ಸ್ಮಾರಕಗಳ ತಜ್ಞ ಮೈಸುರಿನ ಧರ್ಮೇಂದ್ರರಿಂದ ಉಪನ್ಯಾಸ
ನ,30ಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಕನ್ನಡ ರಾಜೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 28- ನಗರದ ಸಾಹಿತ್ಯ ಭವನದಲ್ಲಿ ನ, 30 ರಂದು ಸೋಮವಾರ ಸಂಜೆ 5 ಕ್ಕೆ 71ನೇ ಕನ್ನಡ ರಾಜೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ಹೈದ್ರಾಬಾದ್ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್. ನಾಸೀರ ಕಂಠಿ ಹೇಳಿದರು.
ಅವರು ಶನಿವಾರ ಬೆಳಿಗ್ಗೆ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿಡಿ ಹೈದ್ರಾಬಾದ್ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದ ಸಾನಿಧ್ಯನ್ನು ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಹಾಗೂ ಯೂಸುಫಿಯಾ ಮಸ್ಜಿದ್ ನ ಮುಫ್ತಿ ನಜೀರ್ ಅಹ್ಮದ್ ವಹಿಸಲಿದ್ದು , ಸಚಿವ ಶಿವರಾಜ ತಂಗಡಗಿ ಉದ್ಘಾಟನೆ ಮಾಡಲಿದ್ದು ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಮಾಜಿ ಶಾಸಕರಾದ ಇಕ್ಬಾಲ್ ಅನ್ಸಾರಿ , ಸಂಗಣ್ಣ ಕರಡಿ, ಕೆ, ಬಸವರಾಜ ಹಿಟ್ನಾಳ , ಸಂಸದ ಕೆ ರಾಜಶೇಖರ ಹಿಟ್ನಾಳ, ಮುಖಂಡ ಕಳಕಪ್ಪ ಕಂಬಳಿ ,ಮಂಜುಳಾ ಕರಡಿ , ನಿರ್ದೇಶಕ ರಮೇಶ ಬಾಬು ಸುರ್ವೆ ,ಸಿ ,ವಿ ಚಂದ್ರಶೇಖರ್ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಲಿದ್ದಾರೆ.
ಉಪನ್ಯಾಸ ; ಕಾರ್ಯಕ್ರಮಕ್ಕೆ ಐತಿಹಾಸಿಕ ಸ್ಮಾರಕಗಳ ತಜ್ಞ ,ಚಿಂತಕ ಮೈಸುರಿನ ಧರ್ಮೇಂದ್ರ ಅರೇನಹಳ್ಳಿ ಕೊಪ್ಪಳ ಕೋಟೆ ಸೇರಿದಂತೆ ಜಿಲ್ಲೆಯ ಇತಿಹಾಸದ ಬಗ್ಗೆ ವಿಶೇಷ ಉಪನ್ಯಾಸ ನೀಡಕಲಿದ್ದಾರೆ.
ಪ್ರಶಸ್ತಿ ; ರಾಜೋತ್ಸವದ ಅಮಗವಾಗಿ 1ರಿಂದ 5 ನೇ ತರಗತಿ ಮಕ್ಕಳಿಗೆ ಚಿತ್ರಕಲೆ , 6ರಿಂದ 9 ರ ವರೆಗೆ ಪ್ರಬಂಧ ಮತ್ತು 10 ರಿಂದ 12 ನೇ ತರಗತಿ ವರೆಗಿನ ಮಕ್ಕಳಿಗೆ ಭಾಷಣ ಸ್ಪರ್ದೆ ಇಗಾಗಲೆ ನಡೆಸಲಾಗಿದ್ದು ವಿಜಯಿತ ಮಕ್ಕಳಿಗೆ ಪ್ರಶಸ್ತಿ ಹಾಗೂ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಾಧ್ಯಕ್ಷ ಉಮೇಶ ಬಾಬು ಸುರ್ವೆ , ಪ್ರಧಾನ ಕಾರ್ಯದರ್ಶಿ ಅಲಿ ಹಸನ್ , ಸಂಘಟನಾ ಕಾರ್ಯದರ್ಶಿ ಎಸ್ , ಮಹೆಬೂಬ ಖಾದ್ರಿ ಹಾಗೂ ಮಲ್ಲಿಕಾರ್ಜುನ ಇದ್ದರು.
