ಗ್ರಾಮೀಣ ಪ್ರದೇಶದ ಜನರು ಕೆಲಸಕ್ಕಾಗಿ ಗುಳ್ಳೆ ಹೋಗಬಾರದು : ಶ್ರೀನಿವಾಸ್ ಚಿತ್ರಗಾರ
ಕರುನಾಡ ಬೆಳಗು ಸುದ್ದಿ
ಕುಕನೂರು, 19- ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಗಳೇಶ್ವರ ಕಲ್ಯಾಣ ಮಂಟಪದಲ್ಲಿ ೨೦೨೫-೨೬ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸಲು ಗ್ರಾಮ ಸಭೆ ಆಯೋಜನೆ ಮಾಡಲಾಗಿತ್ತು.
ಗ್ರಾಮ ಸಭೆಯಲ್ಲಿ ಜಿಲ್ಲಾ ಐ.ಇ.ಸಿ ಸಂಯೋಜಕ ಶ್ರೀನಿವಾಸ್ ಚಿತ್ರಗಾರ ಮಾತನಾಡಿ, ಗ್ರಾಮಗಳು ಮತ್ತು ಗ್ರಾಮಸ್ಥರು ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕಾದರೆ ನಿರಂತರ ಆರ್ಥಿಕ ಅವಶ್ಯಕತೆ ಇರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳು ಕೂಲಿ ಕೆಲಸ ಅರಸಿ ಗುಳೆ ಹೋಗಬಾರದು ಮತ್ತು ಗ್ರಾಮದಲ್ಲಿಯೇ ಸ್ವಂತ ಹೊಲ, ಗದ್ದೆಗಳಲ್ಲಿ ಆರ್ಥಿಕ ಆದಾಯೋತ್ಪನ್ನ ಚಟುವಟಿಕೆಗಳನ್ನು ನರೇಗಾ ಯೋಜನೆಯಲ್ಲಿ ಹಮ್ಮಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಯಾಗಬೇಕು, ಅದಕ್ಕಾಗಿ ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದರ್ಶನ ಕೃಷಿಯೋಂದಿಗೆ, ಕೃಷಿಗೆ ಸಾಗುವ ಉಪ ಕಸಬುಗಳಿಗೆ ಉತ್ತೇಜನ ನೀಡಬೇಕು ಅದು ಹೈನುಗಾರಿಕೆ, ಕೋಳಿಸಾಕಾಣಿಕೆ, ಕುರಿ ಸಾಕಾಣಿಕೆ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಳ್ಳಲು ಅವಕಾಶ ಇದೆ, ಅದಕ್ಕಾಗಿ ಕೃಷಿಕರು, ತೋಟಗಾರಿಕೆ, ಅರಣ್ಯ, ಕೃಷಿ ಮತ್ತು ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಕಾಮಗಾರಿಗಳನ್ನು ಮಾಡಿಕೊಳ್ಳಬೇಕು. ೧೦೦ ದಿನಗಳ ನಿರಂತರ ಉದ್ಯೋಗಕ್ಕಾಗಿ ನಮೂನೆ-೬ ಅನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು ಎಂದು ಹೇಳಿದರು.
ಅದರಂತೆ ಸ್ಥಳದಲ್ಲಿ ಸ್ವ-ಸಹಾಯ ಸಂಘದ ಮಹಿಳಾ ಕೂಲಿಕಾರರು, ಕಾಯಕ ಬಂಧುಗಳು ಕೂಲಿ ಬೇಡಿಕೆ ಅರ್ಜಿಗಳನ್ನು ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಹಾಕಿದರು.
ಸುಮಾರು ೧೫೦ ಕೂಲಿಕಾರರು ಅರ್ಜಿಯನ್ನು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಕ್ರಪ್ಪ ಚಿನ್ನೂರ, ಸದಸ್ಯ ಶರಣಪ್ಪ ಎಮ್ಮಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೀಲಂ ಚಳಗೇರಿ, ರಾಜೀವ್ ಗಾಂಧಿ ಪೇಲೋಶಿಪ್ ಸಿಬ್ಬಂದಿ ಸೀಮಾ ಕೌಸರ್, ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಃಈಖಿ ಶರಣಪ್ಪ ಮೂಲಿಮನಿ, ಮಂಗಳೇಶ್ ಕೌದಿ, ಕಂಪ್ಯೂಟರ್ ಅಪರೇಟರ್ ವಿರೇಶ್ ಚಿನ್ನೂರ, ಭರತೇಶ್, ಎಂಬಿಕೆ ಬಸಮ್ಮ ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರು ಗ್ರಾಮಸ್ಥರು ಹಾಗೂ ನರೇಗಾ ಕಾಯಕ ಬಂಧುಗಳು ಇತರರಿದ್ದರು.
