
ದಾವಣಗೆರೆಯ 24ನೇ ಮಹ ಅಧಿವೇಶನ
ಸಂಡೂರಿನಲ್ಲಿ ವೀರಶೈವ ಲಿಂಗಾಯತರ ಪೂರ್ವಭಾವಿ ಸಭೆ
ಕರುನಾಡ ಬೆಳಗು ಸುದ್ದಿ
ಸಂಡೂರು:( ಬಳ್ಳಾರಿ), ೨೧- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ದಾವಣಗೆರೆ ಜಿಲ್ಲಾ ಘಟಕದ ನೇತೃತ್ವದಲ್ಲಿ, ಇದೇ ತಿಂಗಳು 23 24ರಂದು ಎರಡು ದಿನಗಳ ಕಾಲ ದಾವಣಗೆರೆಯಲ್ಲಿ ನಡೆಯಲಿರುವ, 24ನೇ ಮಹ ಅಧಿವೇಶನದ ಅಂಗವಾಗಿ, ಬಳ್ಳಾರಿ ಜಿಲ್ಲೆಯ ಸಂಡೂರು ಸಂಘದ ಕಚೇರಿಯಲ್ಲಿ ವೀರಶೈವ ಸಂಘದ ಜಿಲ್ಲಾಧ್ಯಕ್ಷರಾದ ಚಾನೆಲ್ ಶೇಖರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ದಾವಣಗೆರೆಯಲ್ಲಿ ನಡೆಯಲಿರುವ ಸಂಘದ 24ನೇ ಮಹಾ ಅಧಿವೇಶನ ಜಯಗೊಳಿಸಲು ಎಲ್ಲರೂ ಸಹಕರಿಸಬೇಕೆಂದು ಈ ಸಂದರ್ಭವಾಗಿ ಶೇಕರ್ ತಿಳಿಸಿದರು. ಸಭೆಯಲ್ಲಿ ಸಂಡೂರಿನ ವೀರಶೈವ ಮಹಾ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್, ಗೌರವಾಧ್ಯಕ್ಷರಾದ ಮೇಲ್ಮನೆ ಶಂಕ್ರಪ್ಪ, ವಾಡ ಮಾಜಿ ಅಧ್ಯಕ್ಷರಾದ ಎರಿಸ್ವಾಮಿ ಕರಡಿ, ತಾಲೂಕಾಧ್ಯಕ್ಷರಾದ ಭುವನೇಶ್ ಮೇಟಿ, ರುದ್ರೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ರಾಜ್ಯ ಕಾರ್ಯದರ್ಶಿಗಳಾದ ಡಿ ಕಗ್ಗಲ್ ಶಂಕರ್ ಹಾಗೂ ಹಲವಾರು ಮಂದಿ ಉಪಸ್ಥಿತರಿದ್ದರು.