2c136fae-be38-4577-97e1-318669006cc9

ಇಂದು ರಾಘವ ಕಲಾಮಂದಿರ ದಲ್ಲಿ, ಶ್ರೀರಾಮ ರಂಗೋತ್ಸವ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,24- ಆಲ್ ಆಫ್ ಸಂಗೀತ ಕಲಾ ಟ್ರಸ್ಟ್ ( ರಿ ) ಮತ್ತು ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ಸಹಕಾರದೊಂದಿಗೆ ಇದೇ ತಿಂಗಳು 25ನೇ ತಾರೀಕು ಸಂಜೆ ಶ್ರೀರಾಮ ರಂಗೋತ್ಸವ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು., ಆಲ್ ಆಫ್ ಸಂಗೀತ ಕಲಾ ಟ್ರಸ್ಟ್, ಅಧ್ಯಕ್ಷ ರಮಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಸಂಜೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ ಚೆನ್ನಪ್ಪ ಉದ್ಘಾಟನೆ ಮೂಲಕ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಾರೆ. ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಜಯಪ್ರಕಾಶ್ ಗುಪ್ತ, ಆರ್ಯವೈಶ್ಯ ಅಸೋಸಿಯೇಷನ್ ಅಧ್ಯಕ್ಷ ಡಾಕ್ಟರ್, ಎಲ್ ರಮೇಶ್ ಗೋಪಾಲ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಮಹಾರುದ್ರ ಗೌಡ, ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷರೇ ಕೋಟೇಶ್ವರರಾವ್, ತೆಲುಗು ಸಂಸ್ಕೃತಿ ಸಂತೆಯ ಅಧ್ಯಕ್ಷ ಗಾದಂ ಗೋಪಾಲಕೃಷ್ಣ, ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಎನ್ ಪ್ರಕಾಶ್, ಗಣೇಶಪುರ ಸ್ವಾಮಿಗಳು ನಿವೃತ್ತ ಉಪನ್ಯಾಸಕ ಆರ್ ದೇವಣ್ಣ ಭಾಗವಹಿಸಲಿದ್ದಾರೆ.

‌                       ಹೆಚ್. ತಿಪ್ಪೇಸ್ವಾಮಿ ಮುದ್ದಟನೂರ್ ಮತ್ತು ಡಿ ವಿರುಪಾಕ್ಷಪ್ಪ ತಂಡದಿಂದ ವಚನ ಗಾಯನ ಕಾರ್ಯಕ್ರಮ ಹಾಗೂ, ಶ್ರೀ ಸಾಯಿ ಸಂತೋಷ ನಾಟ್ಯ ಮಂಡಳಿ ( ಸುರಭಿ ) ಹೈದರಾಬಾದ್ ಇವರಿಂದ ಮಾಯ ಬಜಾರ್ ತೆಲುಗು ಪೌರಾಣಿಕ ಪದ್ಯ ನಾಟಕ ನಡೆಯುತ್ತದೆ ಎಂದು ಒಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!