ತಾವರಗೇರಾ-ಮುದೇನೂರು ರಸ್ತೆ ಅಭಿವೃದ್ಧಿಪಡಿಸುವಂತೆ ಮನವಿ
ಕರುನಾಡ ಬೆಳಗು ಸುದ್ದಿ
ಕುಷ್ಟಗಿ, 06- ತಾಲೂಕಿನ ತಾವರಗೇರ-ಮುದೇನೂರ ಪ್ರಮುಖ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು ವಾಹನಗಳು ಹಾಗು ಸಾರ್ವಜನಿಕ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಕರವೇ ನಾರಾಯಣಗೌಡ ಬಣ ವತಿಯಿಂದ ಕುಷ್ಟಗಿ ಲೋಕೋಪಯೋಗಿ ಉಪವಿಭಾಗ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ತಾವರಗೇರಾ-ಮುದೇನೂರು ರಸ್ತೆಯು ಪ್ರಮುಖ ರಸ್ತೆಯಾಗಿದ್ದು, ನಿತ್ಯ ಅನೇಕ ವಾಹನಗಳು ಈ ರಸ್ತೆಯ ಮೂಲಕ ಚಲಿಸುತ್ತವೆ. ಸದರಿ ರಸ್ತೆಯು ತೀರಾ ಹದಗೆಟ್ಟಿದ್ದು ಮೇಲ್ಬಾಗದ ಡಾಂಬರು ಕಿತ್ತುಹೋಗಿದೆ. ಸಾರ್ವಜನಜಕರು ಹಾಗೂ ವಾಹನ ಸಂಚಾರಕ್ಕೆ ತೀವ್ರವಾದ ತೊಂದರೆಯಾಗುತ್ತಿದೆ. ಆಗಾಗ ಸಣ್ಣ-ಪುಟ್ಟ ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸುತ್ತಲೇ ಇವೆ. ಅಲ್ಲದೇ ಈ ರಸ್ತೆಯ ಮೂಲಕವೇ ಗಾಳಿ ವಿದ್ಯುತ್ ಯೋಜನೆಯ
ಭಾರೀ ವಾಹನಗಳು ಹೆಚ್ಚು ಪ್ರಮಾಣದ ಭಾರವನ್ನು ಹೊತ್ತು ಸಾಗಿಸುತ್ತಿವೆ.
ಭಾರಿ ವಾಹನ ಸಂಚಾರದಿಂದಲೇ ರಸ್ತೆಯು ಹದಗೆಡಲು ಪ್ರಮುಖ ಕಾರಣವಾಗಿದೆ. ಸದರಿ ರಸ್ತೆ ಅಭಿವೃದ್ಧಿಯು ಬಹಳ ಅವಶ್ಯಕವಾಗಿದ್ದು, ರಸ್ತೆಯು ಲೋಕೋಪಯೋಗಿ ಇಲಾಖೆಯ ಸುಪರ್ಧಿಯಲ್ಲಿದ್ದು ಕೂಡಲೇ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಮಾಡಬೇಕು. ತಾವು ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸಿದರೆ, ನಾವು ಕರವೇ ಸಂಘಟನೆ ವತಿಯಿಂದ ಮುಂದಿನ ಹಂತವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಪ್ರಕಾಶ ಎಸ್.ಮನ್ನೇರಾಳ, ಆದಪ್ಪ ಉಳ್ಳಾಗಡ್ಡಿ, ಚನ್ನಪ್ಪ ನಾಲಗಾರ, ಮನೋಹರಬಡಿಗೇರ, ಜಾವೇದ್ ಕಾಟೆವಾಡಿ, ಶರಣಗೌಡ ಪಾಟೀಲ, ಮಲ್ಲು ಬಡಿಗೇರ, ರಮೇಶ ಹಡಪದ, ಕಳಕಪ್ಪ , ಏಕಲವ್ಯ ಚಳ್ಳುರ ಸೇರಿದಂತೆ ಮತ್ತಿತರರು ಇದ್ದರು.
