WhatsApp Image 2024-02-12 at 3.09.45 PM

ನಮೋ ಬ್ರಿಗೇಡ್ ಸಂಸ್ಥಾಪಕ ರಾಜ್ಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಪಟ್ಟಣಕ್ಕೆ ಆಗಮನ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,12- ನಮೋ ಬ್ರಿಗೇಡ್ ತಾಲೂಕ ಘಟಕದ ವತಿಯಿಂದ ಈಗ ಶುರುವಾಗಿದೆ ಭಾರತದ ಕಾಲ.ನಮೋ ಭಾರತ ಕಾರ್ಯಕ್ರಮವನ್ನು ಇದೇ ದಿನಾಂಕ 16 ರಂದು ಯಲಬುರ್ಗಾ ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ನಮೋ ಬ್ರಿಗೇಡ್ ಜಿಲ್ಲಾ ಯುವ ಸಂಚಾಲಕ ಶರಣೇಗೌಡ ಯುವ ಭಾರತ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ಹತ್ತು ವರ್ಷದಲ್ಲಿ ಮೋದಿ ವಿಕಾಸದ ಹಬ್ಬವನ್ನೆ ಮಾಡಿದ್ದಾರೆ ದೇಶದ ಸಮಗ್ರ ಅಭಿವೃದ್ಧಿಯ ಕಲ್ಪನೆಯನ್ನು ವಿಸ್ತಾರಗೊಳಿಸಿದ್ದಾರೆ ನರೇಂದ್ರ ಮೋದಿಯವರನ್ನು ಸೋಲಿಸಲು ಅನೇಕ ಪಕ್ಷದ ನಾಯಕರು ಪ್ರಯತ್ನದಲ್ಲಿದ್ದಾರೆ.

70 ವರ್ಷಗಳ ತಪಸ್ಸಿನ ನಂತರ ಇಂತಹ ನಾಯಕ ನಮಗೆ ಸಿಕ್ಕಿದ್ದಾರೆ 2024 ರ ಲೋಕ ಸಭಾ ಚುನಾವಣೆಯಲ್ಲಿ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳು ಲಭಿಸಲೆಂದು ಯುವ ಬ್ರೀಗೇಡ್ ಉದ್ದೇಶಿಸಿ ಮಾತನಾಡಲು ಯುವ ಬ್ರಿಗೇಡ್ ಸಂಸ್ಥಾಪಕ ಮುಖ್ಯ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ರವರು ಇದೇ ದಿನಾಂಕ16 ಶುಕ್ರವಾರ ಸಾಯಂಕಾಲ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಆದ್ದರಿಂದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ನಮೋ ಬ್ರಿಗೇಡ್ ಮುಖಂಡರುಗಳಾದ ಬಾಪುಗೌಡ ಪಾಟೀಲ್, ನಂದೀಶ ಮುಡಿಯಪ್ಪನವರ, ತಾಲೂಕ ಸಂಚಾಲಕ ಗುರುರಾಜ ಹುಣಶಿಹಾಳ, ಮಂಜುನಾಥ ಶೆಟ್ಟರ, ಕುಮಾರಗೌಡ ಇಟಗಿ, ಚಂದ್ರಶೇಖರ ಕುಷ್ಠಗಿ, ಭೀಮೇಶ ತಾವರಗೇರಾ, ಶಂಕ್ರಗೌಡ ,ಸಂಜೀವ ಜರಕುಂಟಿ, ರಾಜು ದ್ಯಾಂಪೂರು ಸೇರಿದಂತೆ ಮತ್ತು ಇತರರು ಸುದ್ದಿಗೊಷ್ಠಿಯಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!