96ನೇ ಬಾರಿ ರಕ್ತದಾನ ನೀಡಿದ ದಾವಣಗೆರೆಯ ಮಹಡಿಮನೆ ಶಿವಕುಮಾರ ಅವರ ಸೇವೆ ವಿಶಿಷ್ಟವಾದುದು
ಕರುನಾಡ ಬೆಳಗು ಸುದ್ದಿ
ಕೊಪ್ಪಳ,2- ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ‘ರಕ್ತದಾನ ಶಿಬಿರ’ವನ್ನು ದಿನಾಂಕ 09/02/2024ವರೆಗೂ ಬೆಳಿಗ್ಗೆ 06:00ರಿಂದ ಸಾಯಂಕಾಲ 05:00ರವರೆಗೆ ಜಾತ್ರಾ ಆವರಣದಲ್ಲಿ ಸಂಚಾರಿ ರಕ್ತ ಸಂಗ್ರಹಣಾ ವಾಹನದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ರಕ್ತದಾನ ಶಿಬಿರದಲ್ಲಿ 96ನೇ ಬಾರಿ ರಕ್ತದಾನ ನೀಡಿದ ದಾವಣಗೆರೆಯ ಮಹಡಿಮನೆ ಶಿವಕುಮಾರ ಅವರ ಸೇವೆ ವಿಶಿಷ್ಟವಾದುದು.
ಸುಮಾರು 55ವರ್ಷದ ಇವರು ಇಪ್ಪತೈದು ವರ್ಷಗಳಿಂದ ಅನೇಕ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ರಕ್ತದಾನದ ಮಹತ್ವ ಪ್ರಚಾರಪಡಿಸುತ್ತಿದ್ದಾರೆ.
ಪ್ರಸ್ತುತ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಆವರಣದಲ್ಲಿನ ಸಂಚಾರಿ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ ಮೈತುಂಬ ರಕ್ತದ ಬಣ್ಣವನ್ನು ಬಳಿದುಕೊಂಡು ರಕ್ತದಾನದ ಮಹತ್ವ ತಿಳಿಸುವ ಬರವಣಿಗೆಯೊಂದಿಗೆ ಜಾತ್ರೆಗೆ ಬರುವವರಿಗೆ ವಿಶೇಷವಾಗಿ ರಕ್ತದಾನದ ಮಹತ್ವವನ್ನು ಸಾರುತ್ತಿದ್ದಾರೆ.
ಇದಕ್ಕೆ ಮುಖ್ಯ ಕಾರಣ ಇಪ್ಪತ್ತೈದು ವರ್ಷದ ಹಿಂದೆ ಮಹಡಿಮನೆ ಶಿವಕುಮಾರರ ತಂಗಿ ಬೆಂಕಿ ಅನಾಹುತಕ್ಕೀಡಾಗಿ ಆಸ್ಪತ್ರೆಯಲ್ಲಿ ರಕ್ತ ಲಭ್ಯವಿಲ್ಲದೆ ಜೀವ ಕಳೆದುಕೊಂಡರು. ಅಂದಿನಿಂದ ಅವರು ರಕ್ತದಾನದ ಮಹತ್ವವನ್ನು ಸಾರುತ್ತಿದ್ದಾರೆ.
