ಮೊದಲ ಮದುವೆ ಮುಚ್ಚಿಟ್ಟು ಮತ್ತೆ ಮದುವೆಯಾದವನಿಗೆ ಜೈಲು ಶಿಕ್ಷೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ,13- ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗಿ ಯುವತಿಗೆ ವಂಚಿಸಿದ ಪ್ರಕರಣದಲ್ಲಿ ಆರೋಪಿಗೆ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀಧೇವಿ ದರಬಾರೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಹದಿನೈದು ಸಾವಿರ ರೂಪಾಯಿ ಮೊತ್ತದ ದಂಡ ವಿಧಿಸಿದ್ದಾರೆ.
ಸಂಡೂರು ತಾಲ್ಲೂಕಿನ ದೋಣಿಮಲೈ ನಿವಾಸಿ ಶ್ರೀನಿವಾಸ.ವಿ.ನುಕುಲ ಎಂಬ ವ್ಯಕ್ತಿಯ ಮೇಲೆ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಕಮಲಾ ಎಂಬ ಯುವತಿ ಗ್ರಾಮೀಣ ಠಾಣೆಯಲ್ಲಿ ದಾಖಲಿಸಿದ್ದ ವಂಚನೆ ಪ್ರಕರಣದ ದೋಷಾರೋಪಣೆಯ ಹಿನ್ನೆಲೆ ನ್ಯಾಯಾಲಯ ಈ ಆದೇಶ ಮಾಡಿದೆ.
ಘಟನೆಯ ವಿವರ : ಮೊದಲನೆ ಹೆಂಡತಿ ಜೀವಂತವಿರುವಾಗಲೇ ಆಕೆಯಿಂದ ವಿವಾಹ ವಿಚ್ಛೇದನ ಪಡೆಯದೇ ವಿಚ್ಚೇಧನ ಆಗಿದೆ ಎಂದು ಸುಳ್ಳು ಹೇಳಿ ಆರೋಪಿ ಶ್ರೀನಿವಾಸ್, ಕಮಲಾ ಎಂಬುವವರನ್ನು ಶಾಸ್ತ್ರೋಕ್ತವಾಗಿ
ಎರಡನೆಯ ಮದುವೆಯನ್ನು ಮಾಡಿಕೊಂಡಿದ್ದಾನೆ. ಗಂಡನ ಈ ವಂಚನೆಯ ವಿಷಯ ಮದುವೆಯಾದ ಎರಡನೇಯ ಹೆಂಡತಿ ಅಂದರೆ ಕಮಲಾಗೆ ನಂತರ ಗೊತ್ತಾಗಿದೆ.
ಮದುವೆ ವಿಚಾರದಲ್ಲಿ ಶ್ರೀನಿವಾಸ ಸುಳ್ಳು ಹೇಳಿ ವಂಚಿಸಿದ್ದಾನೆ ಎಂದು ಗೊತ್ತಾದ ಬಳಿಕ 2016ರಲ್ಲಿ ಗ್ರಾಮೀಣ ಠಾಣೆಯಲ್ಲಿ ತನ್ನ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆ ನೀಡಿದ ದೂರನ್ನು ಆಧಾರಿಸಿ ತನಿಖೆ ಕೈಗೊಂಡ ಗಂಗಾವತಿ ಗ್ರಾಮೀಣ ಠಾಣೆಯ ಆಗಿನ ಪಿಎಸ್ಐ ಪ್ರಕಾಶ ಮಾಳಿ, ನ್ಯಾಯಾಲಯಕ್ಕೆ ದೋಷಾರೋಪಣಪತ್ರ ಸಲ್ಲಿಸಿದ್ದರು.
ಪ್ರಕರಣದ ಸಮಗ್ರ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಆರೋಪಿಗೆ 1 ವರ್ಷ ಜೈಲು ವಾಸ, 15000 ರೂಪಾಯಿಗಳ ದಂಧ ವಿಧಿಸಿದೆ. ದೂರುದಾರಳ ಪರವಾಗಿ ಸಹಾಯಕ ಸಕರ್ಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ ವಾದ ಮಂಡಿಸಿದ್ದರು.
