IMG-20240121-WA0036

ಅಹಿಂದ ವರ್ಗದ ಮುಖ್ಯ ವಾಹಿನಿಗೆ ಬರಲಿ : ಕುಬೇರ ದಲ್ಲಾಳಿ

ಕರುನಾಡ ಬೆಳಗು ಸುದ್ದಿ 

ವಿಜಯನಗರ,21- ಅಹಿಂದ ವರ್ಗಗಳ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿದ್ದಾರೆ. ಆದರೆ, ರಾಜಕೀಯ, ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ. ಈ ವರ್ಗಗಳಿಗೆ ಎಲ್ಲ ರೀತಿಯ ಸವಲತ್ತು ಸಿಕ್ಕು ಮುಖ್ಯ ವಾಹಿನಿಗೆ ಬರಬೇಕು’ ಎಂದು ಅಹಿಂದ ತಾಲ್ಲೂಕು ಅಧ್ಯಕ್ಷ ಕುಬೇರ ದಲ್ಲಾಳಿ ಸಂಘಟನೆ ಮಾಡಿದರು.

     ಹೊಸಪೇಟೆಯ ಹಂಪಿ ರೋಡಿನಲ್ಲಿರುವ ಕುರುಬರ ಸಂಘದಲ್ಲಿ ಭಾನುವಾರ ನಡೆದ ಅಹಿಂದ ಯುವ ವೇದಿಕೆಯ 23ನೇ ವಾರ್ಡ್ ಘಟಕದ ಅಧ್ಯಕ್ಷ

ಜಿ ಹನುಮಂತ. ಕಾರಿಗನೂರು. ಇವರಿಗೆ ಆದೇಶ ಪತ್ರವನ್ನು ವಿತರಿಸುತ್ತಾ ಅವರು ತಿಳಿಸಿದ್ದಾರೆ.

ರಾಜಕೀಯ ಅಧಿಕಾರವಿಲ್ಲದೆ ಏನೂ ಮಾಡಲು ಆಗುವುದಿಲ್ಲ, ರಾಜಕೀಯ ಕಲಿಯಿರಿ, ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅಹಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲಬೇಕು ಎಂದು ಪ್ರಕಟಿಸಿದರು.

ಸರ್ಕಾರದ ಸೌಲಭ್ಯಗಳನ್ನು ಅರ್ಹರಿಗೆ ಒದಗಿಸುವಲ್ಲಿ ನಿಸ್ವಾರ್ಥ ಸೇವೆ, ಹಿಂದುಳಿದ, ಅಸಂಖ್ಯಾತ, ದಲಿತ ಮತ್ತು ಇತರ ದುರ್ಬಲ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಜಾಗೃತಿಗಾಗಿ ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ,” ಎಂದು ಹೇಳಿದರು.

ಜಾತಿಭೇದ ಮರೆತು ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು. ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿಯವರು ಒಗ್ಗಟ್ಟಾಗಿ ಅವರ ಹಕ್ಕುಗಳನ್ನು ಪಡೆಯಬೇಕು. ದೌರ್ಜನ್ಯ ನಡೆದಾಗ ಅದರ ವಿರುದ್ಧ ಎತ್ತಬೇಕು’ ಎಂದು ಹೇಳಿದರು.. ಈ ದೃಷ್ಟಿಯಿಂದ ಯುವಕರಲ್ಲಿ ಜಾಗೃತಿ ಮೂಡಿಸಿ, ಸಂಘಟಿತ ಧ್ವನಿಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ಯುವ ಅಹಿಂದ ವೇದಿಕೆಯು ಕಾರ್ಯನಿರ್ವಹಿಸಲಿದೆ. 

ಅಹಿಂದ ನಾಯಕ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವನ್ನು ಸಮೀಕ್ಷೆ ಮಾಡಿ. ಆಯೋಗದ ವರದಿಯನ್ನು ಜಾರಿಗೆ ತರುವುದು ಸರ್ಕಾರದ ಕರ್ತವ್ಯ ಎಂದು ಒಪ್ಪಿಕೊಂಡಿರುವ ಸಿದ್ದರಾಮಯ್ಯನವರನ್ನು ಕೈಬಲಪಡಿಸುವುದು ಹಿಂದುಳಿದ ಜಾತಿ ವರ್ಗಗಳ ಜವಾಬ್ದಾರಿ ಅಹಿಂದ ಯುವ ವೇದಿಕೆಯು ಇನ್ನು ಹೆಚ್ಚು ಬೆಳೆಯಬೇಕು ಎಂದು ಹೇಳಿದರು.

ಅಹಿಂದ ಗೌರವ ಅಧ್ಯಕ್ಷರಾದ ಆರ್. ಚೇತನ್ ರಾಜ್ ಅವರ ಹುಟ್ಟು ಹಬ್ಬ ಅಂಗವಾಗಿ ಬೆಡ್ ಶೀಟ್ ಗಳನ್ನು ಎಲ್ಲಾ ಪದಾಧಿಕಾರಿಗಳಿಗೆ ವಿತರಿಸಲಾಯಿತು..

ಈ ಸಂದರ್ಭದಲ್ಲಿ ತಿಮ್ಮಣ್ಣ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಬಿಸಾಟಿ ತಾಯಪ್ಪ ಸಮಾಜದ ಯುವ ಸಂಸ್ಥೆ, ಕೇಶವ ಬಸವರಾಜ್, ಪಿ. ದಮ್ಮೂರ್, ಮಂಜುನಾಥ್ ಗಂಟೆ, ಉಮೇಶ್, ಅಹಿಂದ ಮಹಿಳಾ ಘಟಕ ದಿಲ್ ಶದ್, ಶ್ರೀ, ಲಕ್ಷ್ಮಕ್ಕ, ಅಂಜಿನಪ್ಪ, ಕಾಕ್ ಬಾಳ್. ಜೆಡಿಯಪ್ಪ ತಾರಾ ಭಾಷೆ ಲೋಕೇಶ್ ಮತ್ತಿತರಿದ್ದರು

Leave a Reply

Your email address will not be published. Required fields are marked *

error: Content is protected !!