IMG-20240114-WA0009

ಮಕ್ಕಳ ಹಕ್ಕುಗಳ ಗ್ರಾಮ ಸಭೆ ಮತ್ತು ವಿಕಲಚೇತನರ ಸಮನ್ವಯ ಸಭೆ

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ,14- ಇಂದಿನ ವಿದ್ಯಾರ್ಥಿಗಳು ನಾಳೆ ದೇಶದ ಪ್ರಜೆಗಳು ಸಣ್ಣ ಮಕ್ಕಳು ಇದ್ದಾಗಲೇ ಒಳ್ಳೆಯ ವಿದ್ಯೆ ನಡೆ ನುಡಿ ಸಂಸ್ಕೃತಿ ಸಂಪ್ರದಾಯ ಬಗ್ಗೆ ಮಕ್ಕಳಿಗೆ ಕಲಿಸಬೇಕು ಎಂದು ಗ್ರಾಮ ಪಂಚಾಯತಿ ಪಿಡಿಒ ವೀರಭ್ರಗೌಡ ಮೂಲಿಮನಿ ಹೇಳಿದರು ತಾಲ್ಲೂಕಿನ ಮುಧೋಳ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಮತ್ತು ವಿಕಲಚೇತನರ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯೆಯ ಬಾಳಿನ ಸಂಪತ್ತು ಮಕ್ಕಳನ್ನು ತಿದಿ ತಿಡಿ ಗುಣಮಟ್ಟದ ಶಿಕ್ಷಣವನ್ನು ಬೋಧನೆ ಮಾಡಿ ಅವರನ್ನು ಒಳ್ಳೆಯ ಮಾರ್ಗದಲಿ ನಡೆಸುವ ಶಕ್ತಿ ಶಿಕ್ಷಕರಿಗೆಯಿದೆ ಈ ಮುದ್ದು ಮಕ್ಕಳಿಗೆ ಶಿಕ್ಷಕರು ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಹಾಗೆ ಮಕ್ಕಳು ಕಲಿಯುತ್ತಾರೆ ಈ ಮಕ್ಕಳಲ್ಲಿ ಮಾನವೀಯ ಮೌಲ್ಯ ಮತ್ತು ಉತ್ತಮವಾದ ಶಿಕ್ಷಣವನ್ನು ತುಂಬುವ ಕೆಲಸ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದು ಪ್ರಸ್ತಾವಿಕವಾಗಿ ಮಾತನಾಡಿದರು,

ನಂತರ ಅಂಗನವಾಡಿ ಮೇಲ್ವಿಚಾರಕಿಯಾದ ಚೆನ್ನಮ್ಮ ಶಾನಭೋಗರ್ ಅವರು ಮಾತನಾಡಿ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅಧಿಕಾರಿಗಳು ಮಾತನಾಡಬೇಕು ಎಂದು ಹೇಳಿದರು,

ಯಲಬುರ್ಗಾ ಪೊಲೀಸ್ ಠಾಣೆಯ ಎಎಸ್ಐ ಬಸವರಾಜ್ ಮಾಲಗಿತ್ತಿ ಅವರು ಮಾತನಾಡಿ 18 ವರ್ಷದೊಳಗಿನ ಮಕ್ಕಳಿಗೆ ಬಾಲ್ಯ ವಿವಾಹ ಮತ್ತು ದುಡಿಯುವದಕ್ಕೆ ಕಳಿಸುವದನ್ನು ಮಾಡಿದರೆ ಕಠಿಣ ಕ್ರಮ ವಹಿಸಲಾಗುವದು ಮತ್ತು ಬಾಲ್ಯ ವಿವಾಹದ ಬಗ್ಗೆ ಮಕ್ಕಳಿಗೆ ಬಾಲ್ಯ ವಿವಾಹದಿಂದಾಗುವ ಅನಾನೂಕೂಲಗಳ ಬಗ್ಗೆಯು ಬಾಲ್ಯ ವಿವಾಹ ಮಾಡಿದರೆ ಯಾವ ಶಿಕ್ಷೆ, ಯಾರ ಮೇಲೆ ಶಿಕ್ಷೆ ಜರುಗಿಸಲಾಗುವದೆಂದು ಹಾಗೂ ಯಾವ ಕಾಯ್ದೆಯಡಿಯಲ್ಲಿ ಕ್ರಮ ಜರುಗಿಸಲಾಗುವದೆಂಬುದರ ಬಗ್ಗೆ ತಿಳಿಸಿದರು. ಅಂತಾ ಮಗುವಿನ ಬಗ್ಗೆ 1098 ಅಥವಾ 112ಗೆ ಕರೆ ಮಾಡಿ ತಿಳಿಸಿದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಎಲ್ಲಾ ಇಲಾಖೆಗಳಿಗೂ ಮಾಹಿತಿ ಕಳುಹಿಸಿ ಆ ಮಗುವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವದು ಹೇಗೆ ಎಂಬ ಬಗ್ಗೆ ತಿಳಿಸಿದರು ವಿಕಲಚೇತನರ ಗ್ರಾಂ ಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಗವಿಕಲರ ವಿಶೇಷ ಸಮನ್ವಯ ಗ್ರಾಮಸಭೆ ಉದ್ದೇಶಿಸಿ ಮಾತನಾಡಿದ ವಿ ಆರ್ ಡಬ್ಲ್ಯೂ ವೀರಭದ್ರಪ್ಪ ನಿಡಗುಂದಿ ಅವರು ಮಾತನಾಡಿ ಅಂಗವಿಕಲರ ಅಭಿವೃದ್ಧಿಗಾಗಿ ಗ್ರಾಪಂ ಅನುದಾನದಲ್ಲಿ ಶೇ.5 ಮೀಸಲಿರುತ್ತದೆ. ನರೇಗಾ ಯೋಜನೆ ಕೆಲಸದಲ್ಲೂ ರಿಯಾಯತಿ ಇದ್ದು, ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮಕ್ಕಳ ಹಕ್ಕುಗಳ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕ್ರೀಡಾ ಸಾಮಾಗ್ರಿಗಳನ್ನು ಮತ್ತು ಆಟದ ಮೈದಾನ ಒದಗಿಸಿ ಕೊಡಬೇಕೆಂದು ಮತ್ತು ವಿದ್ಯಾರ್ಥಿನಿಯರಿಗೆ ಸರಿಯಾದ ಶೌಚಾಲಯವಿಲ್ಲ ಸಭೆಯಲ್ಲಿ ಚರ್ಚಿಸಿದರು, ಗ್ರಾ ಪಂ ಪಿಡಿಓ ವೀರಭದ್ರಗೌಡ ಮೂಲಿಮನಿ ಅವರು ಮಾತನಾಡಿ ನಮ್ಮ ಪಂಚಾಯತಿ ಯಿಂದಾಗುವ ಆಗುವ ಕೆಲಸಗಳನ್ನು ಆದಷ್ಟು ಬೇಗನೆ ಮಾಡಿಸಿ ಕೊಡುವುದಾಗಿ ಹೇಳಿದರು, ಕೆಲವು ಯೋಜನೆಗಳ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆ ಹರಿಸುವದಾಗಿ ಭರವಸೆ ನೀಡಿದರು

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮತಾಜ್ ಬಿ ಹಿರೇಮನಿ ಅವರು ಅಧ್ಯಕ್ಷತೆ ವಹಿಸಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಮತ್ತು ವಿಕಲ ಚೇತನರ ಸಮನ್ವಯ ಸಭೆಯಲ್ಲಿ ವಿವೇಕಾನಂದ ಅವರ ಜಯಂತಿ ಅಂಗವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಹೊಸ ವರ್ಷವು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ವಿಕಲಚೇತನರು ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು,

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶರಣಪ್ಪ ಪುರ್ತಗೇರಿ, ಇನ್ನು ಹಲವಾರು ಮುಖಂಡರು, ಗ್ರಾಮದ ಆಯಾ ಶಾಲೆಯ ಶಿಕ್ಷಕರಾದ ಸರ್ಕಾರಿ ಬಾಲಕಿಯರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ರೇಣುಕಾ, ಸರ್ಕಾರಿ ಬಾಲಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಸನಗೌಡ ದಾನಪ್ಪ ಗೌಡರ, ಬಸವರಾಜ ದಗಲಿ, ಕನಕದಾಸ ಶಾಲೆಯ ಶಿಕ್ಷಕರಾದ ಬಸವರಾಜ್ ಶ್ರೀಗಿರಿ, ತ್ರಿಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕರಾದ ಬಸಮ್ಮ ತಳವಾರ, ಉರ್ದು ಶಾಲೆಯ ಶಿಕ್ಷಕರಾದ ಸೈನಾಜ್ ಅಯಾನ್ ಖಾಜಿ, ರಜಿಯಾಬೇಗಂ, ಅಂಗನವಾಡಿ ಮೇಲ್ವಿಚಾರಕಿ ಚೆನ್ನಮ್ಮ ಶಾನಭೋಗರ, ಸ್ತ್ರೀಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷರು ಈರಮ್ಮ ಮಂಡಲಗಿರಿ, ಪ್ರಾಥಮಿಕ ಆರೋಗ್ಯ ಇಲಾಖೆ ಶಾರದಾ ಬಿಳೆಕಲ್, ಕೆಎಚ್‌ಪಿಟಿ ಪರಿಮಳ ಕೋನಸಾಗರ, ಅಂಗನವಾಡಿ ಶಿಕ್ಷಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಗ್ರಂಥಾಲಯ ಮೇಲ್ವಿಚಾರಕ ಜಗನ್ನಾಥ, ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಗ್ರಾಂಪಂ ಬಿಲ್ ಕಲೆಕ್ಟರ್ ಕರಸಿದ್ದಪ್ಪ ತಮಿನಾಳ ಮತ್ತು ಸಿಬ್ಬಂದಿ ವರ್ಗದವರೆಲ್ಲರೂ ಹಾಜರಿದ್ದರು ವಿವಿಧ ಶಾಲೆಯ ಮಕ್ಕಳು ಎಲ್ಲರೂ ಹಾಗೂ ಗ್ರಾಮದ ವಿಕಲಚೇತನರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು,

Leave a Reply

Your email address will not be published. Required fields are marked *

error: Content is protected !!