WhatsApp Image 2024-02-16 at 6.52.09 PM

15 ವರ್ಷಗಳ ಇತಿಹಾಸದ ನಾಗಲಿಂಗ ಶಿವಯೋಗಿಗಳ ಪುರಾಣ ಮಹಾಮಂಗಳ

ಕರುನಾಡ ಬೆಳಗು ಸುದ್ದಿ

ಕುಕನೂರು,16- ತಾಲೂಕಿನ ಸಿದ್ನೇಕೊಪ್ಪ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪುರಾಣ ಏರ್ಪಡಿಸಿದ್ದು ಶ್ರೀ ಅಜಾತ ಗುರು ನಾಗಲಿಂಗ ಶಿವಯೋಗಿಗಳ ಪುರಾಣ ಮಹಾ ಮಂಗಲೋತ್ಸವವವು ಭಜನೆ ಮತ್ತು ಕುಂಭಮೇಳದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದ ಹುಚ್ಚಿರೇಶ್ವರ ಮಠದಲ್ಲಿ ಶ್ರೀಗಳು ಆಶೀರ್ವಚನಗಳ ಮೂಲಕ ಮಂಗಲ ಹಾಡಿದರು.

ಸತತವಾಗಿ 15 ವರ್ಷಗಳ ಇತಿಹಾಸದ ಪುರಾಣ ಫೆ. 1 ರಂದು ಪ್ರಾರಂಭವಾಗಿ ಇಂದು ಮಹಾ ಮಂಗಲೋತ್ಸವ ಭಜನೆ ಮತ್ತು ಕುಂಭಮೇಳದೊಂದಿಗೆ ವಿಜೃಂಭಣೆಯಿಂದ ಜರುಗಿತು.

108 ಷ.ಬ್ರ. ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪ್ರತಿ ವರ್ಷ ಪುರಾಣ ಪ್ರವಚನಗಳ ಮೂಲಕ ಅನೇಕೆ ಕಾರ್ಯಕ್ರಮಗಳು ಭಕ್ತಿ ಶಕ್ತಿಯಿಂದ ನಡೆಸಿ ಕೊಂಡು ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಮಾನವರು ಮನವಿತೆಯ ಗುಣಗಳನ್ನು ಅಳವಡಿಸಿಕೊಂಡು ಬಾಳಬೇಕು, ರಾಜ ಮಹಾರಾಜರು ಮಣ್ಣನ್ನು ಆಳಿದರೆ ಮಹಾತ್ಮರು, ಸಂತ-ಶರಣರು ಭಕ್ತರ ಮನಸನ್ನು ಆಳಿ ಅವರಲ್ಲಿ ಮಂದಿರ ನಿರ್ಮಾಣ ಮಾಡುವಂತಹ ಸಂಸ್ಕಾರ ನೀಡುತ್ತಾರೆ. ಜೀವನದಲ್ಲಿ ಏನಾದರೂ ಆಗು ಮೊದಲು ಮಾನವನಾಗು ಎಂದು ನುಡಿದರು.

ನಿರಂತರ ದಾಸೋಹ ಮಠ ಸಿದ್ದನಕೊಳ್ಳ ಶಿವುಕುಮಾರ ಶಿವಯೋಗಿಗಳು ಹುಚ್ಚಿರೆಶ್ವರ ಮತ್ತು ನಾಗಲಿಂಗ ತಾತನವರ ಬಗ್ಗೆ ಸೇರಿದಂತ ಭಕ್ತರಿಗೆ ವಿಶೇಷ ಆಶೀರ್ವಚನ ಮತ್ತು ಸ್ವತಃ ತಾವೆ ಸೇವೆ ಮಾಡಿದ  ಭಕ್ತರಿಗೆ ಹಣ ನೀಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮದ ಗುರುಹಿರಿಯರು, ಭಜನಾ ಮಂಡಳಿಯವರು, ಯುವಕರು, ಮಹಿಳೆಯರು, ಸುತ್ತ ಮುತ್ತಲಿನ ಹಳ್ಳಿಯ ಜನರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!