IMG-20240114-WA0023

ಹಂಪಿ ಶ್ರೀಗಂಧ ಮರಗಳ್ಳರ ಕೊನೆಗೂ ಬಂಧನ 

ಕರುನಾಡ ಬೆಳಗು ಸುದ್ದಿ

ವಿಜಯನಗರ,14- ಹಂಪಿಯ ಕಮಲ್ ಮಹಲ್ ಆವರಣದ ತ್ರಿಜರಿ ಕಟ್ಟಡದ ಮುಂಭಾಗದಲ್ಲಿದ್ದ ಶ್ರೀಗಂಧದ ಮರವನ್ನು ದಿನಾಂಕ 24.11.2023 ರಂದು ಬೆಳಗಿನ ಜಾವ 02-00 ಗಂಟೆಯಿಂದ ಬೆಳಗ್ಗೆ, 06-00 ರಂದು ಸುಮಾರಿನಲ್ಲಿ ಕಳ್ಳತನ ನಡೆಸಿದ ಪ್ರಕರಣ ನಡೆದಿದೆ.

ಈ ಸಂಬಂಧ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಕೊನೆಗೂ ಶ್ರೀಗಂಧ ಮರ ಕಳ್ಳತನ ಪ್ರಣದಲ್ಲಿ 04 ಜನ ಭಾಗವಹಿಸಿದ್ದು 1) ಗಾಳೆಪ್ಪ , 2) ಕೆ. ಲೋಕೇಶ 3) ಲಕ್ಷ್ಮಣ , 4) ಹುಲುಗಪ್ಪ ಬಂದಿತರು ಹೊಸಪೇಟೆಯವರೆಂದು ತಿಳಿಯಲಾಗಿದೆ.

ಬಂಧಿತ ಆರೋಪಿಗಳಿಂದ ನಗದು ಹಣ 6000/- ರೂ. ಅಂದಾಜು ರೂ. 3,00,000/- ಬೆಲೆ ಬಾಳುವ 01 ಬೊಲೆರೋ ಜೀಪ್, ಅಂದಾಜು ರೂ. 62,000/- ಬೆಲೆ ಬಾಳುವ 02 ಮೋಟಾರ್ ಸೈಕಲ್ ಮತ್ತು 03 ಆಯಂಡ್ರಾಯ್ಡ್ ಮೊಬೈಲ್ ಪೋನ್ ಅಂದಾಜು ರೂ. 5000/- ರೂ ಬೆಲೆ ಬಾಳುವ 2 ಕೆಜಿ ತೂಕವಿರುವ ಶ್ರೀಗಂಧ ಮರದ ಕಟ್ಟಿಗೆ ತುಂಡನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!