಹ ಸಂಪನ್ಮೂಲ ವ್ಯಕ್ತಿ ಸದಾನಂದ್ ಭಾವಿಮನಿ ಮಾತನಾಡಿ ಮಕ್ಕಳಿಗೆ ನೀವು ತಪ್ಪದೇ ಶಾಲೆಗೆ ಬಂದು ಗುಣಾತ್ಮಕ ಶಿಕ್ಷಣವನ್ನು ಪಡೆದು ಭವ್ಯ ಭಾರತದ ಪ್ರಜೆಗಳಾಗಬೇಕೆಂದು ಹೇಳಿದರು.
ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಆಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆಯನ್ನು ವೇದಿಕೆ ಮೇಲೆ ಹಾಜರಿದ್ದ ಗಣ್ಯರು ವಿತರಿಸಿ ಉಳಿದ ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತು. ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ಮಕ್ಕಳೇ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಕಂಗೊಳಿಸಿದ್ದರು.
ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರಿ ದ್ಯಾಮವ್ವ ಹೊಸಮನಿ ಶಾಲೆಯ ಬೋಧನೋಪಕರಣಗಳಿಗೆ ಸುಮಾರು ೧೦೦೦೦ ರೂಪಾಯಿಯ ಮೂರು ಬಿಳಿ ಮತ್ತು ಹಸಿರು ಹಲಗೆಯನ್ನು ಶಾಲೆಗೆ ದೇಣಿಗೆ ನೀಡಿದರು. ಅವರ ಕಾರ್ಯಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಮತಿ ರಾಜೇಶ್ವರಿ, ದಶ್ವಂತ್, ಶ್ರೀಮತಿ ದೀಪಿಕಾ ಎಸ್, ಶಂಭುಲಿAಗಯ್ಯ ವಣಗೇರಿ, ಶ್ರೀಮತಿ ರಜಿಯಾಬೇಗಂ ಕಳ್ಳಿ, ಕುಮಾರಿ ದ್ಯಾಮವ್ವ ಹೊಸಮನಿ, ಕುಮಾರಿ ಅಮೃತ ಪೂಜಾರ, ಸಿದ್ದಣ್ಣ ಬಡಿಗೇರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.