IMG-20240112-WA0019

ಗರ್ಭಿಣಿಯರಿಗೆ ಸೋಂಕು ಬರದಂತೆ ಮುಂಜಾಗ್ರತೆ ವಹಿಸಿ  ನಿಮ್ಮ ಕುಟುಂಬದಲ್ಲಿ ಅರೋಗ್ಯವಂತ ಮಕ್ಕಳನ್ನು ಪಡೆಯಿರಿ ಎಂದು ಮಕ್ಕಳ ತಜ್ಞ ವೈದ್ಯ ಡಾ.ಮೀನು

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ, 12- ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ತಾಯಿಯಿಂದ ಮಗುವಿಗೆ ಎಚ್‍ಐವಿ, ಶಿಫಿಲಿಸ್ ಮತ್ತು ಹೆಪ್ಟೈಟಿಸ್ ಹರಡುವಿಕೆ ನಿರ್ಮೂಲನೆ ಆಂದೋಲನ ಕಾರ್ಯಕ್ರಮ ಜರುಗೀತು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೃಷ್ಣ ಹೊಟ್ಟಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು

ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದ ಮುಖ್ಯ ಉದ್ದೇಶ ತಾಯಿ ಮರಣ ಕಡಿಮೆ ಮಾಡುವುದು ಮಕ್ಕಳ ಜನನ ಪ್ರಮಾಣ ಹೆಚ್ಚಿಸುವುದು. ಗರ್ಭಿಣಿಯರಿಗೆ ಹೆಚ್.ಐ.ವಿ, ಸಿಪಿಲಿಸ್ ಹಾಗೂ ಹೆಪಾಟಿಟಸ್ ಹರಡುವ ಮಾರ್ಗಗಳನ್ನು ತಿಳಿಸಿದರು ಎಲ್ಲಾ ಗರ್ಭಿಣಿಯರು ರಕ್ತ ಪರೀಕ್ಷೆಯನ್ನ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ಯಾರಿಗಾದರೂ ಕಾಯಿಲೆ ಇದ್ದರೆ ಅಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.

ಸ್ತ್ರೀ ರೋಗ ತಜ್ಞ ಡಾ. ಮಹಾಂತೇಶ್ ಮಾತನಾಡಿ ಬ್ಯಾಕ್ಟಿರಿಯಾದಿಂದ ಸಿಫಿಲಿಸ್ ಗರ್ಭಿಣಿಯರಿಗೆ ಬರಬಹುದು. ಆದಕಾರಣ ಹೆರಿಗೆ ಮುಂಚೆ ಎಲ್ಲಾ ಗರ್ಭಿಣಿಯರು ಈ ಕಾಯಿಲೆಗೆ ಸಂಬಂಧಿಸಿದಂತೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.

ಗರ್ಭಿಣಿಯರಿಗೆ ಸೋಂಕು ಬರದಂತೆ ಮುಂಜಾಗ್ರತೆ ವಹಿಸಿ ನಿಮ್ಮ ಕುಟುಂಬದಲ್ಲಿ ಅರೋಗ್ಯವಂತ ಮಕ್ಕಳನ್ನು ಪಡೆಯಿರಿ ಎಂದು ಮಕ್ಕಳ ತಜ್ಞ ವೈದ್ಯ ಡಾ.ಮೀನು ಹೇಳಿದರು

ಇದೇ ಸಂದರ್ಭದಲ್ಲಿ 40 ಜನ ಮಹಿಳೆಯರಿಗೆ  ಉಡಿ ತುಂಬಲಾಯಿತು. ಮತ್ತು ಗರ್ಭಿಣಿಯರಿಗೆ ಹೆಚ್.ಐ.ವಿ, ಸಿಫಿಲಿಸ್ ಹಾಗೂ ಹೆಪಾತೈತಿಸ್ ರಕ್ತ ಪರೀಕ್ಷೆ ಮಾಡಲಾಯಿತು.ಐಸಿಟಿಸಿ ಸಿಬ್ಬಂದಿ ಕಾಳಪ್ಪ ಬಡಿಗೇರ . ಚಂದ್ರಶೇಖರ್ ನಾಯಕ, ಹದಿಹರೆಯದ ಅರೋಗ್ಯ ಆಪ್ತ ಸಮಾಲೋಚಕ ಶರಣಪ್ಪ ಉಪ್ಪಾರ, ತಾಲೂಕ ಆಶಾ ಮೇಲ್ವಿಚಾರಕ ಮಂಜುಳಾ ಛಲವಾದಿ ಕಿರಿಯ ಅರೋಗ್ಯ ಸುರಕ್ಷತಾ ಅಧಿಕಾರಿ ಶ್ರೀದೇವಿ ರೆಡ್ಡೆರ, ಶಿಲ್ಪಾ ಭಜೇಂತ್ರಿ. ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!