31d795bd-e9ea-441b-9139-3bedcedf52b8

ಕಲಾವಿದರನ್ನು ಗೌರವಿಸುವುದು ಸಾಮಾಜಿಕ ಜವಾಬ್ದಾರಿ

ಪ್ರೊ.ಎಂ ಎಸ್.ಹಿರೇಮಠ

ಕರುನಾಡ ಬೆಳಗು ಸುದ್ದಿ
ಕುಕನೂರ 01-ಕಲಾವಿದರನ್ನು, ಕವಿಗಳನ್ನು, ಗೌರವಿಸುವುದು ಸಾನಾಜಿಕ ಜವಾಬ್ದಾರಿ ಆಗಿದೆ.ಎಂದು ಪ್ರೊ.ಎಂ.ಎಸ್. ಹಿರೇಮಠ ಅಭಿಪ್ರಾಯಪಟ್ಟರು.
ಅವರು ಭಾನುವಾರ ಪ್ರತೀ(ಕ)ಕ್ಷಾ ಪ್ರಕಾಶನ ಆಶ್ರಯದಲ್ಲಿ   ಬಿ.ಎಸ್.ಆರ್ ಗುಬ್ಬಿ ನಾಟಕ ಕಂಪನಿಯ ವೃತ್ತಿರಂಗಭೂಮಿಯ ಹಾಸ್ಯ ಕಲಾವಿದ ಶಿದ್ರಾಮ ತತ್ರಾಣಿ ಅವರ ಸನ್ಮಾನ ಕಾರ್ಯಕ್ರಮ ದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತಿದ್ದರು.
ಜೀವನಕ್ಕೊಂದು ಕಲೆ ಇರಬೇಕು.ಎನ್ನುವುದು ಬಹಳ ಮುಖ್ಯ. ಮನೆಗೊಂದು ತೋಲೆ ಇರಬೇಕು,ಅಡಿಗೆಯ ಮನೆಗೊಂದು ಒಲೆ ಇರಬೇಕು.ಜೀವನಕೊಂದು ಕಲೆಯಿರಬೇಕು ಅಂದರೆ ಜೀವನದಲ್ಲಿ ಬರುವ ದು:ಖ ದುಮ್ಮಾನವನ್ನು ಹೋಗಲಾಡಿಸುತ್ತದೆ.ಬದುಕನ್ನು ಹಸನುಗೊಳಿಸುತ್ತದೆ.ಆದ್ದರಿಂದ ಕಲಾವಿದರನ್ನು ಕರೆಯುವುದು,ಅಪ್ಪಿಕೊಳ್ಳುವುದು,ಅವರನ್ನು ಗೌರವಿಸುವುದು ಸಾಮಾಜಿಕ ಜವಬ್ದಾರಿಯಾಗಿದೆ ಎಂದು ಹೇಳಿದರು.
ಇನ್ನೋರ್ವ ಅತಿಥಿಗಳಾದ ತತ್ವಪದಕಾರ ಆರ್.ಪಿ.ರಾಜೂರ ಅವರು ಮಾತನಾಡಿ,ಸಮಾಜದಲ್ಲಿ ಇರುವ ಅಂಕುಡೊಂಕುಗಳನ್ನು ತಿದ್ದಿತೀಡಲು ರಂಗಭೂಮಿ ಮುಖ್ಯವಾಹಕವಾಗಿದೆ.ಕಲಾವಿದರ ಬದುಕು ಪಾತ್ರದಲ್ಲಿ ನಟನೆಯಂತೆ ವಾಸ್ತವಿಕವಾಗಿರುವುದಿಲ್ಲ.ಅಳುನುಂಗಿ ನಗೆಯನ್ನು ನೀಡುತ್ತಾರೆ.ಗುಬ್ಬಿ ಕಂಪನಿಯಲ್ಲಿ ಸಿದ್ರಾಮ ತತ್ರಾಣಿಯವರ ಹಾಸ್ಯ ಪಾತ್ರ ಜನಮೆಚ್ಚುಗೆಗೆ ಪಾತ್ರವಾಗಿದೆ.ಅವರ ನೈಜ ಕಲಾವಿದರು.ಅವರು ರಂಗಭೂಮಿ ಆಸ್ತಿ .ಅವರ ಕಲೆಯನ್ನು ಗುರುತಿಸಿ,ಪ್ರತೀ(ಕ)ಕ್ಷಾ ಪ್ರಕಾಶನ ಸನ್ಮಾನಿಸುತ್ತೀರುವುದು ಶ್ಲಾಘನೀಯವಾದದ್ದು ಎಂದು ಹೇಳಿದರು.
ಸನ್ಮಾನಿತ ಕಲಾವಿದ ಸಿದ್ರಾಮ ತತ್ರಾಣಿ ಮಾತನಾಡಿ, ಕಲೆ ಎಲ್ಲರಲ್ಲೂ ಇರುತ್ತದೆ.ಕಲಾವಿದ ಪರಕಾಯ ಪ್ರವೇಶ ಮಾಡಬೇಕು ಕೊಟ್ಟ ಪಾತ್ರಕ್ಕೆ ಜೀವ ತುಂಬವುದು ಮುಖ್ಯ. ನಮ್ಮ ಕಲೆಯನ್ನು ಮೆಚ್ಚಿ ಪ್ರತೀ(ಕ)ಕ್ಷಾ ಪ್ರಕಾಶನ ಸನ್ಮಾನಿಸಿರುವುದು ಅಭಿಮಾನ ಮೂಡಿಸಿದೆ.ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸನಾಜ ಸೇವಕ ಲಕ್ಷ್ಮಣ ಬೆದವಟ್ಟಿ ವಹಿಸಿ ಮಾತನಾಡಿದರು. ಗಂಗಾಧರ ಅವಟೇರ ಸ್ವಾಗತಿಸಿ,ವಂದಿಸಿದರು.

Leave a Reply

Your email address will not be published. Required fields are marked *

error: Content is protected !!