೩೭೧ ಜೆ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ
ಕೊಪ್ಪಳದಲ್ಲಿ ಪ್ರತಿಭಟನಾ ಧರಣಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೭- ನಗರದ ಅಶೋಕ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯಿಂದ ೩೭೧ ಜೆ ಸಮರ್ಪಕ ಅನುಷ್ಠಾನ ಮತ್ತು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಗ್ರಹಿಸಿ ಸೋಮವಾರದಂದು ಒಂದು ಸಾಂಕೇತಿಕ ಧರಣಿ ಸತ್ಯಾಗ್ರಹ ಮಾಡಲಾಯಿತು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹಾಗೂ ೩೦ ಸಾವಿರ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು, ೩೭೧ ನೇ ಸಮರ್ಪಕ ಅನುಷ್ಠಾನಕ್ಕಾಗಿ ಅನುಷ್ಠಾನ ಪ್ರಾಧಿಕಾರ ರಚಿಸಬೇಕು, ಕೆ.ಕೆ.ಆರ್.ಡಿ.ಬಿ. ಅನುದಾನ ಬಳಕೆಗೆ ಮುಂದಿನ ೧೦ ವರ್ಷಗಳ ಕ್ರಿಯಾ ಯೋಜನೆ ರೂಪಿಸಬೇಕು, ಕೃಷ್ಣ ಕೊಳ್ಳದ ಕರ್ನಾಟಕ ಪಾಲಿನ ೭೦೦ ಟಿ.ಎಂ.ಸಿ.ನೀರು ಬಳಕೆಗೆ ಕಠಿಣ ಕ್ರಮ ಕೈಗೊಳ್ಳಬೇಕು.
ಧರಣಿ ಸತ್ಯಾಗ್ರಹ ಬೆಂಬಲಿಸಿ ಮಾತನಾಡಿದ ಮಾಜಿ ಶಾಸಕ ಮಹಿಮಾ ಪಟೇಲ ಮಾತನಾಡಿ, ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಇಲ್ಲಿಯ ಬೇಡಿಕೆಗಳಿಗೆ ಅನುಗುಣವಾಗಿ ಸರಕಾರ ಯೋಜನೆಗಳನ್ನು ರೂಪಿಸಿ ಸಮರ್ಪಕವಗಿ ಅನುಷ್ಠಾನಗೊಳಿಸುವಲ್ಲಿ ಮುಂದಾಗಬೇಕೆAದು ಒತ್ತಾಯಿಸಿದರು.ವಿ
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ೩೭೧ ಜೆ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಉದ್ಯೋಗ, ಪದೋನ್ನತಿ, ನೇಮಕಾತಿ ಸಂದರ್ಭದಲ್ಲಿ ನಮ್ಮ ಭಾಗದವರಿಗೆ ಅನ್ಯಾಯವಾಗುತ್ತಿದ್ದು, ಸರಕಾರ ಸಚಿವ ಸಂಪುಟ ಉಪಸಮಿತಿಯ ಸಭೆಯಲ್ಲಿ ಅಗತ್ಯ ತಿದ್ದುಪಡಿ ಮಾಡಿಕೊಂಡು ಈ ಭಾಗದ ಜನರ ಪರವಾಗಿ ನಿರ್ಣಯಗಳನ್ನು ಕೈಗೊಳ್ಳಬೇಕು, ಸದನದ ಒಳಗಡೆ ಸಮಿತಿಯ ಬೇಡಿಕೆಗಳ ಕುರಿತು ನಾನೂ ಕೂಡ ಹೋರಾಟ ಮಾಡುತ್ತೇನೆ, ನಿಮ್ಮ ಹೋರಾಟಕ್ಕೆ ನಿರಂತರ ಬೆಂಬಲಿಸುವುದಾಗಿ ಹೇಳಿದರು.
ವಕೀಲರ ಸಂಘದ ರಾಜ್ಯ ಪರಿಷತ್ ಸದಸ್ಯೆ ಸಂಧ್ಯಾ ಮಾದಿನೂರ ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ ೩೭೧ ಜೆ ಬಂದು ೧೩ ವರ್ಷ ಕಳೆದರೂ ಸಹ ನಮ್ಮ ಭಾಗದ ಯುವಕರ ಬೇಡಿಕೆಗಳು ಈಡೇರುತ್ತಿಲ್ಲ, ಪ್ರತಿಯೊಂದು ಅಭಿವೃದ್ದಿಗೆ ಹೋರಾಟ ಅನಿವಾರ್ಯವಾಗಿದ್ದು, ೩೭೧ ಜೆ ಅನುಷ್ಠಾನಕ್ಕೆ ಸರಕಾರದ ಮೀನಮೇಷವೇಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ಈ ಭಾಗದ ಏಳಿಗೆಗಾಗಿ ನಿರಂತರವಾಗಿ ಹೋರಾಟ ಹಮ್ಮಿಕೊಳ್ಳುತ್ತಿದ್ದು, ಸರಕಾರ ಇಲ್ಲಿಯ ಜನರ ಬೇಡಿಕೆಗಳನ್ನು ನಿರ್ಲಕ್ಷಿಸದೇ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಕೆಲಸ ನಿರ್ವಹಿಸಬೇಕೆಂದು ಒತ್ತಾಯಿಸಿದರು.
ಸಾಹಿತಿ ಸಿದ್ದು ಯಾಪಲಪರವಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸರಕಾರ ನಮ್ಮ ಪಾಲಿನ ಹಣವನ್ನು ಖರ್ಚು ಮಾಡಬೇಕು, ಪ್ರತಿ ವರ್ಷ ೫ ಸಾವಿರ ಕೋಟಿ. ರೂ.ಗಳನ್ನು ಕೊಡುವುದರ ಮೂಲಕ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಒತ್ತಾಯಿಸಿದರು.
ನಿರ್ಣಯ: ಇದೇ ತಿಂಗಳು ಸೆ.೧೭ ರಂದು ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗಮಿಸುವ ಸಂದರ್ಭದಲ್ಲಿ ೩೭೧ ಜೆ ಸಮರ್ಪಕ ಅನುಷ್ಠಾನ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯಲಿರುವ ಪ್ರತಿಭಟನಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯಿಂದ ೫೦೦ ಕ್ಕೂ ಹೆಚ್ಚು ಜನರು ತೆರಳಲು ನಿರ್ಧರಿಸಲಾಯಿತು.ಈ
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಹಿರಿಯ ಹೋರಾಟಗಾರರಾದ ಅಲ್ಲಮ ಪ್ರಭು ಬೆಟ್ಟದೂರ, ಸಾಹಿತಿಗಳಾದ ಡಿ.ಎಂ.ಬಡಿಗೇರ, ಮಾಲಾ ಬಡಿಗೇರ, ಸಾವಿತ್ರಿ ಮುಜುಮದಾರ, ರವಿ ಕಾಂತನವರ, ಜಿಲ್ಲಾಧ್ಯಕ್ಷ ಸಂತೋಷ ದೇಶಪಾಂಡೆ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಕನೂರ, ರಮೇಶ ತುಪ್ಪದ, ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಗೊಂಡಬಾಳ, ಹುಲಗಪ್ಪ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಸಂಕನಗೌಡರ, ಸೋಮನಗೌಡ ಹೊಗರನಾಳ, ಮಂಜುನಾಥ ಅಂಗಡಿ, ಆನಂದ ಹಳ್ಳಿಗುಡಿ, ಹನುಮೇಶ ಕಲ್ಮಂಗಿ, ರಾಜೇಶ ಸಸಿಮಠ, ಜಗದೀಶಗೌಡ ತೆಗ್ಗಿನಮನಿ, ಗಿರೀಶ ಪಾನಘಂಟಿ, ರಾಜಾಭಕ್ಷಿ ಎಚ್.ವಿ. ಶ್ರೀನಿವಾಸ ಪಂಡಿತ, ಚನ್ನಬಸಪ್ಪ ಕಡ್ಡಿಪುಡಿ, ಜೆ.ಡಿ.ಎಸ್. ಮುಖಂಡ ಮಂಜುನಾಥ ಸೊರಟೂರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ, ಆಶೋಕ ಕುಂಬಾರ, ಶುಕ್ರುಸಾಬ ನದಾಫ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ವಿ.ಕಣವಿ, ಪಿ.ವಿ.ಪರುತಗೌಡ್ರ, ನವೋದಯ ವಿರುಪಾಕ್ಷಪ್ಪ, ಗವಿಸಿದ್ಧಪ್ಪ ಹಂಡಿ, ಬಸವರಾಜ ಮೇಲಸಕ್ರಿ, ಮಂಜುನಾಥ ಮಸ್ಕಿ, ಶಂಕರ ಸಿಂಗ್ರಿ, ಕಾಶಪ್ಪ ಚಲುವಾದಿ, ಶಿವಪ್ಪ ಚಲುವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
