ಪ್ರಜೆಗಳೇ ಪ್ರಭುಗಳು ಎನ್ನುವ ಸಾಲನ್ನು ಅರ್ಥಪೂರ್ಣಗೊಳಿಸಿರುವುದು ಮಾಹಿತಿ ಹಕ್ಕು ಕಾಯ್ದೆ – ಹೇಮಂತ್ ನಾಗರಾಜ್
ಕರುನಾಡ ಬೆಳಗು ಸುದ್ದಿ
ಗಂಗಾವತಿ,13- ಪ್ರಜೆಗಳೇ ಪ್ರಭುಗಳು ಎನ್ನುವ ಸಾಲನ್ನು ಅರ್ಥಪೂರ್ಣಗೊಳಿಸಿರುವುದು ಮಾಹಿತಿ ಹಕ್ಕು ಕಾಯ್ದೆ. ತಾನು ನೀಡಿದ ತೆರಿಗೆಯ ಹಣವನ್ನು ಸಕರ್ಾರ ಯಾವ ರೀತಿ ಬಳಸಿದೆ, ಎಲ್ಲಿ ದುರುಪಯೋಗವಾಗಿದೆ ಎಂದು ತಿಳಿಯುವ ಹಕನ್ನು ನೀಡಿರುವ ಈ ಮಾಹಿತಿ ಹಕ್ಕು ಕಾಯಿದೆ ಮೂಲಕ ದಾಖಲೆ ಪಡೆದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲಾಗುತ್ತಿದ್ದು, ಈ ವೇಳೆ ಮಾಹಿತಿ ಹಕ್ಕು ಬಳಕೆದಾರರಿಗೆ ಜೀವ ಬೆದರಿಕೆ ಎದುರಾಗುತ್ತಿದೆ. ಹೀಗಾಗಿ ಅಂತಹವರನ್ನೆಲ್ಲಾ ಒಟ್ಟಿಗೆ ಸೇರಿಸಿ ಸಂಘಟಿತ ಹೋರಾಟ ನಡೆಸುವ ನಿಟ್ಟಿನಲ್ಲಿ ವೇದಿಕೆ ಸ್ಥಾಪಿಸಲಾಗಿದ್ದು, ಇದೀಗ ಜಿಲ್ಲೆಯಲ್ಲೂ ಮಾಹಿತಿ ಹಕ್ಕು ವೇದಿಕೆಯ ಜಿಲ್ಲಾ ಘಟಕ ಆಸ್ತಿತ್ವಕ್ಕೆ ತಂದಿದ್ದೇವೆ ಎಂದು ಕನರ್ಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ರಾಜ್ಯಾಧ್ಯಕ್ಷ ಹೇಮಂತ್ ನಾಗರಾಜ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ವೇದಿಕೆಯ ನೂತನ ಜಿಲ್ಲಾ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಈ ಕಾಯ್ದೆಯ ಮೂಲಕ ಯಾರೂ ಯಾರದೋ ಖಾಸಗಿ ವಿಷಯಗಳನ್ನು ಬಹಿರಂಗಪಡಿಸುವಂತೆ ಸರ್ಕಾರವನ್ನು ನಾವು ಒತ್ತಾಯಿಸುವುದಿಲ್ಲ. ಜನಕಲ್ಯಾಣ ಯೋಜನೆಗಳ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದವರಿಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳು ಬಳಕೆದಾರರನ್ನು ಬೆದರಿಸುವ, ಆಮಿಷಕ್ಕೆ ಒಳಪಡಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯೆವಸ್ಥೆಯನ್ನೇ ಅಣಕಿಸುವ ಇಂತಹ ಭ್ರಷ್ಟರು ಹಾಗೂ ಭ್ರಷ್ಟ ವ್ಯೆವಸ್ಥೆ ವಿರುದ್ಧ ಕಾನೂನು ಸಮರ ಸಾರುವ ಮಾಹಿತಿ ಹಕ್ಕು ಬಳಕೆದಾರರ ಧ್ವನಿಯಾಗಿ, ಅವರಿಗೆ ಬೆಂಬಲವಾಗಿ ಬೆನ್ನಿಗೆ ನಿಲ್ಲುವ ವೇದಿಕೆಯಾಗಿ ಈ ಸಂಘಟನೆ ಕಾರ್ಯನಿರ್ವಹಿಸಲಿದೆ.
ಸರ್ಕಾರದ ನೀತಿ-ನಿಯಮ ಕಾನೂನುಗಳಂತೆ ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಕಾಯಿದೆ ಬಗ್ಗೆ ಸೂಚನಾ ಫಲಕ, ನಾಮಫಲಕ ಹಾಕದೇ ಮನಸ್ಸಿಗೆ ಬಂದಂತೆ ಕರ್ತವ್ಯನಿರ್ವಹಿಸುವ ಅಧಿಕಾರಿಗಳಿಗೆ ಮುಲಾಜಿಲ್ಲದೇ ಪ್ರಶ್ನಿಸಬಹುದು. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೇ ಕಾಫಿ, ಟೀ, ತಿಂಡಿ, ಊಟ, ಮೀಟಿಂಗ್ ನೆಪ ಹೇಳಿ ಸಾರ್ವಜನಿಕರನ್ನು ಅಲೆಸುವುದು ತಮ್ಮ ಜನ್ಮಸಿದ್ಧ ಹಕ್ಕು ಎನ್ನುವ ರೀತಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ನಡೆದುಕೊಳ್ಳುತ್ತಿದ್ದಾರೆ. ಇಂಥಹ ಅಪಸವ್ಯಗಳನ್ನು ತಡೆಯಲು ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯ. ಈಗಾಗಲೇ ರಾಜ್ಯಾದ್ಯಂತ ಜಿಲ್ಲಾ ಸಮಿತಿಗಳನ್ನು, ಅವುಗಳಿಗೆ ಪೂರಕವಾಗಿ ತಾಲೂಕಾ ಸಮಿತಿಗಳನ್ನು ರಚನೆ ಮಾಡಿದ್ದೇವೆ. ಇಂದು ಕೊಪ್ಪಳ ಜಿಲ್ಲೆಯಲ್ಲಿ ವೇದಿಕೆ ತರುವ ಮೂಲಕ ಇಲ್ಲಿನ ಮಾಹಿತಿ ಹಕ್ಕು ಬಳಕೆದಾರರಿಗೆ ಧ್ವನಿಯಾಗುತ್ತಿದ್ದೇವೆ ಎಂದರು.
ಹಿರಿಯ ಸಾಹಿತಿ ಸಿ.ಎಚ್ ನಾರಿನಾಳ ಮಾತನಾಡಿ ಆರ್ಟಿಐ ಬಳಕೆದಾರರು ಪ್ರಾಮಾಣಿಕ, ನಿಸ್ವಾರ್ಥದಿಂದ ಕೂಡಿದ ಮನಸ್ಸಿನಿಂದ ಹೋರಾಟ ಮಾಡಬೇಕು. ಆಗ ನಿಮ್ಮ ಹೋರಾಟಕ್ಕೆ ಒಂದು ನೈತಿಕ ಬಲ ಬರುತ್ತದೆ. ಈ ನೈತಿಕತೆ ನಿಮ್ಮ ಹೋರಾಟದ ದಾರಿಯಲ್ಲಿ ಎಂಥದ್ದೇ ಸಂಕಷ್ಟಗಳು, ಅಡೆತಡೆಗಳು ಬಂದರೂ ತಡೆಯುವ ಶಕ್ತಿಯನ್ನು ನೀಡುತ್ತದೆ. ಆಗ ಜಯ ನಿಮ್ಮದೇ ಆಗಲಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮಾಹಿತಿ ಹಕ್ಕು ಬಳಕೆದಾರರನ್ನೆಲ್ಲ್ಲ ಒಟ್ಟಿಗೆ ಸೇರಿಸಿ ಸಂಘಟಿತ ಹೋರಾಟ ನಡೆಸಲು ಜಿಲ್ಲಾ ಮಟ್ಟದಲ್ಲಿ ವೇದಿಕೆ ಸ್ಥಾಪನೆಯಾಗಿರುವುದು ಸಂತಸಪಡುವ ವಿಚಾರ ಎಂದರು.
ನಂತರ ರಾಜ್ಯ ಸಮಿತಿ ಸದಸ್ಯ ಹಾಗೂ ದಾವಣೆಗೆರೆ ಜಿಲ್ಲಾಧ್ಯಕ್ಷರೂ ಆಗಿರುವ ಯು. ಶ್ರೀನಿವಾಸ್ ಮಾತನಾಡಿ 2007ರಿಂದಲೂ ಮಾಹಿತಿ ಹಕ್ಕು ಕಾಯ್ದೆಯ ಅತ್ಯಂತ ಸಕ್ರಿಯ ಬಳಕೆದಾರನಾಗಿದ್ದೇನೆ. ನಾನು ಇಲ್ಲಿಯವರೆಗೂ 13 ಸಾವಿರ ಅಜರ್ಿಗಳನ್ನು ಸಲ್ಲಿಸಿದ್ದೇನೆ. ಈ ರೀತಿ ಒಬ್ಬ ಸಾಮಾನ್ಯ ಹಳ್ಳಿ ಮನುಷ್ಯನೂ ಕೂಡಾ ಕಾಯ್ದೆಯಡಿ ತನ್ನೂರಿನ ರಸ್ತೆ ಕಾಮಗಾರಿ ಬಗ್ಗೆ ಅಜರ್ಿ ಸಲ್ಲಿಸಿ ಮಾಹಿತಿ ಪಡೆಯಬಹುದು. ಸಂಬಂಧಿಸಿದ ಇಲಾಖೆಗೆ ಕ್ರಿಯಾಯೋಜನೆ ಮತ್ತು ಮಾಸಿಕ ಕಾರ್ಯಕ್ರಮದ ಅನುಷ್ಠಾನ ಕುರಿತು ಕಾಯ್ದೆ ಅಡಿ ಪ್ರಶ್ನಿಸಿ ಅಜರ್ಿ ಸಲ್ಲಿಸಿದರೆ ಸಾಕು, ನಿಮ್ಮೂರಿನ ರಸ್ತೆಗೆ ಎಷ್ಟು ಹಣ ಖರ್ಚು ಮಾಡಿದ್ದಾರೆ. ರಸ್ತೆ ಅಭಿವೃದ್ಧಿಯಾಗಿದೆಯೇ ಇಲ್ಲವೇ ನಿಖರ ಮಾಹಿತಿ ಪಡೆಯಬಹುದು. ಇದರಿಂದ ಬೋಗಸ್ ಬಿಲ್ಗಳಿಗೂ ಕಡಿವಾಣ ಹಾಕಿ ಸಾರ್ವಜನಿಕರ ತೆರಿಗೆ ಹಣ ಉಳಿಸಬೇಕಾಗಿದೆ ಎಂದು ಕಾಯಿದೆ ಬಳಕೆಯಲ್ಲಿನ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಕಾರಟಗಿ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ ಮಾಹಿತಿ ಹಕ್ಕು ದೇಶದಲ್ಲಿ ಅತಿ ಹೆಚ್ಚು ಚಚರ್ಿತವಾಗಿರುವ ಕಾಯಿದೆಯಾಗಿದೆ. ಮಾಹಿತಿ ಹಕ್ಕು ಬಳಕೆದಾರರು ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದಾರೆ, ಸದ್ಬಳಕೆ ಕಾಯಿದೆಯ ಸದ್ಬಳಕೆ ಆದರೆ ಮಾತ್ರ ಭ್ರಷ್ಠರಲ್ಲಿ ನಡುಕವುಂಟಾಗಲು, ಉತ್ತಮ ಆಡಳಿತ ಜಾರಿಯಲ್ಲಿರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಜಿಲ್ಲಾಧ್ಯಕ್ಷ ಪಿ. ಶಿವನಾರಾಯಣ ಕಿಂದಿಕ್ಯಾಂಪ್ವಹಿಸಿದ್ದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಮಧು ಕೆಟಿ, ರಾಜ್ಯ ಸಮಿತಿ ಸದಸ್ಯ ಗುರುರಾಜ್, ರಂಗಭೂಮಿ ಕಲಾವಿದ ಚನ್ನಬಸಯ್ಯ ಟಿಟಿ ಇನ್ನಿತರರು ಉಪಸ್ಥಿತರಿದ್ದರರು.
ಪದಾಧಿಕಾರಿಗಳ ಆಯ್ಕೆ ವೇದಿಕೆಯ ಕೊಪ್ಪಳ ನೂತನ ಜಿಲ್ಲಾಧ್ಯಕ್ಷರಾಗಿ ಪಿ. ಶಿವನಾರಾಯಣ ಕಿಂದಿಕ್ಯಾಂಪ್, ಗೌರವಾಧ್ಯಕ್ಷ ಜುಮ್ಮಣ್ಣ, ಉಪಾಧ್ಯಕ್ಷ ಕೆ.ಜಗದೀಶ ಯರಡೋಣಾ, ಪ್ರಧಾನ ಕಾರ್ಯದಶರ್ಿ ಮಂಜುನಾಥ್ ಕಲ್ಮಂಗಿ, ಖಜಾಂಚಿ ಮಾರ್ಕಂಡೇಯ ಎಲ್ಎಲ್ಬಿ, ಮಾಧ್ಯಮ ಪ್ರತಿನಿಧಿ ಸಿದ್ದನಗೌಡ ಹೊಸಮನಿ, ಕಾರ್ಯದಶರ್ಿ ಭೀಮೇಶ್, ಸದಸ್ಯರಾಗಿ ರಾಘವೇಂದ್ರ ಕನಕಗಿರಿ, ಫಕೀರಪ್ಪ ಕುಷ್ಟಗಿ, ಮಾರುತಿ ಎಲ್ಎಲ್ಬಿ, ಚನ್ನಬಸವ ಸಿ, ದೊಡ್ಡಬಸಪ್ಪ, ಚನ್ನಬಸವ, ಶರಣಪ್ಪ ಚಲುವಾದಿ, ಸುರೇಶ್, ಬಿ.ಬಸವರಾಜ ಇನ್ನಿತರರು ಇದ್ದರು.
