ಕಲಾವಿದರಿಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆಯಲಿದೆ :
ಶರಣು ಕುದರಿಮೋತಿ
ಕರುನಾಡ ಬೆಳಗು ಸುದ್ದಿ
ಕುಕನೂರ,10- ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 150ನೇ ವರ್ಷದ ಶತಮಾನೋತ್ತರ ಸುವರ್ಣ ಮಹೋತ್ಸವದ ಅಂಗವಾಗಿ ಕೋಡಿಹಳ್ಳಿ ಪ್ರತಿಷ್ಠಾನ (ರಿ ) ತಿಳವಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ 18-02-2024 ರಂದು ಭಾನುವಾರ ಸಂಜೆ 6:30ಕ್ಕೆ ಸ್ಥಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಿಳವಳ್ಳಿ ತಾ. ಹಾನಗಲ್ಲ ಜಿ. ಹಾವೇರಿ ಯಲ್ಲಿ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ.
ಕನ್ನಡ ನಾಡು ನುಡಿ ಜಲ ಭಾಷೆ ಸಾಹಿತ್ಯ ಸಂಗೀತ ನಾಟಕ ಜನಪದ ಸಮಾಜದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಜನಮನ ಗೆದ್ದ ನೃತ್ಯ ಸಂಗೀತ ಕಲಾ ರತ್ನ ಕಲಾಮಣಿಕ್ಯ ರತ್ನ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ರಾಜೂರು ಗ್ರಾಮದ ಕಲಾವಿದರಾದ ಶ್ರೀ ಶರಣು ಕುದರಿಮೋತಿ ಕಲಾವಿದರು ಉತ್ತರ ಕರ್ನಾಟಕದ ಸ್ಟಾರ್ ಸಿಂಗರ್ ಗೇ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
