WhatsApp Image 2024-02-16 at 1.22.39 PM

ಜಮಾತ್ ಎ ಅಹ್ಲೆ ಸುನ್ನತ್ ಕರ್ನಾಟಕ ಸಂಘಟನೆ ಸಭೆ ದೇಶದಲ್ಲಿ ಮುಸ್ಲಿಂ ನಾಯಕರ ಕೊರತೆ ನಾವು ಸುನ್ನಿ ಹಿಂದುಸ್ತಾನಿ ಮೌಲಾನ ತನ್ವೀರ್ ಹಾಷ್ಮಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,16- ಮೊಹಲ್ಲಾ ಗಲ್ಲಿಯಿಂದ ನವಾ ದೆಹಲಿ ವರೆಗೆ ಮುಸಲ್ಮಾನರ ನಾಯಕರ ಕೊರತೆ ಇದೆ ಮುಸ್ಲಿಂ ಸಮಾಜ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದರು ಯಾರು ಕೇಳುವವರು ಇಲ್ಲದಂತಾಗಿದೆ ಜಮಾತ್ ಎ ಅಹ್ಲೆ ಸುನ್ನತ್ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಮೊಹಮ್ಮದಾಬಾದ್ ಬೀದರ್ ನ ಹಜರತ್ ಸೈಯದ್ ಶಾ ತನ್ವೀರ್ ಹಾಷ್ಮೀ ಪೀರ ಸಾಹೇಬ್ ಅವರು ಕಳವಳ ವ್ಯಕ್ತಪಡಿಸಿದರು.

ಬಳ್ಳಾರಿ ಮಹಾನಗರದ ದಿವಾನ್ ಮಸ್ತಾನ್ ದರ್ಗಾ ಮಸೀದಿ ಬಳಿಯ ರೆಡಿಯನ್ಸ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಜಮಾತ್ ಎ ಅಹ್ಲೆ ಸುನ್ನತ್ ಕರ್ನಾಟಕ ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ ವಾರ್ಷಿಕ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಸರ್ವರನ್ನು ಉದ್ದೇಶಿಸಿ ಮಾತನಾಡುತ್ತಾ ಭಾರತ ಯಾರಪ್ಪನ ಸ್ವತ್ತಲ್ಲ ಇದು ಸರ್ವಧರ್ಮೀಯರ ಆಸ್ತಿ ದೇಶದಲ್ಲಿ ಕೆಲವು ಪಟ್ಟ ಭದ್ರಾ ಶಕ್ತಿಗಳು ಮದರಸ ಹಾಗೂ ಮಸೀದಿಗಳನ್ನು ಗುರಿಯಾಗಿಟ್ಟುಕೊಂಡು ಮುಸ್ಲಿಂ ಸಮುದಾಯಗಳ ವಿರುದ್ಧ ಮಾತನಾಡುತ್ತಾರೆ ಮಸೀದಿ ಹಾಗೂ ಮದರಸ ಶಾಲೆಗಳಲ್ಲಿ ಒಮ್ಮೆ ಬಂದು ನೋಡಲಿ ಇವರಿಗೆ ಇಲ್ಲಿ ಸತ್ಯದ ಅರಿವಾಗುತ್ತದೆ ನಾವುಗಳು ಇಲ್ಲಿ ಶಾಂತಿ ಸೌಹಾರ್ದತೆ ದೇಶಪ್ರೇಮ ಭಾತೃತ್ವ ತ್ಯಾಗ ದೇಶಕ್ಕಾಗಿ ಬಲಿದಾನ ಸೇರಿದಂತೆ ಇತರೆ ಮಾನವೀಯ ಮೌಲ್ಯಗಳ ಹಾಗೂ ದೇಶ ಪ್ರೇಮದ ಪಾಠ ಕಲಿಸಲಾಗುತ್ತದೆ.

ಕೆಲ ಪಟ್ಟ ಭದ್ರಾ ಶಕ್ತಿಗಳು ಈ ದೇಶ ನಮ್ಮದೆಂದು ಬಿಲ್ಡಪ್ ಕೊಡುತ್ತಾರೆ ಆದರೆ ಈ ದೇಶ ಯಾರಪ್ಪನ ಸ್ವತ್ತಲ್ಲ ಇದು ಸರ್ವಧರ್ಮೀಯರ ಆಸ್ತಿಯಾಗಿದೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ವಿವಿಧ ಕೋಮಿನ ದೇಶಪ್ರೇಮಿಗಳು ಹೋರಾಡಿ ಬಲಿದಾನಗಳಾಗಿ ಇದ್ದಾರೆಂದು ವಿರೋಧಿಗಳಿಗೆ ಅವರು ಚಾಟಿ ಬೀಸಿದರು.

ಧರ್ಮ ಗುರುಗಳು ಧಾರ್ಮಿಕ ವಿಚಾರಗಳನ್ನು ವ್ಯಕ್ತಪಡಿಸುವಾಗ ಗಮನವಿಟ್ಟು ಕೇಳಿ ಅದರಂತೆ ನಡೆದುಕೊಂಡಿದ್ದೆ ಯಾದಲ್ಲಿ ನಮ್ಮ ಜೀವನ ಸಫಲವಾಗುತ್ತದೆ ನಮ್ಮ ನಡೆ ನುಡಿ ಹಾಗೂ ಆಚರಣೆಗಳು ಶುದ್ಧವಾಗಿದ್ದರೆ ಅದೇ ನಿಜವಾದ ಸ್ವರ್ಗ ಇಸ್ಲಾಂ ಧರ್ಮ ಶಾಂತಿಯ ಸಂಕೇತ ಇದು ಇತರೆ ಧರ್ಮಗಳನ್ನು ಗೌರವಿಸುತ್ತದೆ ಇದು ಯಾರಿಗೂ ಕೆಡಕು ಬಯಸುವುದಿಲ್ಲ ಇಸ್ಲಾಂ ಧರ್ಮ ಪರೋಪಕಾರಿಯಾಗಿ ಬದುಕುವಂತೆ ತಿಳಿಸುತ್ತದೆ ಅಲ್ಲಾಹನ ರಸುಲರ ಜಗದ್ಗುರುಗಳ ಗುರುಹಿರಿಯರ ಮಹಾತ್ಮರ ಸರ್ವ ವ್ಯಾಪಿ ಖುರಾನ್ ಹೇಳಿದ ಹಾಗೆ ನಿಮ್ಮ ಬದುಕು ನಡೆಸಿ ಆಗ ನೀವು ಅಲ್ಲಾಹನ ಕೃಪೆಗೆ ಪಾತ್ರರಾಗುವಿರಿ ಎಂದು ಅವರು ತಮ್ಮ ಅಮೂಲ್ಯ ಸಂದೇಶಗಳನ್ನು ಸಾರಿದ ಅವರು ದೇಶದಲ್ಲಿ ಒಂದೇ ಸಮುದಾಯವನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಕಿರುಕುಳ ಹಲ್ಲೆಗಳು ನಿರಂತರ ನಡೆಯುತ್ತಿವೆ ಒಂದೇ ಸಮುದಾಯದ ಪ್ರಾರ್ಥನಾ ಸ್ಥಳಗಳನ್ನು ಗುರಿ ಮಾಡಲಾಗುತ್ತಿದೆ ಸಂವಿಧಾನವನ್ನು ಉಲ್ಲಂಘಿಸಲಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ನಾವು ನಮ್ಮ ಜವಾಬ್ದಾರಿಗಳಿಂದ ದೂರವಾಗದೆ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆಗೆ ಸದಾ ಶ್ರಮಿಸಬೇಕು ಎಂದರು.

ದೇಶದಲ್ಲಿ ದ್ವೇಷ ಹರಡಿಸಲಾಗುತ್ತಿದೆ ಆದರೆ ಎಲ್ಲರೂ ದ್ವೇಷ ಹರಿಸುತ್ತಿಲ್ಲ ಕೆಲವರು ಮಾತ್ರ ಈ ಕೃತ್ಯವನ್ನು ಮಾಡುತ್ತಿದ್ದಾರೆ ದ್ವೇಷ ಹರಡಿಸುವುದು ಬಹಳ ದಿನ ನಡೆಯುವುದಿಲ್ಲ ಸಮಾಜದ ಯುವಕರು ಯಾವಾಗಲೂ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬಾರದು ಅನ್ಯ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ನಡೆಯಬೇಕು ಎಂದು ಸಲಹೆ ನೀಡಿದರು.

ಶಾಲೆಗಳು ಈದ್ಗಾ ಖಬರಸ್ಥಾನ ಮಸೀದಿ ಪ್ರತಿಯೊಬ್ಬರು ಸಮಾಜದ ಅಭಿವೃದ್ಧಿಗೆ ಓದುವ ಹವ್ಯಾಸ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ ಸರ್ವ ಕಾಲಕ್ಕೂ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಮತ್ತು ಇಮಾಮ್ ಮೌಜನ್ ಅವರಿಗೆ ವಕ್ಫ್ ಮಂಡಳಿಯಿಂದ ವೇತನ ಹೆಚ್ಚಿಸುವ ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್ ಮತ್ತು ರಹೀಮ್ ಖಾನ್ ಅವರಿಗೆ ಒತ್ತಾಯಿಸಲಾಗಿದೆ ಈ ಉಭಯ ಸಚಿವರು ಹೆಚ್ಚಿಸಲು ಭರವಸೆ ನೀಡಿದ್ದಾರೆ ನಾವು ಸುನ್ನಿ ಹಿಂದುಸ್ತಾನಿ ಎಂದರು.

ಜಮಾತ್ ಎ ಅಹ್ಲೆ ಸುನ್ನತ್ ಕರ್ನಾಟಕ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಫ್ತಿ ಖಾಜಿ ಮಹಮ್ಮದ್ ಅಲಿ ಅವರು ಮಾತನಾಡುತ್ತಾ ಸಂಘಟನೆ ವತಿಯಿಂದ ದೇಶ ಸಂವಿಧಾನ ಮತ್ತು ಮಾನವೀಯತೆಯ ರಕ್ಷಣೆಗಾಗಿ ಹೊಸ ಆಂದೋಲನವನ್ನೇ ಆರಂಭಿಸಲಾಗಿದೆ ಶಿಕ್ಷಣ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಮುದಾಯ ಜನ ಮುಂದೆ ಬರಬೇಕಾಗಿದೆ ಒಗ್ಗಟ್ಟಿನಿಂದ ಮಾತ್ರ ದೇಶದ ಪರಿಸ್ಥಿತಿಯನ್ನು ಬದಲಾಯಿಸಬಹುದಾಗಿದೆ ಮುಸ್ಲಿಂ ಸಮಾಜದ ಬಂಧುಗಳು ಜಮಾತ್ ಗಳಲ್ಲಿ ವಿಂಗಡಣೆಯಾಗಿದೆ ಎಲ್ಲರೂ ಒಗ್ಗಟ್ಟಿನಿಂದ ಬಂದ ಸಮಸ್ಯೆಗಳನ್ನು ಎದುರಿಸುವ ಮೂಲಕ ಬಗೆ ಹರಿಸಿಕೊಳ್ಳಬೇಕು ಎಂದರು.

ಬಗೆಹರಿಸಲು ಸಂಘಟನೆ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಬಳ್ಳಾರಿ ಜಿಲ್ಲೆ ಘಟಕದ ಮುಖಂಡರಲ್ಲಿ ಮನವಿ ಮಾಡಿದರು ನಾವು ಸುನ್ನಿ ಹಿಂದುಸ್ತಾನಿ ಎಂದು ಹೇಳಬೇಕು ಬಳ್ಳಾರಿ ಜಿಲ್ಲೆಯ ಕರ್ನಾಟಕ ಅಹ್ಲೆ ಸುನ್ನತ್ ಜಮಾತಿನ ಸಂಘಟನೆಯ ಮುಖ್ಯಸ್ಥರಾದ ಸೈಯದ್ ಮೋಹಿಯುದ್ದೀನ್ ಖಾದ್ರಿ ಸಾಹೇಬ್, ಖಾಜಿ ಮುಫ್ತಿ ಮೊಹಮ್ಮದ್ ಮೆಹಮೂದ್ ಸಾಹೇಬ್, ಮುಫ್ತಿ ಮೊಹಮ್ಮದ್ ಅಲಿ ಆಶ್ರಫಿ ಸಾಹೇಬ್, ಮುಫ್ತಿ ಹಿದಾಯತ್ ಉಲ್ಲಾ ಅಶ್ರಫಿ ಸಾಹೇಬ್, ಮುಫ್ತಿ ಮುಬೀನ್ ಖಾದ್ರಿ ಸಾಹೇಬ್, ಮುಫ್ತಿ ಮೊಹಮ್ಮದ್ ಶಾಹೀದ್ ಹುಸೈನ್, ಸೈಯದ್ ಜಿಲಾನ್ ಖಾದ್ರಿ, ಹಾಫೀಜ್ ಜೋಹರ್ ಸಾಬ್, ಹಾಜಿ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಸಮೀರ್ ಸೇಟ್ ಅಲ್ಲಾಭಕ್ಷಿ ಉಪಸ್ಥಿತರಿದ್ದರು ಆರಂಭದಲ್ಲಿ ಕುರಾನ್ ಖಿರಾತ್ ನಾತೇ ರಸೂಲ್ ಸಲಾತೋ ಸಲಾಂ ಫಾತೇಹ ಓದಿಕೆ ಸರ್ವರಿಗೂ ಪ್ರಸಾದ ಊಟದ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!