IMG-20240214-WA0187

ಶ್ರೀ ಸಂಗೀತ ಅಕಾಡೆಮಿಯಿಂದ ನಾಳೆ ಬೇಂದ್ರೆ ನಮನ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಬೆಂಗಳೂರು,16 – ಕಳೆದ 11 ವರ್ಷಗಳಿಂದ ಭಾರತೀಯ ಸಂಗೀತ ಹಾಗೂ ಕನ್ನಡ ಗೀತೆಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಶ್ರೀ ಮ್ಯೂಸಿಕ್ ಸಂಸ್ಥೆಯು, ಪ್ರತಿ ವರ್ಷದಂತೆ ಈ ವರ್ಷವೂ ಸಮ್ಮಿಲನ್ ಕಾರ್ಯಕ್ರಮವನ್ನು ಆಯೋಜಿಸಿದೆ. ಕನ್ನಡ ಕವಿ ನಮನ ಸರಣಿಯ 3 ನೇ ಭಾಗವಾಗಿ ಬೇಂದ್ರೆ – ನಮನ ಎಂಬ ವಿಶೇಷ ಗೀತ ಗಾಯನ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದೆ.

ಸತತವಾಗಿ ಒಂದು ತಿಂಗಳಿನಿಂದ ನೂರಾರು ವಿದ್ಯಾರ್ಥಿಗಳಿಗೆ ಕವಿ ಬೇಂದ್ರೆಯವರ ಗೀತೆಗಳನ್ನು ಕಲಿಸಿಕೊಟ್ಟು, ಅವರ ಸಾಹಿತ್ಯವನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು ಎಂಬುದು ಶ್ರೀ ಮ್ಯೂಸಿಕ್ ನ ಉದ್ದೇಶ.

ಫೆ. 17 ರಂದು ಸಂಜೆ 4.30 ಗಂಟೆಗೆ ಬನಶಂಕರಿ 6ನೇ ಹಂತದ ದ ಫೈನರ್ ಸೈಡ್ ಸಭಾಂಗಣದಲ್ಲಿ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಪ್ರಖ್ಯಾತ ನಟ ನಿರ್ದೇಶಕರು ಆದಂತಹ ಶ್ರೀ ಎಸ್. ಎನ್. ಸೇತುರಾಮ್ ರವರು, ಖ್ಯಾತ ಲೇಖಕರು, ಸಾಹಿತಿಗಳು ಆಗಿರುವ, ಡಾ. ಜಿ ಬಿ ಹರೀಶ್ ರವರು, ಜೀವನ ಯೋಗ ಸಂಸ್ಥೆಯ ನಿರ್ದೇಶಕರಾದ ಆಚಾರ್ಯ ಅರುಣ್ ಪ್ರಕಾಶ್ ರವರು, ಮತ್ತು ಕಾಕಾಲ್ ಕೈರುಚಿ ಸಂಸ್ಥೆಗಳ ಸ್ಥಾಪಕರಾದ ಶ್ರೀ ಸತೀಶ್ ಕಾಕಾಲ್ ಮತ್ತು ಶ್ರೀಮತಿ ಛಾಯಾ ಕಾಕಾಲ್ ರವರು ಆಗಮಿಸಲಿದ್ದಾರೆ.

ಇದೆ ಸಂದರ್ಭದಲ್ಲಿ ಕನ್ನಡ ಕೀಲಿಮಣೆಯನ್ನು ತಯಾರಿಸುತ್ತಿರುವ ಸಂಸ್ಥೆಯಾದ ಕ-ಣಾದ ಸಂಸ್ಥೆಯ ನಿರ್ದೇಶಕರಾದ ವಿಜ್ಞಾನಿ ಶ್ರೀ ಗುರುಪ್ರಸಾದ್ ರವರನ್ನು ಸನ್ಮಾನಿಸಲಾಗುತ್ತಿದೆ. ಜೊತೆಗೆ ಬಾಲ ತಬಲಾ ಪ್ರತಿಭೆ ಚಿ. ಪ್ರದ್ಯುಮ್ನ ಕರ್ಪೂರ್ ರವರನ್ನು ಅಭಿನಂದಿಸಲಾಗುತ್ತಿದೆ

Leave a Reply

Your email address will not be published. Required fields are marked *

error: Content is protected !!