ಅಹಿಂದ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಪಿ.ಜಿ ಕೌಶಿಕ್ ಯಾದವ್ ನೇಮಕ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 16- ಕರ್ನಾಟಕ ಅಹಿಂದ ಜನ ಸಂಘದ ಯುವ ಘಟಕದ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾಗಿ ಪಿ.ಜಿ ಕೌಶಿಕ್ ಯಾದವ್ ನೇಮಕಗೊಂಡಿದ್ದಾರೆ.
ಕರ್ನಾಟಕ ಅಹಿಂದ ಜನ ಸಂಘದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಅಹಿಂದ ಯುವ ಘಟಕದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು ಈ ನೇಮಕಮಾಡಿ ಅಹಿಂದ ಜನರ ಶ್ರೇಯೋಭಿವೃದ್ಧಿಗಾಗಿ, ಸಾಮಾಜಿಕವಾಗಿ, ಶೈಕ್ಷಣಕವಾಗಿ ಮತ್ತು ಆರ್ಥಿಕವಾಗಿ ‘ಅಹಿಂದ ಜನ ಸಮುದಾಯದ ಮುಖ್ಯವಾಹಿನಿಗೆ ತರುವ ಹಾಗೂ ಸಂಘಟನೆಯ ಮತ್ತು ಬಲವರ್ಧನೆಗಾಗಿ ದುಡಿಯುತ್ತೀರೆಂದು ನಂಬಿ ನಾನು ತಮಗೆ ಈ ಜವಾಬ್ದಾರಿಯನ್ನು ವಹಿಸಿರುತ್ತೇನೆ ಎಂದು ಎಂ.ಜಿ ಕನಕ ಅವರು ಹೇಳಿದರು.
ಇದೇ ವೇಳೆ ನೇಮಕಾತಿ ಆದೇಶ ಪತ್ರಗಳನ್ನು ಮಹಿಳಾ ಘಟಕ ಬಳ್ಳಾರಿ ಜಿಲ್ಲಾಧ್ಯಕ್ಷರು ಕೆ.ಯಶೋದಮ್ಮ ಅವರು ಹಾಗೂ ಯುವ ಘಟಕದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು, ಜಿಲ್ಲಾ ಗೌರವಧ್ಯಕ್ಷರಾದ ಉಮಾರ್ ಫಾರೂಕ್ ಅವರು ವಿತರಿಸುವ ಮೂಲಕ ಶುಭ ಕೋರಿದರು.
ಅಹಿಂದ ಯುವ ಘಟಕದ ಜವಾಬ್ದಾರಿ ವಹಿಸಿಕೊಂಡ ಪಿ.ಜಿ ಕೌಶಿಕ್ ಯಾದವ್ ಅವರು, ನನ್ನ ಸಮಾಜಿಕ ಸೇವೆ ಪರಿಗಣಿಸಿ ಈ ಸ್ಥಾನ ಕಲ್ಪಿಸಿರುವ ಅಹಿಂದ ಯುವ ಘಟಕದ ಜಿಲ್ಲಾಧ್ಯಕ್ಷರು ಎಂ.ಜಿ ಕನಕ ಹಾಗೂ ಅಹಿಂದದ ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಸಮುದಾಯವನ್ನು ಒಟ್ಟುಗೂಡಿಸಿ ಅದರ ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಅಹಿಂದ ಜನ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
