14

ವಿದ್ಯಾರ್ಥಿಗಳು ಆಸಕ್ತಿಯಿಂದ ಓದಿನಲ್ಲಿ ತೊಡಗಬೇಕು : ಶ್ರೀಕಾಂತ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 21- ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ಓದಿಗೆ ಮೀಸಲಿಟ್ಟು ಆಸಕ್ತಿಯಿಂದ ಕಲಿತಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು ಹಾಗೂ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಎಂದು ಜನಜಾಗೃತಿ ವೇದಿಕೆಯ ಶ್ರೀಕಾಂತ ಸಜ್ಜ‌ನ ಹೇಳಿದರು.
ಅವರು ಇಂದು ಧರ್ಮಸ್ಥಳ ಗ್ರಾಮಾಭಿವೃದ್ದಿಯಿಂದ ಕಾತರಕಿಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಕ್ಲಾಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಶಿಕ್ಷಕರಾದ ಶರಣಪ್ಪ  ಹಾಗೂ ಶಿವಪುತ್ರಪ್ಪ  ಅವರು ಟ್ಯೂಷನ್ ಕ್ಲಾಸ್ ಶಿಕ್ಷಕಿ ಮಹಾದೇವಿ ಸಂಸ್ಥೆಯ ಮೇಲ್ವಿಚಾರಕರಾದ  ವಿಶ್ವನಾಥ ಉದ್ಘಾಟಿಸಿದರು.
ಟ್ಯೂಷನ್ ಕ್ಲಾಸ್ ನೀಡುವ ಮೂಲ ಉದ್ದೇಶ ಹಾಗೂ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿಶ್ವನಾಥ ಅವರು ಉಚಿತ ಟ್ಯೂಷನ್ ನೀಡುವ ಕುರಿತು  ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ  ಮುಖ್ಯ ಶಿಕ್ಷಕರಾದ ಶರಣಪ್ಪ  ಅವರು ಯೋಜನೆಯ ಕಾರ್ಯಕ್ರಮಗಳಲ್ಲಿ ತಮ್ಮ ಶಾಲೆಯಲ್ಲಿ ಮನೆ ಪಾಠಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ತವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!