WhatsApp Image 2024-02-04 at 10.44.09 AM

ಮಾನಸಿಕ ಶಾರೀರಿಕ ದೈಹಿಕ ವಿಕಾಸದ ಬೆಳವಣಿಗೆಗೆ ಕ್ರೀಡೆ ಪೂರಕ ಶಾಸಕ ಬಿ ಎಂ ನಾಗರಾಜ್

ಕರುನಾಡ ಬೆಳಗುಸುದ್ದಿ

ಸಿರುಗುಪ್ಪ,4- ಮಕ್ಕಳ ಮನಸ್ಸು ಅರಳಿಸಲು ಕ್ರೀಡೆಗಳು ಪೂರಕವಾಗಿವೆ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿಯೂ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಿಧಾನಸಭಾ ಕ್ಷೇತ್ರದ ಜನಪರ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪಟ್ಟಣದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ ಕಬ್ಬಡಿ ಪ್ರಮೋಟರ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಮಕ್ಕಳು ಶಾರೀರಿಕ ಮತ್ತು ದೈಹಿಕ ಬೆಳವಣಿಗೆಗೆ ಹೊಂದಲು ಕ್ರೀಡೆ ಅತ್ಯಂತ ಸಹಕಾರಿಯಾಗಿದೆ ಭಾರತ ಬಲಿಷ್ಠ ಗೊಳ್ಳುತ್ತಿದೆ ಹಿಂದಿಗಿಂತಲೂ ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ ಭಾರತ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿ ದಾಖಲೆ ಪದಕಗಳು ದೇಶಕ್ಕೆ ತಂದು ಕೊಟ್ಟಿದ್ದಾರೆ ಎಂದರು ಕ್ರೀಡಾಕೂಟ ಪಟುಗಳಿಗೆ ಶುಭ ಕೋರಿ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಕಮಿಟಿಯ ಮಾಜಿ ಸದಸ್ಯರು ನರೇಂದ್ರ ಸಿಂಹ ಬಳ್ಳಾರಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಗಂಗಾಧರ ಗೌಡ ನಗರ ಸಭೆ ಸದಸ್ಯರಾದ ಬಿ ವೆಂಕಟೇಶ್ ಎಚ್ ಗಣೇಶ್ ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಸದಸ್ಯರಾದ ನಸುರುದ್ದೀನ್ ಸಾಬ್ ಬಾಬುಸಾಬ್ ಹೊನ್ನೂರಪ್ಪ ಮಾಜಿ ಸದಸ್ಯರಾದ ಶ್ಯಾಮ್ ಸುಂದರ್ ಮುಖಂಡರಾದ ಸುಭಾನ್ ಸಾಬ್ ನಬಿಸಾಬ್ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಕುಮಾರಪ್ಪ ಪಂದ್ಯಾವಳಿ ಪ್ರಾಯೋಜಕರು ಮತ್ತು ಆಯೋಜಕರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!