ನಾಳೆ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಜಾಗೃತಿಯ ಪ್ರತಿಭಟನೆ
ಬಿಟ್ಟಿ ಭಾಗ್ಯದ ಜೊತೆಗೆ ತುಟ್ಟಿ ಭಾಗ್ಯ
ನವೀನ್ ಗುಳಗಣ್ಣ ನವರ ಆರೋಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 05- ರಾಜ್ಯ ಸರ್ಕಾರ ಹಾಲಿಗೂ ಹೊರೆ ಜೊತೆಗೆ ಪ್ರಯಾಣ ದರ ಹೆಚ್ಚಳ ಮಾಡಿಬಡವರ ಮೇಲೆ ರಾಜ್ಯ ಸರ್ಕಾರ ಗದಾ ಪ್ರಹಾರ ಮಾಡುತ್ತಿದೆ ಖಂಡನಿಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ್ ಗುಳಗಣ್ಣವರ ಹೇಳಿದರು .
ಅವರು ಗುರುವಾರದಂದು ಭಾರತೀಯ ಜನತಾ ಪಕ್ಷದ ಕಾರ್ಯಾಲದಲ್ಲಿ ಜರುಗಿದ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರ ನವೆಂಬರ್ 1ರಿಂದ ನಂದಿನಿ ಹಾಲಿನ ಮೂಲದರವನ್ನು ಲೀಟರ್ಗೆ 8 ಹೆಚ್ಚಿಸಲಾಗಿದೆ. ಇದರ ಬೆನ್ನಲ್ಲೇ ಕೆಎಸ್ಆರ್ಟಿಸಿ, ವಾಯವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಸರಾಸರಿ ಶೇ.23ರಷ್ಟು ಮತ್ತು ಬಿಎಂಟಿಸಿ ದರವನ್ನು ಸರಾಸರಿ ಶೇ.33ರಿಂದ 35ರಷ್ಟು ಹೆಚ್ಚಿಸಿರುವುದು ಕುಟುಂಬಗಳ ಆರ್ಥಿಕ ಸ್ಥಿತಿಯ ಮೇಲೆ ದುಪ್ಪಟ್ಟು ಹೊಡೆತ ನೀಡಿದೆ.
ಹಾಲಿನದರ ಲೀಟರ್ಗೆ ಈ ಹೆಚ್ಚಳದ ಆಧಾರದಲ್ಲಿ, ಸೀಮಿತ ಆದಾಯದಲ್ಲಿ ಬದುಕುವ ಕುಟುಂಬಗಳು ಜೀವನ ನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸಿದರು , ಜನರ ಆದಾಯ ಹೆಚ್ಚಿಸುವ ಅವಕಾಶಗಳನ್ನು ಸೃಷ್ಟಿಸಬೇಕಾದ ಸರ್ಕಾರ, ಅವರ ಖರ್ಚನ್ನು ಹೆಚ್ಚಿಸುತ್ತಿರುವುದು ಖಂಡನೀಯ ಎಂದರು.
ಬಸ್ ದರ ಏರಿಕೆಗೆ ಡೀಸೆಲ್ ಬೆಲೆಯನ್ನು ಕಾರಣವಾಗಿ ಮುಂದಿಟ್ಟು ಕೇಂದ್ರ ಸರ್ಕಾರವೊಂದನ್ನೇ ದೂಷಿಸುವುದು ಏಕಪಕ್ಷೀಯ ನಿಲುವಾಗಿದೆ. ಅಂತರರಾಷ್ಟ್ರೀಯ ಕಚ್ಚಾತೈಲ ಬೆಲೆ ಹಾಗೂ ಪೂರೈಕೆ ವ್ಯತ್ಯಯದಿಂದ ಉಂಟಾಗುವ ವೆಚ್ಚದ ಒತ್ತಡವನ್ನೂ ಪರಿಗಣಿಸಬೇಕು.
ಕರ್ನಾಟಕ ಸರ್ಕಾರವೇ 2025ರ ಏಪ್ರಿಲ್ 1ರಂದು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು, ಶೇ.18.44ರಿಂದ ಶೇ.21.17ಕ್ಕೆ ಹೆಚ್ಚಿಸಿದೆ. ಪ್ರಸ್ತುತ ಅಧಿಕೃತ ತೆರಿಗೆ ಪಟ್ಟಿಯಲ್ಲೂ ಇದೇ ದರವಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ತೈಲ ಕಂಪನಿಗಳಿಗೆ ಪಾವತಿಸಬೇಕಿರುವ ಡೀಸೆಲ್ ಬಾಕಿ ಒಟ್ಟು ₹1,111.88 ಕೋಟಿ. ಇದು 2026ರ ನವೆಂಬರ್ 4ರಂದು ಸಾರಿಗೆ ಬಾಕಿ ಇದೆ ಸರ್ಕಾರ ಏನು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಹೈನುಗಾರರ ಹಿತ ಮತ್ತು ಗ್ರಾಹಕರ ಹಿತ ಎರಡನ್ನೂ ಕಾಪಾಡಲಿ ; ಹೈನುಗಾರರಿಗೆ ಸಮಯಕ್ಕೆ ಸರಿಯಾದ ಪ್ರೋತ್ಸಾಹಧನ ದೊರೆಯಬೇಕು. ಸಾರಿಗೆ ನಿಗಮಗಳಿಗೆ ಪಾವತಿಸಬೇಕಾ ಬಾಕಿಯನ್ನು ಬಿಡುಗಡೆ ಮಾಡಿ, ಅನಗತ್ಯ ವೆಚ್ಚ ನಿಯಂತ್ರಿಸಿ, ಸೇವೆಯ ಗುಣಮಟ್ಟ ಹೆಚ್ಚಿಸಲು ಆದ್ಯತೆ ನೀಡಬೇಆರೋಪ
ನಾಳೆ ಪ್ರತಿಭಟನೆ ; ಬೆಲೆ ಏರಿಕೆ ಹಾಗೂ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಎಂದು ಅಭಿಯಾನದಕ್ಕೆ ಸಿಸಪ್ಪಯ್ಯನ ಮಟದಿಂದ ಬೃಹತ್ ವಿಭಾಗ ಮಟ್ಟದ ಪ್ರತಿಭಟನೆ ಜರುಗಲಿದೆ.
ಶುಕ್ರವಾರ ಬೆಳಿಗ್ಗೆ 11ಕ್ಕೆ ಪ್ರತಿಭಟನೆ ಆರಂಭವಾಗಿ ಅಶೋಕ ವೃತ್ತದಲ್ಲಿ ಸಮಾರೋಪ ಗೋಳ್ಳಲಿದೆ ಮಾಜಿ ಮುಖ್ಯಮಂತ್ರಿ ಜಗದೀಶ ಶೇಟ್ಟರ್, ಮಾಜಿ ಸಚಿವರಾದ ಬಿ , ಶ್ರೀ ರಾಮುಲು ,ಹಾಲಪ್ಪ ಆಚಾರ , ಶಾಸಕರಾದ ದೊಡ್ಡನಗೌಡ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಸೇರದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುನೀಲ್ ಹೆಸರೂರ , ಜಿಲ್ಲಾ ವಕ್ತಾರ ಪ್ರದೀಪ್ ಹಿಟ್ನಾಳ ಇದ್ದರು
