2c136fae-be38-4577-97e1-318669006cc9

ಕುಕನೂರ ತಾಲೂಕಿನಲ್ಲಿ ವಾರ್ತಾ ಇಲಾಖೆಯಿಂದ ಜನಪದ ಸಂಗೀತ ಕಾರ್ಯಕ್ರಮಗಳ ಪ್ರದರ್ಶನ

ಕರುನಾಡ ಬೆಳಗು ಸುದ್ದ

ಕೊಪ್ಪಳ,9- ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘ(ರಿ) ಕುಷ್ಟಗಿ ಕಲಾತಂಡದ ಮೂಲಕ ಫೆ.10ರಿಂದ ಫೆ.19ರವರೆಗೆ ಕುಕನೂರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜನಪದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಫೆ.10ರಂದು ಬೆಳಿಗ್ಗೆ ಕುದರಿಮೋತಿ ಹಾಗೂ ಸಂಜೆ ಮಂಗಳೂರುನಲ್ಲಿ, ಫೆ.11ರಂದು ಬೆಳಿಗ್ಗೆ ವಟಪರ್ವಿ ಹಾಗೂ ಸಂಜೆ ನೆಲಜೇರಿಯಲ್ಲಿ, ಫೆ.12ರಂದು ಬೆಳಿಗ್ಗೆ ಚಂಡಿನಾಳ ಹಾಗೂ ಸಂಜೆ ಹಿರೇಬಿಡನಾಳದಲ್ಲಿ, ಫೆ.13ರಂದು ಕಂದ್ರಳ್ಳಿ ಹಾಗೂ ಸಂಜೆ ಅರಕೇರಿಯಲ್ಲಿ, ಫೆ.14ರಂದು ಬೆದವಟ್ಟಿ ಹಾಗೂ ಸಂಜೆ ಶಿರೂರುನಲ್ಲಿ, ಫೆ.15ರಂದು ಬೆಳಿಗ್ಗೆ ಚಿಕ್ಕನಕೊಪ್ಪ ಹಾಗೂ ಸಂಜೆ ಮಂಡಲಗೇರಿಯಲ್ಲಿ, ಫೆ.16ರಂದು ಬೆಳಿಗ್ಗೆ ಸೋಮಪುರ ಹಾಗೂ ಸಂಜೆ ಭಾನಾಪೂರದಲ್ಲಿ, ಫೆ.17ರಂದು ಬೆಳಿಗ್ಗೆ ಕೋಮಲಾಪುರ ಹಾಗೂ ಸಂಜೆ ಚಿತ್ತಾಪುರದಲ್ಲಿ, ಫೆ.18ರಂದು ಬೆಳಿಗ್ಗೆ ಅಡವಿಹಳ್ಳಿ ಹಾಗೂ ಸಂಜೆ ತಳಕಲ್‌ನಲ್ಲಿ, ಫೆ.19ರಂದು ಬೆಳಿಗ್ಗೆ ರಾಜೂರು ಹಾಗೂ ಸಂಜೆ ಬನ್ನಿಕೋಪ್ಪ ಗ್ರಾಮದಲ್ಲಿ ಜನಪದ ಸಂಗೀತ ಕಾರ್ಯಕ್ರಮಗಳು ಜರುಗಲಿದೆ.

ಕಲಾವಿದರು ಆಯಾ ಗ್ರಾಮದ ಜನ ಸಂದನಿ ಸ್ಥಳದಲ್ಲಿ ಸರ್ಕಾರದ ಜನಪದ ಸಂಗೀತ ಕಾರ್ಯಕ್ರಮಗಳ ಬಗ್ಗೆ ಪ್ರಚುರಪಡಿಸಲು ನಡೆಸುವರು.

ಆಯಾ ಗ್ರಾಮಸ್ಥರು ಜನಪದ ಸಂಗೀತ ಕಾರ್ಯಕ್ರಮಗಳು ವೀಕ್ಷಿಸಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!