IMG-20240112-WA0028

ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿ  ಸಂತೋಷ್ ಮಾರ್ಟಿನ್ 

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,12- ಜೆನೆಸಿಸ್ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವಿದ್ದು, 56 ಮಕ್ಕಳಿಂದ ಪ್ರಾರಂಭವಾದ ಶಾಲೆಯಲ್ಲಿ ಇಂದು 1400ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ, ಇದು ನಮ್ಮ ಹೆಮ್ಮೆ ಎಂದು ಜೆನೆಸಿಸ್ ಶಾಲೆಯ ಸಂಸ್ಥಾಪಕ, ಮುಖ್ಯ ವ್ಯವಸ್ಥಾಪಕ ಸಂತೋಷ್ ಮಾರ್ಟಿನ್ ಅವರು ಹೇಳಿದರು.

ನಗರದ ಬಸವ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜೆನೆಸಿಸ್ ಶಾಲೆಯ 9ನೇ ವರ್ಷದ ವಾರ್ಷಿಕೋತ್ಸವ, ಸಂಸ್ಕೃತಿ-2024 ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ, ಸಂಗೀತ, ಯೋಗ, ಹಬ್ಬಗಳ ಆಚರಣೆ, ನಮ್ಮ ಸoಸ್ಕೃತಿ, ಜೊತೆಗೆ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ ಎಂದರು.

ಪ್ರತಿಯೊಬ್ಬ ಮಕ್ಕಳಲ್ಲೂ ಪ್ರತಿಭೆ ಅಡಗಿರಲಿದೆ, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ, ಪ್ರತಿಯೊಬ್ಬ ಮಕ್ಕಳು ಸಾoಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎನ್ನುವ ಅಭಿಲಾಷೆ ನಮ್ಮದು, ಈ ಹಿನ್ನೆಲೆ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ದಂತ ವೈದ್ಯ ಡಾ.ಮಂಜುನಾಥ್ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕಿದೆ, ಶಿಕ್ಷಣ ಇಲ್ಲದಿದ್ದರೆ, ಏನೂ ಸಾಧಿಸಲು ಸಾದ್ಯವಿಲ್ಲ, ಮಕ್ಕಳನ್ನು ಹಿಂತಿರುಗಿ ನೋಡಲು ಬಿಡಬೇಡಿ, ಮಕ್ಕಳಿಗೆ ಆಸ್ತಿ ಮಾಡುವ ಬದಲು, ಒಳ್ಳೆಯ ಶಿಕ್ಷಣ ಕಲ್ಪಿಸಿ ಮಕ್ಕಳನ್ನೇ ಆಸ್ತಿಯ್ನಾಗಿ ಮಾಡಬೇಕು ಎಂದರು.

ಹಿರಿಯ ಪತ್ರಕರ್ತ ಎಂ.ಅಹಿರಾಜ್ ಮಾತನಾಡಿ, ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ, ಅಡ್ವಾನ್ಸ್ ಟೆಕ್ನಾಲಜಿ ಬಂದಿದೆ, ಅಂಗೈಲಿ ಇಡೀ ಜಗತ್ತನ್ನೇ ನೋಡಬಹುದು, ಮೊಬೈಲ್ ಬಳಕೆ ಇತ್ತೀಚೆಗೆ ಮಕ್ಕಳಲ್ಲಿ ಹೆಚ್ಚಾಗಿದೆ, ಪಾಲಕರು ಮಕ್ಕಳ ಬಗ್ಗೆ ಗಮನಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಟ್ರಸ್ಟಿ ಸೋನಿಯಾ ಸೂನ್ಸ್, ಕಲಾವತಿ, ಸೋಮು ವಿಜಿಯಾ, ನಜಮಾ ಬೇಗಂ ಇತರರು ಇದ್ದರು. ನಂತರ ಮುದ್ದು ಮಕ್ಕಳಿಂದ ಸಾoಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿಯೊಬ್ಬ ಮಕ್ಕಳು ಅತ್ಯುತ್ತಮವಾಗಿ ಪ್ರದರ್ಶನ ನೀಡಿ ಗಮನಸೆಳೆದರು.

Leave a Reply

Your email address will not be published. Required fields are marked *

error: Content is protected !!