ರಾಜ್ಯದಲ್ಲಿ ಮಠ ಮಾನ್ಯಗಳು ಭಕ್ತರ ಉದ್ಧಾರಕ್ಕಾಗಿ ಮತ್ತು ಮಕ್ಕಳ ಶಿಕ್ಷಣ ಸಲುವಾಗಿ ಶ್ರಮೀಸುತ್ತಿವೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,14- ಮಾನವನಾಗಿ ಮಾನವೀಯ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಂತರಾಗಿ ಶರಣರಾಗಿ ಮಹಾತ್ಮರಾಗಿ ಹೊದವರು ಇದಕ್ಕೆ ಸಾಕ್ಷಿ ಲಿಂಗೈಕ್ಯ ಶರಣೆ ಶಿವಮ್ಮ ತಾಯಿಯವರು ಲಿಂಗೈಕ್ಯ ನೀಲಕಂಠಯ್ಯ ತಾತನವರು ಎಂದು ಷ. ಬ್ರ. ಶ್ರೀ ಕರಿಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿಮಠ ಕುಷ್ಟಗಿ ಹೇಳಿದರು.
ತಾಲೂಕಿನ ನಿಲೊಗಲ್ ಗ್ರಾಮದ ಹಿರೇಮಠದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು ಎಲ್ಲಿ ಮಠದ ಶಕ್ತಿ ಇರುತ್ತದೆಯೋ ಅಲ್ಲಿ ಜನರ ಮನಸ್ಸಿನಲ್ಲಿ ಭಕ್ತಿಯಾಗಿ ಪರಿವರ್ತನೆಯಾಗುತ್ತದೆ. ಗ್ರಾಮಗಳು ಉದ್ದಾರ ವಾಗಬೇಕಾದರೆ ಸ್ವಾಮಿಗಳು ಸಂಸ್ಕಾರವಂತರಾಗಿರಬೇಕು ಅಂದಾಗ ಗ್ರಾಮವೂ ಮತ್ತು ಗ್ರಾಮದ ಕುಟುಂಬವೂ ಸಹ ಒಳ್ಳೆಯ ಸಂಸ್ಕಾರವಂತರಾಗುತ್ತಾರೆ. ಮಠಗಳು ಅಭಿವೃದ್ಧಿಯಾದರೆ ಶಿಷ್ಯರು ಅಭಿವೃದ್ದಿಯಾಗುತ್ತಾರೆ ಗುರು ಇಲ್ಲದ ಮಠವಿಲ್ಲ ಹಿರಿಯರಿಲ್ಲದ ಮನೆಯಿಲ್ಲ ಎಂಬ ಗಾಧೆ ಮಾತು ನೆನಪಿಸಿದರು.
ದಾನ ಧರ್ಮ ಪರೊಪಕಾರ ಮಾಡಿದಾಗ ಕೈ ಗಳಿಗೆ ಶಕ್ತಿ ಬರುತ್ತದೆ ಮಠ,ಮಂದಿರಗಳು ಉದ್ಧಾರ ವಾಗುತ್ತವೆ ಮಾನವನಾದವನು ನಿಮ್ಮ ಕಿವಿಗಳಿಗೆ ಒಳ್ಳೆಯ ಶರಣರ ವಿಚಾರ ಪ್ರವಚನ ಪೂಣ್ಯಕತೆ ಕೇಳಬೇಕು ಎಂದರು ಇದರಿಂದ ಮನ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಯೋಗ ಗುರು ಹರ್ಷಾನಂದ ಗುರೂಜಿ, ಲಿಂಗನಬಂಡಿ ಮೌನೇಶ್ವರ ಮಠದ ಮಾತೋಶ್ರೀ ಗಂಗಮ್ಮ ತಾಯಿ, ಮಾತೋಶ್ರೀ ಬಸಮ್ಮ ಹಿರೇಮಠ, ಮಾತೊಶ್ರೀ ಈರಮ್ಮ ಹಿರೇಮಠ, ಮುಖಂಡರಾದ ಸಿದ್ಲಿಂಗಪ್ಪ ಕಲಕಬಂಡಿ, ಅಯ್ಯನಗೌಡ ಕೆಂಚಮ್ಮನವರ, ಸಂಗನಗೌಡ ಪೋಲೀಸ್ ಪಾಟೀಲ್, ಯಮನೂರಪ್ಪ ಗದ್ದಿ, ವಿರುಪಯ್ಯ ಸ್ವಾಮಿ, ಭೀಮನಗೌಡ ಕೊಳೂರು, ದೇವೇಂದ್ರಗೌಡ ಮಾಲಿ ಪಾಟೀಲ್, ವೀರನಗೌಡ ಪೋಲೀಸ್ ಪಾಟೀಲ್, ಪ್ರಭುಗೌಡ ಪೋಲೀಸ್ ಪಾಟೀಲ್, ಶರಣಪ್ಪ ನಿಲೋಗಲ್, ಗಾಳೇಪ್ಪ ಓಜನಹಳ್ಳಿ, ಆನಂದ ಈಳಿಗೇರ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು
