ನರೇಗಾ ದಿವಸ ಆಚರಣೆ : ಗ್ರಾ.ಪಂ.ಸದಸ್ಯ ದೇವರಾಜ ಮ್ಯಾದನೇರಿ
ಕರುನಾಡ ಬೆಳಗು ಸುದ್ದಿ
ತಾವರಗೇರಾ,3- ಗ್ರಾಮೀಣ ಪ್ರದೇಶದಲ್ಲಿ ರೈತಕುಟುಂಬದ ಸದಸ್ಯರು ಸ್ಥಳಿಯವಾಗಿ ಕೂಲಿ ಕೆಲಸ ಮಾಡಬೇಕು, ಸರಕಾರದ ನರೇಗಾ ಯೋಜನೆಯ ಸದುಪಯೋಗ ಪಡೆಯ ಬೇಕು ಎಂದು ಗ್ರಾ.ಪಂ.ಸದಸ್ಯ ದೇವರಾಜ ಮ್ಯಾದನೇರಿ ತಿಳಿಸಿದರು.
ತಾವರಗೇರಾ ಸಮೀಪದ ಲಿಂಗದಹಳ್ಳಿ ಗ್ರಾಮಪಂಚಾಯತಿ ಕಾರ್ಯಾಲಯದಲ್ಲಿ ನಡೆದ ನರೇ ಗಾ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುದರು.
ಈಗಾಗಲೆ ಪ್ರತಿಯೊಬ್ಬ ಕಾರ್ಮೀಕರಿಗೆ ೩೧೬ರೂ ದಿನಗೂಲಿ ದೊರೆಯುತ್ತಿದೆ ಎಲ್ಲ ಕಾರ್ಮಿಕರು ಕೆಲಸದಲ್ಲಿ ನಿರತರಾಗಬೇಕಾಗಿದೆಎಂದು ತಿಳಿಸಿದರು.
ಈ ಸಂದರ್ಬದಲ್ಲಿ ಗ್ರ.ಪಂ.ಪಿಡಿಒ ಮಲ್ಲಿಕಾರ್ಜುನ ಮಳಿಮಠ ಮಾತನಾಡಿದರು. ಗ್ರಾ.ಪಂ.ಕAಪ್ಯೂಟರ್ ಆಪರೇಟರ್ ಕಕರಾಯ ಪಾಟೀಲ್, ಸಿಬ್ಬಂದಿಗಳಾದ ಮಂಜುನಾಥ, ಹಿರೆಯಮನೂರಪ್ಪ ಜಿನ್ನಾಪೂರ, ಪರಸುರಾಮ, ಶರಣಪ್ಪ,ಕುಲಿಕಾರರು ಇದ್ದರು.
