ಮಹಿಳೆಯರ ಘನತೆ ಮತ್ತು ಮಾನವ ಮೌಲ್ಯ ಉಳಿಸಲು ಜಿಲ್ಲಾ ಮಟ್ಟದ ಯುವಜನರ ಸಂಕಲ್ಪ ಸಮಾವೇಶ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 21- ಮಹಿಳೆಯ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ ಎಂಬ ಘೋಷವಾಕ್ಯದಡಿ ಎಐಡಿವೈಓ ಸಂಘಟನೆ ಸಂಘಟಿಸುತ್ತಿರುವ ಕೊಪ್ಪಳ ಜಿಲ್ಲಾ ಮಟ್ಟದ ಯುವಜನರ ಸಂಕಲ್ಪ ಸಮಾವೇಶವನ್ನು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಕನೆಯನ್ನು ಖ್ಯಾತ ಹೋರಾಟಗಾರರು ಅಲ್ಲಮಪ್ರಭು ಬೆಟ್ಟದೂರು ಮಾಡಲಿದ್ದಾರೆ. ಇಂದಿನ ಯುವ ಮನಸ್ಸಿನ ತಲ್ಲಣಗಳು ಎಂಬ ವಿಷಯದ ಕುರಿತು ಖ್ಯಾತ ಮನಶಾಸ್ತ್ರಜ್ಞ ಬಿ.ವಿ.ನಾಗರಾಳ್ ನಡೆಸಿಕೊಡಲಿದ್ದಾರೆ.
ಲೈಂಗಿಕ ಅಪರಾಧಗಳು ಕಾರಣ ಮತ್ತು ಪರಿಹಾರದ ಕುರಿತು ಧಾರವಾಡ ಜನ ಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಅಲ್ದಳ್ಳಿ ಅವರು ಮಾತನಾಡಲಿದ್ದಾರೆ.
ಆಶಯ ನುಡಿಯನ್ನು ಸಿದ್ಧಲಿಂಗ ಬಾಗೇವಾಡಿ, ಎಐಡಿವೈಓ ರಾಜ್ಯ ಕಾರ್ಯದರ್ಶಿಗಳು, ಅಧ್ಯಕ್ಷತೆಯನ್ನು ಶರಣು ಗಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು, ಪ್ರಾಸ್ತಾವಿಕ ನುಡಿಯನ್ನು ಶರಣು ಪಾಟೀಲ್ ಜಿಲ್ಲಾ ಕಾರ್ಯದರ್ಶಿಗಳು ನೆರವೇರಿಸಲಿದ್ದಾರೆ.
