ಸರ್ಕಾರ ನಮ್ಮ ಭೋವಿ ಸಮುದಾಯಕ್ಕೆ ಪ್ರಾಮುಖ್ಯತೆ ನೀಡಲಿ : ಪರಶುರಾಮ ಅಮರಾವತಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,13- ಭೋವಿ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದೆ ಉಳಿದಿದೆ ನಮ್ಮ ಸಮುದಾಯದ ಜನರು ಕುಲ ಕಸಬು ನಂಬಿ ಪ್ರತಿನಿತ್ಯ ಜೀವನ ನಡೆಸುತ್ತಾರೆ ಗುಡ್ಡಗಳು ಉಳ್ಳವರ ಪಾಲಾಗಿ ಗುಡ್ಡಗಳು ನಾಶವಾಗಿವೆ ನಮ್ಮ ಕೈಯಿಗೆ ಕೆಲಸವಿಲ್ಲದಂತಾಗಿದೆ ನಮ್ಮ ಸಮುದಾಯ ಶಿಕ್ಷಣದಿಂದ ಹಿಂದೆ ಇದೆ ನಮ್ಮ ಸಮುದಾಯಕ್ಕ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳು ದೂರಕುತ್ತಿಲ್ಲ ಆದ್ದರಿಂದ ಸರಕಾರವು ನಮ್ಮ ಭೋವಿ ಸಮುದಾಯಕ್ಕೆ ಪ್ರಾಮುಖ್ಯತೆ ನೀಡಲಿ ಎಂಧು ಕೊಪ್ಪಳ ಜಿಲ್ಲಾ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಅಮರಾವತಿ ಹೆಳಿದರು.
ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಭೋವಿ ಸಮಾಜದವರು ನಾನಾ ರಂಗದಲ್ಲಿ ಹಿಂದೆ ಉಳಿದಿದ್ದಾರೆ.
ಈ ಸಮಾಜ ತುಳಿತಕ್ಕೆ ಒಳಗಾಗಿದೆ ಅದಕ್ಕಾಗಿ ಇತ್ತೀಚೆಗೆ ಜಿಲ್ಲೆಯ ಎಲ್ಲಾ ತಾಲೂಕಿನ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಸಮಾಜದ ಯುವಕರು ಮತ್ತು ಬಾಂಧವ್ಯರು ಸಂಘಟನೆ ಬಲವರ್ಧನೆಗೆ ಮುಂದಾಗುತ್ತೆವೆ.
ಯಲಬುರ್ಗಾ ಪಟ್ಟಣದಲ್ಲಿ ಭೋವಿ ಸಮಾಜಕ್ಕೆ ಸಿದ್ಧರಾಮೇಶ್ವರ ಸಮುದಾಯ ಭವನ ನಿರ್ಮಿಸಲು ಶಾಸಕ ಬಸವರಾಜ ರಾಯರಡ್ಡಿಯವರು ಸಿ,ಎ,ಸೈಟ್ ಕೊಡಿಸಿ ಸಮುದಾಯ ಭವನ ನಿರ್ಮಿಸಿ ಕೊಡಬೇಕೆಂದು ಹೇಳಿದರು
ತಾಲೂಕಿನಾದ್ಯಂತ ಪ್ರತಿನಿತ್ಯ ಕಲ್ಲು ಬಂಡೆ ಹೊಡೆದು ಜೀವನ ಸಾಗಿಸುವ ನಮ್ಮ ಸಮುದಾಯಕ್ಕೆ ಅನ್ಯಾಯ ವಾಗುತ್ತಿದ್ದೆ ಗುಡ್ಡಗಾಡು ಉಳ್ಳವರ ಪಾಲಾಗುತ್ತಿದೆ ನಮ್ಮ ಸಮಾಜ ತುಳಿತಕ್ಕೊಳಗಾಗುತ್ತಿದೆ ಸರಕಾರವು ಸರಳ ನೀತಿ ಅನುಸರಿಸಿ ಗುಡ್ಡಗಳನ್ನು ಭೋವಿ ಸಮಾಜಕ್ಕೆ ದುಡಿಯಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಮ ವಿಭಜನೆಯಾದ ಭೋವಿ ಸಮಾಜವನ್ನು ಒಗ್ಗೂಡಿಸಿ ಭೋವಿ ಸಮಾಜದ ಅಭಿವೃದ್ಧಿಗೆ ಅಭಿವೃದ್ಧಿ ನಿಗಮದಿಂದ ಅನೇಕ ಯೋಜನೆಗಳನ್ನು ಕಡುಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ಇಲ್ಲಿ ಯಾವುದೇ ಫಲಾಪೇಕ್ಷ ವಿಲ್ಲದೆ ನಮ್ಮ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯತಲುಪಿಸುವ ನಿಟ್ಟಿನಲ್ಲಿ ಹೋರಾಟ ಮಾಡುವೆ ನನ್ನ ನಡೆ ಯಾವತ್ತು ಬದಲಾಗುವದಿಲ್ಲ ಯಾವ ದುಷ್ಟ ಶಕ್ತಿಯು ಬಂದರು ಹೆಜ್ಜೆ ಬದಲಾಗುವದಿಲ್ಲ ವೆಂದರು ಭೋವಿ ಸಮಾಜದ ಪ್ರತಿಯೊಬ್ಬರು ಸಮುದಾಯದ ಸಂಘಟನೆಗಾಗಿ ಶಕ್ತಿ ಮೀರಿ ಶ್ರಮಿಸಬೇಕು ನಮ್ಮ ಸಮಾಜದ ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೂಡಿಸುವ ಮೂಲಕ ಮುಖ್ಯ ವಾಹಿನಿಯಗೆ ಬರಬೇಕು ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಗಾಳೆಪ್ಪ ಭೋವಿ, ಯಲಬುರ್ಗಾ ಭೋವಿ ಸಮಾಜದ ತಾಲೂಕು ಅಧ್ಯಕ್ಷ ನಾಗಪ್ಪ ವಡ್ಡರ ಮಾತನಾಡಿ ಭೋವಿ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದೆ ದಿನನಿತ್ಯ ಬಂಡೆಯ ಕಲ್ಲು ವಡಿದು ಜೀವನ ಸಾಗಿಸುವ ನಮ್ಮ ಜನಾಂಗಕ್ಕೆ ಇವತ್ತು ನಮ್ಮ ಸಮಾಜಕ್ಕೆ ಅನ್ಯಾಯ ವಾಗಿದೆ ಗುಡ್ಡಗಳು ಉಳ್ಳವರ ಪಾಲಾಗಿ ಕಸರ್ ಕಡ್ಡಿ. ಮಿಸನ್ ಹಾವಳಿಯಿಂದ ನಮ್ಮದುಡಿಯುವ ಕೈಯಿಗೆ ಕೆಲಸವಾಗಿದೆ ಇದರಿಂದ ನಮ್ಮ ಸಮುದಾಯದ ಜನರು ಜೀವನ ನೆಡಸುವದೇ ಕಷ್ಟಕರವಾಗಿದೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಗಾಳೇಪ್ಪ ಭೋವಿ, ಗೌರವಾಧ್ಯಕ್ಷ ರೇವಣೇಪ್ಪ ಭೋವಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನಮಂತಪ್ಪ ಕೊಳಿಹಾಳ, ಕುಕನೂರು ತಾಲೂಕ ಅಧ್ಯಕ್ಷ ಲಕ್ಷ್ಮಣ ಹನಮಸಾಗರ, ಯಲಬುರ್ಗಾ ತಾಲೂಕ ಅಧ್ಯಕ್ಷ ನಾಗಪ್ಪ ವಡ್ಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಭೋವಿ, ಮುಖಂಡುರುಗಳಾದ ಯಮನೂರಪ್ಪ ಭೋವಿ, ಗುರಪ್ಪ ಭೋವಿ, ಮುತ್ತಣ್ಣ ಭೋವಿ, ಸಂಗಪ್ಪ ಮಡಿಕೇರಿ, ನೀರುಪಾದೇಪ್ಪ ಭೋವಿ, ಮುದಕಪ್ಪ ಬಂಡಿ ವಡ್ಡರ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು
