MRK_9670

‌ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೦೯- ನಿರಂತರ ಪ್ರಯತ್ನದಿಂದ  ಕ್ರೀಡೆ ಯಲ್ಲಿ ಯಶಸ್ಸು ಸಾಧ್ಯವಾಗಲಿದೆ ಎಂದು ಹಿರಿಯ   ಸಾಹಿತಿ ಪ್ರೊ. ಅಲ್ಲಮ ಪ್ರಭು ಬೆಟ್ಟದೂರ ಅವರು ಹೇಳಿದರು.
ಅವರು ಕೊಪ್ಪಳದಲ್ಲಿ ಶನಿವಾರ ದಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ ಇವರ ಸಹಯೋಗದಲ್ಲಿ 2023-24 ಸಾಲಿನ ಅಂತರ್ ಕಾಲೇಜು ಗುಡ್ಡಗಾಡು 10 ಕಿ. ಮೀ ಓಟದ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರತಿದಿನ  ದೇಹದ ಎಲ್ಲ ಅಂಗಾಂಗಳಿಗೆ ವ್ಯಾಯಾಮಕ್ಕಾಗಿ ಕ್ರೀಡೆ ಯಲ್ಲಿ ತೊಡಗಿಸಿ ಕೋಳ್ಳಿ   ಸ್ಪದ್ರೆಯಲ್ಲಿ ಭಾಗವಹಿಸುವುದು ಮುಖ್ಯ   ಬಹುಮಾನ ಆಲ್ಲ  ವಿಧ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿ ಕೊಳ್ಳಿ ಎಂದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ರಾದ ಪ್ರೊ. ಗಣಪತಿ ಲಮಾಣಿ ವಹಿಸಿದ್ದರು. ಮುಖ್ಯ ಅತಿಥಿ ಯಾಗಿರುವ ಶಿಕ್ಷಣ ಪ್ರೇಮಿ ಬಿ. ಜಿ. ಕರಿಗಾರ ಅವರು ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಧ್ಯಪಕರಾದ ಪ್ರೊ. ವಿಟೋಬ, ಶ್ರೀ ಮತಿ ನಾಗರತ್ನ, ಸುಮಿತ್ರಾ ಮತ್ತು ವಿನೋದು ಹಾಗೂ ಇತರರು ಇದ್ದರು.

ಭಹುಮಾನ:  ಪ್ರಥಮ ಬಹುಮಾನ ವನ್ನು ಬಳ್ಳಾರಿ ಅಲ್ಲಮ ಸುಮಂಗಲ ಮಹಿಳಾ ಕಾಲೇಜು ನ ಕಾವ್ಯ, ಎರಡನೇ ಬಹುಮಾನ ವನ್ನು ಹುಬ್ಬಳ್ಳಿ ಮಹಿಳಾ ಕಾಲೇಜಿನ ತನಿಷ್ ಮತ್ತು ತೃತೀಯ ಬಹುಮಾನ ವನ್ನು ರಾಯಚೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೂಮಿಕಾ ಅವರು ಪಡೆದುಕೊಂಡರು.

ಈ ಕ್ರೀಡಾ ಕೂಟದಲ್ಲಿ ಧಾರವಾಡದ ಜಗಳೂರು ಮಹಿಳಾ ಕಾಲೇಜು ಆಟದ ಪ್ರಥಮ ಚಾoಪಿಯನಿ ಆಗಿ ಮತ್ತು ಕೊಪ್ಪಳ ದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಆಟದ ದ್ವಿತೀಯ ಚಾoಪಿಯನ್ ಆಗಿ ಹೊರಹೋಮ್ಮಿದರು. ಡಾ. ಹುಲಿಗೆಮ್ಮ ಸ್ವಾಗತಿಸಿದರು. ಡಾ. ಪ್ರದೀಪ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ. ನರಸಿಂಹ ವಂದಿಸಿದರು. ಪವಿತ್ರ ಪ್ರಾರ್ಥನೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!