10-02-2024

EMWI ಮಾರ್ಕೆಟಿಂಗ್ ಲಿಮಿಟೆಡ್ ನ ವಾರ್ಷೀಕೋತ್ಸವ : ಸ್ವಯಂಪ್ರೇರಿತ ರಕ್ತದಾನ ಶಿಬಿರ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,11- ನಗರದ ಜಿಲ್ಲಾ ಗಾಣಿಗ ಸಮೂದಾಯ ಭವನದಲ್ಲಿ EMWI ಮಾರ್ಕೆಟಿಂಗ್ ಲಿಮಿಟೆಡ್ ಇದರ ವಾರ್ಷೀಕೋತ್ಸವದ ಅಂಗವಾಗಿ ಸಂಸ್ಥೆಯ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸ ಲಾಗಿತ್ತು, ಈ ಕಾರ್ಯಕ್ರಮವನ್ನು ಮಾನ್ಯ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಶ್ರೀ ಸೋಮರಡ್ಡಿ ಅಳವಂಡಿ, ನಿರ್ದೇಶಕ ಡಾ.ಮಂಜುನಾಥ ಸಜ್ಜನ್, ಗಾಣಿಗ ಸಮಾಜದ ಗೌರವಾಧ್ಯಕ್ಷ ರುದ್ರಮುನಿ, ಜಿಲ್ಲಾಧ್ಯಕ್ಷ ಬಸವರಾಜ, ಮುಖಂಡ ತೋಟಪ್ಪ ಕಾಮನೂರ, ಚಾಂದಪಾಷಾ ಕಿಲ್ಲೇದಾರ ಹಾಗೂ ಮಾರ್ಕೆಟಿಂಗ್ ಕಂಪನಿಯ ಜಿಲ್ಲಾ ಸಂಚಾಲಕರಾದ ಮುತ್ತಣ್ಣ, ಶಿವಕುಮಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!