ದೇಶದ ಭವಿಷ್ಯ ನಿರ್ಮಿಸುವ ಬಜೆಟ್: ವಿಶ್ವನಾಥ ಮರಿಬಸಪ್ಪನವರ್
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, ೦೭- ಮೋದಿ ಸರಕಾರದ 2.0 ಬಜೆಟ್ ಜನಪರ ಮತ್ತು ದೇಶದ ಭವಿಷ್ಯವನ್ನು ನಿರ್ಮಿಸುವ ಬಜೆಟ್ ಆಗಿದೆ ಎಂದು ಬಿಜೆಪಿ ಯಲಬುರ್ಗಾ ಮಂಡಳ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪವರ್ ಅಭಿಪ್ರಾಯಪಟ್ಟರು.
ಸೋಲಾರ್ ಶಕ್ತಿ ಮೂಲಕ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯೂತ್ ನೀಡುವುದು ಮುಂದಿನ 5 ವರ್ಷಗಳಲ್ಲಿ 5 ಕೋಟಿ ಆವಾಸ್ ಮನೆಗಳ ನಿರ್ಮಾಣ ಮಾಡುವುದು ಆಶಾದಾಯಕವಾಗಿದೆ. ಆಯುಷ್ ಮಾನ್ ಭಾರತ್ ವಿಮೆ ಯೋಜನೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ವಿಸ್ತರಿಸಿದ್ದು ಜನಸಾಮಾನ್ಯರ ಬಜೆಟ್ ಎನ್ನುವುದಕ್ಕೆ ಕೈಗನ್ನಡಿಯಾಗಿದೆ.
ಹೊಸ ಮೆಡಿಕಲ್ ಸ್ಥಾಪನೆಗೆ ರಚನೆ ಮಾಡಿರುವುದು, ಕ್ಯಾನ್ಸರ್ ತಡೆಗಟ್ಟಲು 9 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವುದು ತುಂಬಾ ಹೆಮ್ಮೆ ಅನಿಸುತ್ತದೆ.ಪಿಎಂ ಕಿಸಾನ್ ಯೋಜನೆ ಅಡಿ 11.8 ಕೋಟಿಗೂ ಅಧಿಕ ರೈತರಿಗೆ ಸಹಾಯಧನ ನೀಡಲಾಗಿದೆ ಇದು ರೈತರಿಗೆ ಮೋದಿ ಕೊಟ್ಟಿರುವ ಕೊಡುಗೆಯಾಗಿದೆ.ಫಸಲ್ ಭಿಮಾ ಯೋಜನೆ ಅಡಿ 4 ಕೋಟಿ ಅಧಿಕ ರೈತರಿಗೆ ಬೆಳೆ ಪರಿಹಾರ ನೀಡುವ ಗುರಿಯನ್ನು ಸ್ವಾಗತಿಸಿದರು. ತೆರಿಗೆ ವಿನಾಯತಿ ನೀಡಿ ಯತಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ರೈತರಿಗೆ 3 ಲಕ್ಷಕ್ಕು ಅಧಿಕ ವಹಿವಾಟಿಗೂ ಕೇಂದ್ರದ ಆರ್ಥಿಕ ನೆರವಿಗೆ ಅನುನೋಧನೆ ನೀಡಲಾಗಿದೆ ಎಂದು ಕೇಂದ್ರ ಬಜೆಟ್ ಸಮರ್ಥಿಸಿಕೊಂಡರು.
ಹಾಲು ಉತ್ಪನ್ನಗಳಿಗಾಗಿ ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆ ಜಾರಿ ಮತ್ತು ಮತ್ಸ್ಯ ಉಧ್ಯಮಕ್ಕೆ ಆರ್ಥಿಕ ನೆರವು ನೀಡುವುದು ನಮ್ಮ ಸರಕಾರದ ಗುರಿಯಾಗಿದೆ ಎಂದರು. ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಲಿದೆ ಎಂದು ತಿಳಿಸಿದರು. ಒಟ್ಟಾರೆಯಾಗಿ ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಮೆಚ್ಚುವ ಬಜೆಟ್ ಇದಾಗಿದೆ ಎಂದು ಕರುನಾಡು ಬೆಳಗು ಪತ್ರಿಕೆಗೆ ಕೇಂದ್ರ ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು
